ಅಮ್ಮನಿಗೆ ಹುಟ್ಟುಹಬ್ಬದ ಶುಭಕೋರಿ ಭಾವುಕರಾದ ಜಾಹ್ನವಿ ಕಪೂರ್

ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿ ಅವರ 56ನೇ ಹುಟ್ಟುಹಬ್ಬ. ಇಂದು ಶ್ರೀದೇವಿ ನಮ್ಮೊಂದೆಗೆ ಇಲ್ಲದ್ದಿದ್ದರು ಸಿನಿಮಾಗಳ ಮೂಲಕ ಮತ್ತು ಅವರ ನೆನಪುಗಳು ಅಭಿಮಾನಿಗಳಲ್ಲಿ ಇನ್ನು ಹಚ್ಚ ಹಸಿರಾಗೆ ಇದೆ. ಕಳೆದ ವರ್ಷ ಇಹಲೋಕ ತ್ಯಜಿಸಿದ ಶ್ರೀದೇವಿ ಸುಂದರ ಬದುಕಿಗೆ ದುರಂತ ಅಂತ್ಯ ಹಾಡಿದ್ದರು.

ಇದೆಲ್ಲ ಈಗ ಇತಿಹಾಸ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಮಗಳು ಜಾಹ್ನವಿ ಕಪೂರ್ ಅಮ್ಮನಿಗೆ ವಿಶ್ ಮಾಡಿ ಭಾವುಕರಾಗಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಅಮ್ಮ, ಐ ಲವ್ ಯು ಅಮ್ಮ" ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿ ಅಮ್ಮನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಮಗಳು ಜಾಹ್ನವಿ ಜೊತೆಗೆ ಶ್ರೀದೇವಿ ಪತಿ ಬೋನಿ ಕಪೂರ್ ಸಹ ಪ್ರೀತಿಯ ಪತ್ನಿಗೆ ಶುಭಕೋರಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಜಾನ್. ನನ್ನ ಜೀವನದ ಪ್ರತಿ ಕ್ಷಣದಲ್ಲೂ ನಿನ್ನನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನಿ. ನೀವು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತೀರಿ" ಎಂದು ಪ್ರೀತಿಯ ಪತ್ನಿಗೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

Bollywood Actress Janhvi Kapoor And Boney Kapoor Birthday Wish To Sridevi Kapoor

ಜೊತೆಗೆ ಅನೀಲ್ ಕಪೂರ್ ಮತ್ತು ಅನೀಲ್ ಕಪೂರ್ ಪತ್ನಿ ಸೇರಿದಂತೆ ಇಡೀ ಕುಟುಂಬ ಶ್ರೀದೇವಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಜಾಹ್ನವಿ ಅಮ್ಮನ ಬಗ್ಗೆ ಮಾಡಿರುವ ಪೋಸ್ಟ್ ಗೆ ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರ ಮತ್ತು ಮನೀಶ್ ಮಲ್ಹೋತ್ರ ಸೇರಿದಂತೆ ಅನೇಕರು ಹಾರ್ಟ್ ಇಮೋಜಿಯನ್ನು ಕಳುಹಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ 2018 ಫೆಬ್ರವರಿ 24ರಂದು ಸಂಬಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಅಲ್ಲೆ ತಂಗಿದ್ದ ಜುಮೇರಾ ಎಮಿರೇಟ್ಸ್ ಟವರ್ಸ್ ಹೋಟೇಲ್ ರೂಮ್ ನ ಬಾತ್ ಟಬ್ ನಲ್ಲಿ ಮುಳುಗಿ ಸಾವನಪ್ಪಿದ್ದರು. ಶ್ರೀದೇವಿ ಸಾವು ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿತ್ತು. ನಿಗೂಢ ಸಾವು ಎಂದು ಅನುಮಾನ ಹುಟ್ಟುಹಾಕಿತ್ತು. ಆದ್ರೆ ಯಾವುದಕ್ಕು ಉತ್ತರ ಸಿಕ್ಕಿರಲಿಲ್ಲ. ಶ್ರೀದೇವಿ ಸಾವು ಆಕಸ್ಮಿಕ ಯಾವುದೆ ಅಪರಾಧದ ಸಂಚು ಇಲ್ಲ ಎಂದು ಕೇಸ್ ಕ್ಲೋಸ್ ಆಗಿದೆ.

More from Filmibeat

English summary
Bollywood actress Janhvi Kapoor and Boney Kapoor birthday wish to Sridevi Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X