ವರ್ಷದ ನಂತರ ಸವಾಲಿನ ಪಾತ್ರದ ಮೂಲಕ ಬಂದ ದೀಪಿಕಾ

ದೀಪಿಕಾ ಪಡುಕೋಣೆ ಬಾಲಿವುಡ್ ನ ‌ಟಾಪ್ ನಟಿ. ಅನೇಕ ವರ್ಷಗಳಿಂದ ದೀಪಿಕಾ ಬಿ ಟೌನ್ ನಲ್ಲಿ ರಾಣಿಯಂತೆ ಮೆರೆಯುತ್ತಾ ಬಂದಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಧೂಳ್ ಎಬ್ಬಿಸಿದ್ದ ದೀಪಿಕಾ ಪದ್ಮಾವತ್ ಚಿತ್ರದ ನಂತರ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ದೀಪಿಕಾ ಬಣ್ಣ ಹಚ್ಚದೆ ಬರೋಬ್ಬರಿ ಒಂದು ವರ್ಷದ ಮೇಲಾಗಿದೆ. ನವೆಂಬರ್ 14 ರಂದು ನಟ ರಣ್ವೀರ್ ಸಿಂಗ್ ಜೊತೆ ಹಸೆಮಣೆ ಏರಿದ್ದ ಡಿಪ್ಪಿ, ಮದುವೆ ಬಳಿಕ ಮತ್ತೆ ಸಿನಿಮಾದತ್ತ ಮುಖಮಾಡಿದ್ದಾರೆ.

ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ದೀಪಿಕಾ ಈಗ "ಚಪಾಕ್" ಸಿನಿಮಾದ ಮೂಲಕ ಮತ್ತೊಂದು ಸವಾಲಿನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಹೌದು, ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರವಾಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಡಿಪ್ಪಿ ಈಗಾಗಲೆ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.

ಲಕ್ಷ್ಮಿ ಅಗರವಾಲ್ ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಅಧ್ಯಯನಕ್ಕಾಗಿ ಸಾಕಷ್ಟು ವೆಬ್ ಸೈಟ್ ಗಳ ಮೊರೆ ಹೋಗಿದ್ದಾರೆ. ಅಷ್ಟೆಯಲ್ಲ ಖುದ್ದು ಲಕ್ಷ್ಮಿ ಅವರನ್ನೇ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

Bollywood actress deepika padukone is back to work

ಸವಾಲಿನ ಪಾತ್ರ ಅಂತ ಬಂದಾಗ ದೀಪಿಕಾ ಸಿದ್ದತೆ ಜೋರಾಗಿರುತ್ತೆ. ಅಂದಹಾಗೆ ಚಪಾಕ್ ನಿರ್ದೇಶಕಿ ಮೇಘನಾ ಗುಲ್ಜಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರವಿದು. "ತಲ್ವರ್", "ರಾಝಿ" ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮೇಘನಾ ಈಗ "ಚಪಾಕ್" ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ಮುಂದಿನ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು ದೀಪಿಕಾ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

More from Filmibeat

English summary
Bollywood actress deepika padukone is back to work. Deepika will start the shooting for her next project Chhapaak.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X