ಮೊದಲ ಬಾಯ್‌ಫ್ರೆಂಡ್ ಜೊತೆ ನಟಿ ಜಾನ್ವಿ ಕಪೂರ್ ಬ್ರೇಕಪ್ ಮಾಡಿಕೊಂಡಿದ್ದು ಏಕೆ ಗೊತ್ತೆ?
ಬಾಲಿವುಡ್ ನಟಿ ಜಾನ್ವಿ ಕಪೂರ್ ಸದ್ಯ ನಟ ಜೂನಿಯರ್ ಎನ್‌ಟಿಆರ್ ಮತ್ತಯ ಸೈಫ್ ಅಲಿ ಖಾನ್ ಜೊತೆಗೆ ಬಹುನಿರೀಕ್ಷಿತ 'ದೇವರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸ್ವೈಪ್ ರೈಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರು, ತಮ್ಮ ವೈಯಕ್ತಿಕ ಜೀವನದ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಸ್ವೈಪ್ ರೈಡ್ ಎಪಿಸೋಡ್‌ನಲ್ಲಿ ತಮ್ಮ ಮೊದಲ ಬಾಯ್‌ಫ್ರೆಂಡ್ ಬಗ್ಗೆ ನಟಿ ಹಂಚಿಕೊಂಡಿದ್ದಾರೆ. ಅದು ಒಂದು ಸೀರಿಯಸ್ ರಿಲೇಷನ್ಶಿಪ್ ಆಗಿತ್ತು. ಆದರೆ, ತಮ್ಮ ಮನೆಯಲ್ಲಿ ಈ ಸಂಬಂಧವನ್ನು ಒಪ್ಪದ ಕಾರಣ ಬ್ರೇಕಪ್ ಮಾಡಿಕೊಂಡೆ ಎಂಬುದನ್ನು ತಿಳಿಸಿದ್ದಾರೆ.

ಮಗಳ ಪ್ರೀತಿಗಿರಲಿಲ್ಲ ಒಪ್ಪಿಗೆ!
ತನ್ನ ಪೋಷಕರಾದ ದಿವಂಗತ ಶ್ರೀದೇವಿ ಮತ್ತು ನಿರ್ದೇಶಕ ಬೋನಿ ಕಪೂರ್ ತಾನಿ ಪ್ರೀತಿಸಿದ ಹುಡುಗನನ್ನು ಒಪ್ಪದ ಕಾರಣ ತನ್ನ ಸಂಬಂಧ ಕೊನೆಗೊಂಡಿತು ಎಂದು ಜಾನ್ವಿ ಬಹಿರಂಗಪಡಿಸಿದ್ದಾರೆ. ಇದರ ಜೊತೆಗೆ ಮಕ್ಕಳ ಪ್ರೀತಿಗೆ ಪೋಷಕರ ಒಪ್ಪಿಗೆಯಿದ್ದರೇ ಇಂತಹ ವಿಷಯಗಳನ್ನು ಸುಲಭವಾಗುತ್ತವೆ ಎಂದು ತಾನು ತಿಳಿದುಕೊಂಡೆ ಎಂದು ಹೇಳಿದ್ದಾರೆ.
ಜಾನ್ವಿ ಕಪೂರ್ 'ಮೊದಲ ಸೀರಿಯಸ್' ಬಾಯ್ ಫ್ರೆಂಡ್!
"ನನ್ನ ಮೊದಲ ಸೀರಿಯಸ್ ಬಾಯ್‌ಫ್ರೆಂಡ್ ಅಂದರೆ, 'ಚುಪ್-ಚುಪ್ ಕೆ ಮಿಲೇಂಗೆ' (ಕದ್ದು ಮುಚ್ಚಿ ಭೇಟಿಯಾಗುವ) 'ಜೂಟ್ ಬೋಲ್ ಬೋಲ್ ಕೆ' (ಸುಳ್ಳು ಹೇಳಿ ಸಿಗುವ) ತರಹದ ಸಂಬಂಧವಾಗಿತ್ತು. ಆದರೆ ದುರದೃಷ್ಟವಶಾತ್ ಆ ಸಂಬಂಧ ಕೊನೆಗೊಂಡಿತು. ಏಕೆಂದರೆ ನಾನು ಮನೆಯಲ್ಲಿ ತುಂಬಾ ಸುಳ್ಳು ಹೇಳಬೇಕಾಗಿತ್ತು. ಜೊತೆಗೆ ತಾಯಿ ಮತ್ತು ತಂದೆ ತುಂಬಾ ಸಂಪ್ರದಾಯವಾದಿಯಾಗಿದ್ದು, 'ನೋ ಬಾಯ್‌ಫ್ರೆಂಡ್ ರೂಲ್ಸ್' ಇತ್ತು" ಎಂದು ಹೇಳಿದ್ದಾರೆ.
ಪ್ರೀತಿಗೆ ನಿಮ್ಮ ಪೋಷಕರ ಒಪ್ಪಿಗೆ ಮತ್ತು ಅವರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುವುದು ಸಂಬಂಧವನ್ನು ತುಂಬಾ ಸುಲಭಗೊಳಿಸುತ್ತದೆ ಎಂದು ನನಗೆ ಅರಿವಾಯಿತು. ಇದು ನಿಮ್ಮ ನಿರ್ಧಾರಗಳ ಬಗ್ಗೆ ನಿಮಗೆ ಹೆಚ್ಚು ಆತ್ಮವಿಶ್ವಾಸ ನೀಡುತ್ತದೆ ಎಂದು ಜಾನ್ವಿ ಕಪೂರ್ ತಿಳಿಸಿದ್ದಾರೆ.

