ಅನಂತ್ ಅಂಬಾನಿ ಮದ್ವೆ ಬಳಿಕ ದಿಢೀರ್​ ಆಸ್ಪತ್ರೆಗೆ ದಾಖಲಾದ ಜಾಹ್ನವಿ ಕಪೂರ್...!

ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅಕಾಲಿಕ ಮರಣಕ್ಕೀಡಾದ ಮೇಲೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು ಅವರ ಪುತ್ರಿ ಜಾಹ್ನವಿ ಕಪೂರ್. ಮೊದಲ ಸಿನಿಮಾದಲ್ಲಿಯೇ ಅನೇಕರನ್ನು ಆಯಸ್ಕಾಂತದಂತೆ ಸೆಳೆದು, ಒಂದಾದ ಮೇಲೊಂದು ಸಿನಿಮಾಗಳನ್ನು ಮಾಡುತ್ತಾನೇ ಬರುತ್ತಿರುವ ಜಾಹ್ನವಿ ಕಪೂರ್ ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೌದು.. ಮೊನ್ನೆ ಮೊನ್ನೆಯಷ್ಟೇ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಜಾಹ್ನವಿ ಕಪೂರ್ ಕಣ್ಮನ ಸೆಳೆದಿದ್ದರು. ಗೋಲ್ಡನ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ್ದರು. ಆ ನಂತರ ಅದ್ಧೂರಿ ಮದುವೆಯನ್ನು ಮುಗಿಸಿಕೊಂಡು ಜಾಹ್ನವಿ ಕಪೂರ್ ಚೆನ್ನೈಗೆ ತೆರಳಿದ್ದರು. ಇಲ್ಲಿಯೇ.. ಜಾಹ್ನವಿ ಕಪೂರ್ ಅವರ ಆರೋಗ್ಯ ಕೈ ಕೊಟ್ಟಿದೆ.

Bollywood Actress Janhvi Kapoor hospitalised due to severe food poisoning

ಚೆನ್ನೈನಲ್ಲಿ ಜಾಹ್ನವಿ ಕಪೂರ್ ಸೀ ಫುಡ್​ ಸೇವಿಸಿದ್ದಾರೆ ಎನ್ನಲಾಗಿದೆ. ಅದರಿಂದಲೇ ಜಾನ್ವಿ ಕಪೂರ್​ ಅವರಿಗೆ ಫುಡ್​ ಪಾಯ್ಸನ್​ ಆಗಿದೆ. ಇನ್ನೂ ಅನಾರೋಗ್ಯದಿಂದ ಚೆನ್ನೈ ನಿವಾಸದಲ್ಲಿ ಇರುವಾಗಲೇ ಅವರು ಕುಸಿದು ಬಿದ್ದರು ಎನ್ನುವ ಸುದ್ದಿಯೂ ಇದೆ. ಸದ್ಯಕ್ಕೆ ಜಾಹ್ನವಿ ಕಪೂರ್ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ನಿಜಾ ಎಂದು ಹೇಳಿರುವ ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ ಇನ್ನೊಂದೆರಡು ದಿನದಲ್ಲಿ ಆಸ್ಪತ್ರೆಯಿಂದ ಜಾಹ್ನವಿ ಕಪೂರ್ ಅವರನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.

ಇನ್ನೂ ಸಹಜವಾಗಿ ತಮ್ಮ ನೆಚ್ಚಿನ ನಾಯಕಿ ಆಸ್ಪತ್ರೆಗೆ ದಾಖಲಾದ ಸುದ್ದಿಯನ್ನೂ ಕೇಳಿ ಇವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಬೇಗ ಗುಣಮುಖರಾಗಿ ಬನ್ನಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಹರಸಿ ಹಾರೈಸುತ್ತಿದ್ದಾರೆ.

bollywood-actress-janhvi-kapoor-hospitalised-due-to-severe-food-poisoning

ಅಂದ್ಹಾಗೇ ಜಾಹ್ನವಿ ಕಪೂರ್ ಸದ್ಯಕ್ಕೆ 'ಉಲಜ್'ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇನ್ನೇನು ಈ ಆಗಸ್ಟ್ 02ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ಗುಲ್ಶನ್ ದೇವಯ್ಯ, ರೋಷನ್ ಮ್ಯಾಥ್ಯೂ, ರಾಜೇಶ್ ತೈಲಂಗ್ ಮತ್ತು ಆದಿಲ್ ಹುಸೇನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನೂ.. ಜಾಹ್ನವಿ ಕಪೂರ್ ಈಗ ಕೇವಲ ಬಾಲಿವುಡ್ ನಟಿ ಮಾತ್ರ ಅಲ್ಲ ಸೌತ್ ಇಂಡಸ್ಟ್ರೀಯ ಸುಂದರಿಯೂ ಹೌದು. 'ದೇವರ' ಚಿತ್ರದ ಮೂಲಕ ದಕ್ಷಿಣಕ್ಕೆ ಬಂದ ಜಾಹ್ನವಿ ಈ ಚಿತ್ರದಲ್ಲಿ ಜ್ಯೂ.ಎನ್.ಟಿ.ಆರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X