For Quick Alerts
  ALLOW NOTIFICATIONS  
  For Daily Alerts

  ನಟ ಆಯುಷ್ಮಾನ್ ಖುರಾನ ವಿರುದ್ಧ ತಿರುಗಿ ಬಿದ್ದ ನಟಿ ಕಂಗನಾ ರಣಾವತ್ ಟೀಂ

  |

  ಬಾಲಿವುಡ್ ನಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ. ಸುಶಾಂತ್ ಸಾವಿನ ಬಳಿಕ ಸ್ವಜನ ಪಕ್ಷಪಾತದ ವಿರುದ್ಧ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ನಟಿ ಕಂಗನಾ ರಣಾವತ್ ಬಾಲಿವುಡ್ ನ ಅನೇಕರ ವಿರುದ್ಧ ಸಿಡಿದೆದಿದ್ದಾರೆ. ಬಾಲಿವುಡ್ ನಲ್ಲಿ ಹೊರಗಿನಿಂದ ಬಂದವರು ಮತ್ತು ಒಳಗಿನವರು ಎನ್ನುವ ಸಂಘರ್ಷ ನಡೆಯುತ್ತಿದೆ.

  ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ KGF ತಯಾರಾಗಿದ್ದು ಹೀಗೆ | Filmibeat Kannada

  ನಟಿ ಕಂಗನಾ ರಣಾವತ್ ಟೀಂ ನೆಪೋಟಿಸಂ, ಬಾಲಿವುಡ್ ಒಳಗಿನವರೇ ಆದ ಸ್ಟಾರ್ ಮಕ್ಕಳು ಹಾಗೂ ಪ್ರಭಾವಿಗಳ ವಿರುದ್ಧ ಆಕ್ರೋಶ ವ್ಯಪಡಿಸುತ್ತಿದ್ದಾರೆ. ಆದರೆ ಹೊರಗಿನಿಂದ ಬಂದವರನ್ನು ಸಹ ಕಂಗನಾ ಬಿಡುತ್ತಿಲ್ಲ. ಇತ್ತೀಚಿಗೆ ನಟಿ ತಾಪ್ಸಿ ಪನ್ನು ವಿರುದ್ಧ ಕಿಡಿಕಾರಿದ್ದರು. ಇದೀಗ ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನ ಅವರನ್ನು ಎಳೆದು ತಂದಿದ್ದಾರೆ. ಮುಂದೆ ಓದಿ..

  ಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿ

  ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆದ ನಟ

  ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆದ ನಟ

  ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರಲ್ಲಿ ಆಯುಷ್ಮಾನ್ ಖುರಾನ ಕೂಡ ಒಬ್ಬರು. ಸದ್ಯ ಆಯುಷ್ಮಾನ್ ಖುರಾನ ಬಾಲಿವುಡ್ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆಯುಷ್ಮಾನ್ ವಿರುದ್ಧ ಕಂಗನಾ ಟೀಂ ಮುಗಿಬಿದ್ದಿದೆ.

  ರಿಯಾ ಚಕ್ರವರ್ತಿಗೆ ಆಯುಷ್ಮಾನ್ ಬೆಂಬಲ

  ರಿಯಾ ಚಕ್ರವರ್ತಿಗೆ ಆಯುಷ್ಮಾನ್ ಬೆಂಬಲ

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಬಗ್ಗೆ ಆಯುಷ್ಮಾನ್ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಕಂಗನಾ ಟೀಂ ಆಯುಷ್ಮಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಾಲಿವುಡ್ ನಲ್ಲಿ ನೆಲೆಸಲು ಆಯುಷ್ಮಾನ್ ರಿಯಾ ಮತ್ತು ಸ್ಟಾರ್ ಮಕ್ಕಳನ್ನು ಬೆಂಬಲಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ ನ ಪ್ರತಿಭೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.

