For Quick Alerts
  ALLOW NOTIFICATIONS  
  For Daily Alerts

  ಮತ್ತೆ ಹಾಲಿವುಡ್‌ಗೆ ಹಾರಿದ ನಟಿ ದೀಪಿಕಾ ಪಡುಕೋಣೆ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತೆ ಹಾಲಿವುಡ್ ಕಡೆ ಮುಖ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್ ಜೊತೆ XXX: ರಿಟರ್ನ್ ಆಫ್ ಕ್ಸಾಂಡರ್ ಕೇಜ್ ನಲ್ಲಿ ನಟಿಸಿದ್ದ ದೀಪಿಕಾ ಬಳಿಕ ಮತ್ತೆ ಹಾಲಿವುಡ್ ಕಡೆ ತಿರುಗಿ ನೋಡಿರಲಿಲ್ಲ. ಇದೀಗ ಮತ್ತೊಂದು ಸಿನಿಮಾ ಮೂಲಕ ರಣ್ವೀರ್ ಪತ್ನಿ ಹಾಲಿವುಡ್‌ಗೆ ಹಾರಿದ್ದಾರೆ.

  ಈ ಬಾರಿ ದೀಪಿಕಾ ಕೇವಲ ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ಎಂಟ್ರಿ ಕೊಡುತ್ತಿರುವುದು ವಿಶೇಷ. ನಟನೆ ಜೊತೆಗೆ ದೀಪಿಕಾ ಹಾಲಿವುಡ್ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದೊಂದು ಕ್ರಾಸ್ ಕಲ್ಚರಲ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ ಎನ್ನಲಾಗುತ್ತಿದೆ.

  ಕಿರುತೆರೆಯಲ್ಲಿ ಒಂದಾಗುತ್ತಿದ್ದಾರೆ ದೀಪಿಕಾ ಪಡುಕೋಣೆ-ಅಮಿತಾಬ್ ಬಚ್ಚನ್ಕಿರುತೆರೆಯಲ್ಲಿ ಒಂದಾಗುತ್ತಿದ್ದಾರೆ ದೀಪಿಕಾ ಪಡುಕೋಣೆ-ಅಮಿತಾಬ್ ಬಚ್ಚನ್

  ಈ ಬಗ್ಗೆ ಮಾಹಿತಿ ನೀಡಿರುವ ನಟಿ ದೀಪಿಕಾ, "ನಾನು ಎಸ್ ಟಿ ಎಕ್ಸ್ ಫಿಲ್ಮ್ಸ್ ಮತ್ತು ಟೆಂಪಲ್ ಹಿಲ್ ಪ್ರೊಡಕ್ಷನ್ಸ್ ನೊಂದಿಗೆ ಪಾಲುದಾರಿಕೆ ಹೊಂದಿರುವುದು ತುಂಬಾ ಸಂತೋಷವಾಗಿದೆ. ಜಗತ್ತಿಗೆ ಅದ್ಭುತವಾದ ಕ್ರಾಸ್ ಕಲ್ಚರಲ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನು ತರುತ್ತಿದ್ದೇವೆ" ಎಂದು ಹೇಳಿದ್ದಾರೆ.

  ನಟಿ ದೀಪಿಕಾ ಪಡುಕೋಣೆ 2020ರಲ್ಲಿ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟರು. ತನ್ನ ನಿರ್ಮಾಣದಲ್ಲಿ ಮೂಡಿಬಂದಿರುವ ಮೊದಲ ಸಿನಿಮಾ ಚಪಾಕ್. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ತಾಯಿಯಾಗುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸುದ್ದಿಯಲ್ಲಿದ್ದರು. ದೀಪಿಕಾ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಇತ್ತೀಚಿಗಷ್ಟೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ದಂಪತಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇಬ್ಬರು ಆಸ್ಪತ್ರೆಯಿಂದ ಹೊರ ಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ದಿಪೀಕಾ ಗರ್ಭಿಣಿನಾ ಎನ್ನುವ ಅನುಮಾನ ಮೂಡಿಸಿತ್ತು. ಅನೇಕರು ಕಾಮೆಂಟ್ ಮಾಡಿ ದೀಪಿಕಾ ಗರ್ಭಿಣಿ ಆಗಿದ್ದಾರ ಎನ್ನುವ ಕಾಮೆಂಟ್ ಮಾಡಿದ್ದರು. ಆದರೆ ರಣ್ವೀರ್ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

  ಇದೀಗ ಮತ್ತೆಸಿನಿಮಾ ಅನೌನ್ಸ್ ಮಾಡುವ ಮೂಲಕ ಹರಿದಾಡುತ್ತಿದ್ದ ಸುದ್ದಿ ಸುಳ್ಳು ಎನ್ನುವುದನ್ನು ಗೊತ್ತಾಗಿದೆ. ಇನ್ನು ದೀಪಿಕಾ ಪಡುಕೋಣೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 83 ಸಿನಿಮಾ ಬಿಡುಗಡೆ ಕಾಯುತ್ತಿದ್ದಾರೆ. ಭಾರತ ಮೊದಲ ಬಾರಿಗೆ ವಿಶ್ವಕಪ್ ಕ್ಷಣವನ್ನು ಗೆದ್ದ ಈ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ದೀಪಿಕಾ, ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

  ಈ ಸಿನಿಮಾ ಜೊತೆಗೆ ಶಕುನ್ ಬಾತ್ರಾ ನಿರ್ದೇಶನದ ಮುಂದಿನ ಸಿನಿಮಾದಲ್ಲೂ ದೀಪಿಕಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ ಮತ್ತು ಸಿದ್ಧಾರ್ಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಬಿಡುಗಡೆ ಕಾಯುತ್ತಿದೆ ಇಡಿ ತಂಡ. ಇದೆಲ್ಲದರ ಜೊತೆಗೆ ದೀಪಿಕಾ ಮತ್ತೆ ದಕ್ಷಿಣ ಭಾರತೀಯ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ಪ್ರಭಾಸ್ ನಟನೆಯ ಇನ್ನು ಹೆಸರಿಡದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Bollywood Actress Deepika Padukone returns to Hollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X