twitter
    For Quick Alerts
    ALLOW NOTIFICATIONS  
    For Daily Alerts

    ಸರಿಯಾದ ಸಮಯಕ್ಕೆ ಟೇಲರ್ ಬ್ಲೌಸ್ ಕೊಡಲಿಲ್ಲ ಅಂದ್ರೆ ಹೀಗೇ ಆಗೋದು.!

    |

    ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲಾ ತಾರೆಯರು ತಮ್ಮ ಬಂಧು-ಬಳಗ, ಸ್ನೇಹಿತರ ಜೊತೆಗೆ ಸಿಹಿ ತಿಂದು, ಪಟಾಕಿ ಸಿಡಿಸಿ ಬೆಳಕಿನ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದರು.

    ಆದರೆ, ತಮ್ಮ ಅಭಿಮಾನಿಗಳಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯ ಕೋರಲು ಹೋಗಿ ಬಾಲಿವುಡ್ ನಟಿ ದಿಶಾ ಪಟಾನಿ ಮಾತ್ರ ಎಡವಟ್ಟು ಮಾಡಿಕೊಂಡಿದ್ದಾರೆ.

    500 ರೂಪಾಯಿ ಹಿಡಿದು ಮುಂಬೈಗೆ ಬಂದ ಈ ಬೊಂಬೆ ಇಂದು ಬಾಲಿವುಡ್ ಬಣ್ಣದ ಚಿಟ್ಟೆ!500 ರೂಪಾಯಿ ಹಿಡಿದು ಮುಂಬೈಗೆ ಬಂದ ಈ ಬೊಂಬೆ ಇಂದು ಬಾಲಿವುಡ್ ಬಣ್ಣದ ಚಿಟ್ಟೆ!

    ಬಿಸ್ಕೆಟ್ ಬಣ್ಣದ ಲೆಹಂಗಾ ಧರಿಸಿದ್ದ ದಿಶಾ ಪಟಾನಿ, ಅದಕ್ಕೆ ಮ್ಯಾಚ್ ಆಗುವ ಮೇಲುಡುಪು ಧರಿಸಿದೇ ಸ್ಪೋರ್ಟ್ಸ್ ಬ್ರಾ ಧರಿಸಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದರು. ಸಾಲದಕ್ಕೆ ಇದೇ ಫೋಟೋನ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶೇರ್ ಮಾಡಿದ್ದರು.

    Bollywood Actress Disha Patani gets trolled for her Diwali Picture

    ದಿಶಾ ಪಟಾನಿಯ ಈ ವಿಚಿತ್ರ ಫ್ಯಾಶನ್ ಸೆನ್ಸ್ ಕಂಡು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ''ದೀಪಾವಳಿ ದಿನ ಸಾಂಪ್ರದಾಯಿಕ ಉಡುಗೆ ತೊಡಬೇಕು ಎಂದುಕೊಂಡಿದ್ದಾಗ, ಸರಿಯಾದ ಸಮಯಕ್ಕೆ ಟೇಲರ್ ಬ್ಲೌಸ್ ಕೊಡಲಿಲ್ಲ ಅಂದ್ರೆ ಹೀಗೇ ಆಗೋದು'' ಎಂದು ನೆಟ್ಟಿಗರು ದಿಶಾ ಪಟಾನಿಯನ್ನ ಆಡಿಕೊಂಡು ನಕ್ಕಿದ್ದಾರೆ.

    ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಟೈಗರ್ ಶ್ರಾಫ್! ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಟೈಗರ್ ಶ್ರಾಫ್!

    ಇನ್ನೂ ಕೆಲವರು ''ದಿಶಾ ಪಟಾನಿ ಬ್ಲೌಸ್ ಹಾಕೋದನ್ನೇ ಮರೆತು ಬಿಟ್ಟಿದ್ದಾರೆ'' ಅಂತೆಲ್ಲಾ ಕಾಮೆಂಟ್ ಮಾಡಿದ್ದರು. ತಮ್ಮ ಪೋಸ್ಟ್ ಗೆ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾದ ಮೇಲೆ ಎಲ್ಲಾ ಕಾಮೆಂಟ್ ಗಳನ್ನು ಡಿಲೀಟ್ ಮಾಡಿ ಬ್ಲಾಕ್ ಮಾಡಿದ್ದಾರೆ ನಟಿ ದಿಶಾ ಪಟಾನಿ.

    ಅಷ್ಟಕ್ಕೂ, ದಿಶಾ ಪಟಾನಿ ಈ ತರಹ ಉಡುಗೆ ತೊಟ್ಟಿದ್ದು ಯಾಕೆ ಅನ್ನೋದು ನಮಗಂತೂ ಗೊತ್ತಿಲ್ಲ. ಸದ್ಯಕ್ಕೆ ಸಲ್ಮಾನ್ ಖಾನ್ ಜೊತೆಗೆ 'ಭಾರತ್' ಚಿತ್ರದಲ್ಲಿ ದಿಶಾ ಪಟಾನಿ ಅಭಿನಯಿಸುತ್ತಿದ್ದಾರೆ.

    English summary
    Bollywood Actress Disha Patani gets trolled for her Diwali Picture.
    Friday, November 9, 2018, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X