For Quick Alerts
  ALLOW NOTIFICATIONS  
  For Daily Alerts

  ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್

  |

  ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಕಳೆದ ಶುಕ್ರವಾರ (ಫೆಬ್ರವರಿ 7) ಮುದ್ದಾದ ಹೆಣ್ಣು ಮಗುವಿಗೆ ಕಲ್ಕಿ ಕೊಚ್ಲಿನ್ ಜನ್ಮ ನೀಡಿದ್ದಾರೆ.

  'ಸೇಕ್ರೆಡ್ ಗೇಮ್ಸ್ 2' ರಿಲೀಸ್ ಆದ ಬೆನ್ನಲ್ಲೇ ತಾನು ಗರ್ಭಿಣಿ ಎಂಬ ವಿಚಾರವನ್ನು ಕಲ್ಕಿ ಕೊಚ್ಲಿನ್ ಘೋಷಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಗರ್ಭಾವಸ್ತೆಯ ನೋವು-ನಲಿವನ್ನು ಹಂಚಿಕೊಳ್ಳುತ್ತಿದ್ದ ಕಲ್ಕಿ ಕೊಚ್ಲಿನ್ ಮಡಿಲಲ್ಲಿ ಇದೀಗ ಮುದ್ದು ಮಗಳು ನಲಿದಾಡುತ್ತಿದ್ದಾಳೆ.

  ವಾಟರ್ ಬರ್ತ್ ಮೂಲಕ ಕಲ್ಕಿ ಕೊಚ್ಲಿನ್ ಹೆರಿಗೆ ಮಾಡಿಸಿಕೊಂಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

  ಫ್ರೆಂಚ್ ಮೂಲದ ನಟಿ ಕಲ್ಕಿ ಕೊಚ್ಲಿನ್ 'ಲಾಗ ಚುನಾರಿ ಮೇ ದಾಗ್' ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟರು. 'ದೇವ್ ಡಿ', 'ದಿ ಫಿಲ್ಮ್ ಎಮೋಷನಲ್ ಅತ್ಯಾಚಾರ್', 'ಝಿಂದಗಿ ನಾ ಮಿಲೇಗಿ ದೊಬಾರಾ', 'ಮಾರ್ಗರಿಟಾ ವಿತ್ ಎ ಸ್ಟ್ರಾ', 'ಗಲ್ಲಿ ಬಾಯ್' ಮುಂತಾದ ಚಿತ್ರಗಳಲ್ಲಿ ಕಲ್ಕಿ ಕೊಚ್ಲಿನ್ ಅಭಿನಯಿಸಿದ್ದಾರೆ.

  2011 ರಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಜೊತೆಗೆ ಕಲ್ಕಿ ಕೊಚ್ಲಿನ್ ವಿವಾಹ ನಡೆದಿತ್ತು. 2013 ರಲ್ಲಿ ದೂರಾದ ಇವರಿಬ್ಬರು 2015 ರಲ್ಲಿ ವಿಚ್ಛೇದನ ಪಡೆದಿದ್ದರು. ಸದ್ಯ ಇಸ್ರೇಲಿ ಮ್ಯೂಸಿಷಿಯನ್ ಗಯ್ ಹರ್ಷ್ಬರ್ಗ್ ಜೊತೆಗೆ ರಿಲೇಶನ್ ಶಿಪ್ ನಲ್ಲಿದ್ದಾರೆ ಕಲ್ಕಿ ಕೊಚ್ಲಿನ್. ಇದೇ ಜೋಡಿಗೆ ಇದೀಗ ಹೆಣ್ಣು ಮಗು ಹುಟ್ಟಿದೆ.

  English summary
  Bollywood Actress Kalki Koechin gives birth to a baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X