ಶ್ರೀದೇವಿ ಪುತ್ರಿಯ ಸ್ಟನ್ನಿಂಗ್ ಲುಕ್ ಗೆ ಬಾಲಿವುಡ್ ಮಂದಿ ಫಿದಾ
Recommended Video
ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಹೊಸ ಅವತಾರಕ್ಕೆ ಇಡೀ ಬಾಲಿವುಡ್ ಫಿದಾ ಆಗಿದೆ. ಇತ್ತೀಚಿಗೆ ಜಾನ್ಹವಿ ಕಪೂರ್ ಮ್ಯಾಗಜಿನ್ ಒಂದಕ್ಕೆ ಫೋಟೋಶೂಟ್ ಮಾಡಿಸಿದ್ದಾರೆ. ವಿಭಿನ್ನ ಫೋಟೋಶೂಟ್ ನಲ್ಲಿ ಧಡಕ್ ಸುಂದರಿ ಕ್ಯಾಮರಾಗೆ ಪೋಸ್ ಕೊಟ್ಟಿರುವ ಪರಿಗೆ ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್ ಮಂದಿ ಕೂಡ ಬೆರಗಾಗಿದ್ದಾರೆ.
ಸಖತ್ ಗ್ಲಾಮ್ ಆಗಿ ಕಾಣಿಸಿಕೊಂಡಿರುವ ಜಾನ್ಹವಿ ಕಾಸ್ಟ್ಯೂಮ್ ಮತ್ತು ಪೋಸ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತಿದೆ. ತರಹೇವಾರಿ ಪೋಸ್ ನಲ್ಲಿ ಮಿಂಚಿರುವ ಜಾನ್ಹವಿ ಲುಕ್ ಗೆ ಬಾಲಿವುಡ್ ನ ಅನೇಕ ಸ್ಟಾರ್ ಲೈಕ್ ಒತ್ತಿ ಕಮೆಂಟ್ ಮಾಡುತ್ತಿದ್ದಾರೆ. ಧಡಕ್ ಸಿನಿಮಾದಲ್ಲಿ ಸ್ವಲ್ಪ ದಪ್ಪಗೆ ಕಾಣುತ್ತಿದ್ದ ಜಾನ್ಹವಿ, ಈಗ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಜಿಮ್ ನಲ್ಲಿ ಬೆವರಿಳಿಸುವ ಜಾನ್ಹವಿ ಈಗ ತೆಳ್ಳಗೆ ಆಗಿದ್ದಾರೆ.

ಧಡಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಜಾನ್ಹವಿ ಈಗ ಮೂರು ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಿಲೀಸ್ ಆದ ಒಂದೇ ಸಿನಿಮಾ ಮೂಲಕವೆ ಅಭಿಮಾನಿಗಳ ಮನ ಗೆದ್ದಿರುವ ಜಾನ್ಹವಿ, ಬಾಲಿವುಡ್ ನ ಬರವಸೆಯ ನಾಯಕಿಯಾಗಿದ್ದಾರೆ.

ಸದ್ಯ ಜಾನ್ಹವಿ ಗುಂಜಾನ್ ಸಕ್ಸೇನಾ, ರೂಹಿ ಅಫ್ಜಾ ಮತ್ತು ಗೋಸ್ಟ್ ಸ್ಟೋರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಗುಂಜಾನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಚಿತ್ರದ ಫಸ್ಟ್ ಲುಕ್ ಈಗಾಗಲೆ ರಿಲೀಸ್ ಆಗಿದೆ. ಈ ಚಿತ್ರವೂ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯ ಹೊಸ ಅವತಾರದಲ್ಲಿ ಮಿಂಚುತ್ತಿರುವ ಜಾನ್ಹವಿ, ಮುಂದಿನ ಸಿನಿಮಾಗಳು ಹೇಗಿರಲಿವೆ ಎನ್ನುವುದು ಅಭಿಮಾನಿಗಳ ಕುತೂಹಲ.


Click it and Unblock the Notifications











