For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಿ ಒಂದೂವರೆ ತಿಂಗಳಲ್ಲೇ ಗುಡ್ ನ್ಯೂಸ್ ನೀಡಿದ ನಟಿ ದಿಯಾ ಮಿರ್ಜಾ

  |

  ಬಾಲಿವುಡ್ ನಟಿ ದಿಯಾ ಮಿರ್ಜಾ ದಂಪತಿ ಮನೆಗೆ ಹೊಸ ಸದಸ್ಯನನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ದಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದೂವರೆ ತಿಂಗಳಲ್ಲೇ ತಾಯಿಯಾಗುತ್ತಿರುವ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ದಿಯಾ ಫೆಬ್ರವರಿ 2021, 15ರಂದು ಉದ್ಯಮಿ ವೈಭವ್ ರೇಖಿ ಜೊತೆ ಮುಂಬೈನಲ್ಲಿ ಹಸೆಮಣೆ ಏರಿದ್ದರು. ದಿಯಾಗೆ ಇದು ಎರಡನೇ ಮದುವೆ. ಸರಳವಾಗಿ ನೆರವೇರಿದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು.

  ಫೋಟೋ ವೈರಲ್: ನಟಿ ದಿಯಾ ಮಿರ್ಜಾ ಮತ್ತು ವೈಭವ್ ಮದುವೆ ನೆರವೇರಿಸಿದ ಮಹಿಳಾ ಅರ್ಚಕರು

  ದಿಯಾ ಮಿರ್ಜಾ ವೈಭವ್ ಜೊತೆ ಮದುವೆಯಾಗುವ ಮೊದಲು ತಮ್ಮ ಬ್ಯುಸಿನೆಸ್ ಪಾರ್ಟನ್ ಆಗಿದ್ದ ಸಾಹಿಲ್ ಸಂಘಾ ಅವರನ್ನು ಮದುವೆಯಾಗಿದ್ದರು. ಆದರೆ 2019 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರ ಆದರು. ಬಳಿಕ ದಿಯಾ ವೈಭವ್ ರೇಖಿಯನ್ನು ವರಿಸಿದ್ದಾರೆ.

  ಹಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ದಿಯಾ ಸದ್ಯ ಸಹನಟಿಯಾಗಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಿಯಾ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ದಾವಣಗೆರೆಯಲ್ಲಿ ಯುವರತ್ನ ನೋಡಲು ನೂಕುನುಗ್ಗಲು:ಪೊಲೀಸರಿಂದ ಲಾಠಿ ಚಾರ್ಜ್ | Filmibeat Kannada

  ಮಾಲ್ಡೀವ್ಸ್‌ನಲ್ಲಿ ರಜೆಯನ್ನು ಕಳೆಯುತ್ತಿದ್ದ ದಿಯಾ ದಂಪತಿ ಮುಂಬೈಗೆ ವಾಪಸ್ ಆಗುತ್ತಿದ್ದಂತೆ ತಾಯಿಯಾಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಸದ ಸುದ್ದಿ ಹಂಚಿಕೊಂಡು ಫೋಟೋ ಶೇರ್ ಮಾಡಿರುವ ದಿಯಾಗೆ ಬಾಲಿವುಡ್ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.

  English summary
  Bollywood actress Dia Mirza announces pregnancy, expecting first child with husband Vaibhav Rekhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X