ನಟಿ ಜಾನ್ವಿ ಕಪೂರ್, ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅವರು ಆಗಾಗ್ಗೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಕಳೆದ ತಿಂಗಳು ಇಬ್ಬರೂ ಒಂದೇ ಕಾರಿನಲ್ಲಿ ಅರ್ಜುನ್ ಕಪೂರ್ ಮನೆಗೆ ಹೊರಟಿದ್ದರು. ಆದರೆ, ತಮ್ಮ ಸಂಬಂಧದ ಬಗ್ಗೆ ನಟಿ ಎಲ್ಲಿಯೂ ಹೇಳಿಕೊಂಡಿಲ್ಲ.
ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಶಿಖರ್ ಪಹಾರಿಯಾ ಅವರು ಮುಂಬೈ ಮೂಲದ ಉದ್ಯಮಿ ಸಂಜಯ್ ಪಹಾರಿಯಾ ಮತ್ತು ಸ್ಮೃತಿ ಪಹಾರಿಯಾ ಅವರ ಪುತ್ರ. ಅವರ ಪೋಷಕರು 2008 ರಲ್ಲಿ ವಿಚ್ಛೇದನ ಪಡೆದಿದ್ದಾರೆ.
ಜಾನ್ವಿ ಕಪೂರ್ ಮುಂದಿನ ಚಿತ್ರಗಳು
ಇನ್ನು, ಜಾನ್ವಿ ಕಪೂರ್ ಇತ್ತೀಚೆಗೆ ನಿತೇಶ್ ತಿವಾರಿ ನಿರ್ದೇಶನದ ವರುಣ್ ಧವನ್ ನಟಿಸಿರುವ 'ಬವಾಲ್' ಚಿತ್ರದಲ್ಲಿ ಕಾಣಿಸಿಕೊಂಡರು. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ತೆರೆಕಂಡಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರ ಜೊತೆಗೆ ರಾಜ್‌ಕುಮಾರ್ ರಾವ್ ಅವರೊಂದಿಗೆ 'ಮಿಸ್ಟರ್ ಅಂಡ್ ಮಿಸಸ್ ಮಹಿ', 'ಉಲಾಜ್' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ತೆಲುಗಿನ 'ದೇವರ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಜೊತೆಗೆ ಸೈಫ್ ಅಲಿ ಖಾನ್ ಕೂಡ ನಟಿಸಿದ್ದಾರೆ. 'ದೇವರ' ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನವಿದೆ.


Click it and Unblock the Notifications