  ಆಯುಷ್ಮಾನ್ ವಿರುದ್ಧ ನಟ ಕಮಾಲ್ ಆರ್ ಖಾನ್ ಟ್ವೀಟ್

  ಆಯುಷ್ಮಾನ್ ವಿರುದ್ಧ ನಟ ಕಮಾಲ್ ಆರ್ ಖಾನ್ ಟ್ವೀಟ್

  ವಿವಾದಾತ್ಮಕ ಟ್ವೀಟ್ ಮೂಲಕವೆ ಸದ್ದು ಮಾಡುವ ನಟ ಕಮಾಲ್ ಆರ್ ಖಾನ್ ಆಯುಷ್ಮಾನ್ ವಿರುದ್ಧ ಟ್ವೀಟ್ ಮಾಡಿದ್ದಾರೆ. 3 ಕಾರಣಗಳಿಗಾಗಿ ಆಯುಷ್ಮಾನ್ ಸ್ಟಾರ್ ಕಿಡ್ಸ್ ಮತ್ತು ರಿಯಾ ಚಕ್ರವರ್ತಿಯನ್ನು ಬೆಂಬಲಿಸುತ್ತಾರೆ ಎಂದು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ನಲ್ಲಿ ಉಳಿದುಕೊಳ್ಳಲು, ಯಶ್ ರಾಜ್ ಫಿಲ್ಮ್ ನ ಕಲಾವಿದ ಮತ್ತು ಸುಶಾಂತ್ ಸಿಂಗ್ ಗೆ ಸ್ಪರ್ಧಿಯಾಗಿದ್ದರು ಈ ಕಾರಣಕ್ಕಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

  ಆಯುಷ್ಮಾನ್ ವಿರುದ್ಧ ಮುಗಿಬಿದ್ದ ಕಂಗನಾ ಟೀಂ

  ಆಯುಷ್ಮಾನ್ ವಿರುದ್ಧ ಮುಗಿಬಿದ್ದ ಕಂಗನಾ ಟೀಂ

  ಕಮಾಲ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ಟೀಂ "ಆಯುಷ್ಮಾನ್ ಒಬ್ಬ ಹೊರಗಿನಿಂದ ಬಂದ ಆವಕಾಶವಾದಿ. ಮಾಪಿಯಾವನ್ನು ಕೇವಲ ಒಂದು ಕಾರಣಕ್ಕಾಗಿ ಬೆಂಬಲಿಸುತ್ತಾರೆ. ಯಾರು ಅವರಿಗೆ ಬೆದರಿಕೆ ಹಾಕುವುದಿಲ್ಲ. ಕಂಗನಾ ಮತ್ತು ಸುಶಾಂತ್ ಸಿಂಗ್ ಅಂತಹ ಕೆಲವರು ಎದುರಿಸುತ್ತಿರುವ ಸಂಘರ್ಷಗಳನ್ನು ನಿರಾಕರಿಸುವ ಮೂಲಕ ಮತ್ತು ಅಪಹಾಸ್ಯ ಮಾಡುವ ಮೂಲಕ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಾರೆ" ಎಂದು ಕಂಗನಾ ಟೀಂ ಟ್ವೀಟ್ ಮಾಡಿದ್ದಾರೆ.

  ಅಲಿಯಾ, ತಾಪ್ಸಿ, ಸ್ವಾರಾ ಭಾಸ್ಕರ್ ವಿರುದ್ಧ ಕಂಗನಾ ಕಿಡಿ

  ಅಲಿಯಾ, ತಾಪ್ಸಿ, ಸ್ವಾರಾ ಭಾಸ್ಕರ್ ವಿರುದ್ಧ ಕಂಗನಾ ಕಿಡಿ

  ಇತ್ತೀಚಿಗೆ ಕಂಗನಾ ಟೀಂ ಅಲಿಯಾ ಭಟ್, ತಾಪ್ಸಿ ಪನ್ನು, ಸ್ವಾರಾ ಭಾಸ್ಕರ್ ಸೇರಿದ್ದಂತೆ ಅನೇಕರ ವಿರುದ್ಧ ನೆಪೋಟಿಂ ಆರೋಪ ಮಾಡುತ್ತಿದ್ದಾರೆ. ತಾಪ್ಸಿ ಮತ್ತು ಸ್ವಾರಾ ಬಾಲಿವುಡ್ ಮಾಫಿಯಾವನ್ನು ಬೆಂಬಲಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೆ ತಾಪ್ಸಿ ಪನ್ನುಗೆ ಬಿ ಗ್ರೇಡ್ ನಟಿ ಎಂದು ಜರಿದಿದ್ದಾರೆ. ಇದೀಗ ಆಯುಷ್ಮಾನ್ ವಿರುದ್ಧವೂ ಕಿಡಿ ಕಾರುತ್ತಿದ್ದಾರೆ.

  English summary
  Bollywood Actress Kangana Ranaut attacks Ayushmann Khurrana. She calls him Chaploos outsider support Mafia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X