ಭಾರತದ ಪರಿಸ್ಥಿತಿ ಸರಿಯಿಲ್ಲ ವಾಪಸ್ ಬಾ ಎಂದ ಪೋಷಕರಿಗೆ ನಟಿ ಜಾಕ್ವೆಲಿನ್ ಹೇಳಿದ್ದೇನು?

ಶ್ರೀಲಂಕಾ ಮೂಲದ ಬಾಲಿವುಡ್ ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ. ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ಜಾಕ್ವೆಲಿನ್ ಹೆಚ್ಚಾಗಿ ಭಾರತದಲ್ಲೇ ನೆಲೆಸಿರುತ್ತಾರೆ. ಸದ್ಯ ಭಾರತದಲ್ಲಿ ಉಂಟಾಗಿರುವ ಕೊರೊನಾ ಭೀಕರ ಪರಿಸ್ಥಿತಿಯಿಂದ ಜಾಕ್ವೆಲಿನ್ ಪೋಷಕರು ಆತಂಕಕ್ಕೊಳಗಾಗಿದ್ದಾರಂತೆ. ಅಲ್ಲದೆ ಮಗಳನ್ನು ವಾಪಸ್ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ.

ಜಾಕ್ವೆಲಿನ್ ಪೋಷಕರು ಸದ್ಯ ಬಹ್ರೇನ್ ನಲ್ಲಿದ್ದಾರೆ. ಸಂಬಂಧಿಕರು ಮತ್ತು ಸ್ನೇಹಿತರೆಲ್ಲ ಶ್ರೀಲಂಕಾದಲ್ಲಿದ್ದಾರೆ. ಅವರಿಗೆಲ್ಲ ಭಾರತದಲ್ಲಿರುವ ಜಾಕ್ವಿಲಿನ್ ಸುರಕ್ಷತೆ ಬಗ್ಗೆಯೇ ದೊಡ್ಡ ಚಿಂತೆಯಾಗಿದೆಯಂತೆ. ಈ ಬಗ್ಗೆ ನಟಿ ಜಾಕ್ವೆಲಿನ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ವಾಪಸ್ ಕರೆಯುತ್ತಿರುವ ಸಂಬಂಧಿಕರೆಲ್ಲರಿಗೂ ತಾನು ಭಾರತದಲ್ಲೇ ಇರಲು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ಭಾರತದ ಮೇಲಿನ ಪ್ರೀತಿ, ಅಭಿಮಾನ ತೋರಿದ್ದಾರೆ.

'ಭಾರತದ ಸ್ಥಿತಿ ನೋಡಿ ಶ್ರೀಲಂಕಾದಲ್ಲಿರುವ ನನ್ನ ಸ್ನೇಹಿತರು ಮತ್ತು ಬಹ್ರೇನ್ ನಲ್ಲಿರುವ ನನ್ನ ಪೋಷಕರು ಭಯಭೀತರಾಗಿದ್ದಾರೆ. ನಾನು ಅವರೊಂದಿಗೆ ವಾಸಿಸಬೇಕೆಂದು ಅವರು ಅವರ ಆಸೆಯಾಗಿದೆ. ಶ್ರೀಲಂಕಾದಲ್ಲಿರುವ ನನ್ನ ಚಿಕ್ಕಪ್ಪ ಮತ್ತು ಸೋದರ ಸಂಬಂಧಿಗಳು ಸಹ ವಾಪಸ್ ಬರುವಂತೆ ಹೇಳುತ್ತಿದ್ದಾರೆ' ಎಂದಿದ್ದಾರೆ.

Bollywood Actress Jacqueline Fernandez says parents wants to movie to Bahrain

'ನಾನು ಇಲ್ಲೇ ಇರುತ್ತೇನೆ. ನಾನು ಮಾಡುತ್ತಿರುವ ಕೆಲಸ ಮುಂದುವರೆಸುತ್ತೇನೆ' ಎಂದು ಹೇಳಿದ್ದಾರೆ. ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗಿರುವ ಜಾಕ್ವೆಲಿನ್ ಕಳೆದ ವರ್ಷ ಕೊರೊನಾ ಲಾಕ್ ಡೌನ್ ಸಮಯದಲ್ಲೂ ಭಾರತದಲ್ಲೇ ಇದ್ದರು. ಸಲ್ಮಾನ್ ಖಾನ್ ಜೊತೆ ತೋಟದ ಮನೆಯಲ್ಲಿ ಸಮಯ ಕಳೆದಿದ್ದರು. ಅಲ್ಲದೆ ಸಲ್ಮಾನ್ ಖಾನ್ ತಂಡದ ಜೊತೆ ಸೇರಿಕೊಂಡು ಕಷ್ಟದಲ್ಲಿರೋರಿಗೆ ಅಗತ್ಯ ವಸ್ತು ವಿತರಣೆ ಮಾಡಿದ್ದರು.

Recommended Video

Prema ಅವರ ಬದುಕಿನಲ್ಲಿ ಈಗ ಏನು ನಡೆಯುತ್ತಿದೆ | Filmibeat Kannada

ಜಾಕ್ವೆಲಿನ್ ಸದ್ಯ ಬಹುನಿರೀಕ್ಷೆಯ ರಾಮ್ ಸೇತು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಗೆ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇದಲ್ಲದೆ ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆಯಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ನಿರ್ದೇಶಕ ರೋಹಿತ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸರ್ಕಸ್ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ.

More from Filmibeat

English summary
Bollywood Actress Jacqueline Fernandez says parents wants to movie to Bahrain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X