ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿದ್ದ ನಟಿ ಕಂಗನಾ ಇದೀಗ ಸಂಸತದಲ್ಲಿ ತೇಲುತ್ತಿದ್ದಾರೆ. ಅಂದಹಾಗೆ ಕಂಗನಾ ಸಹೋದರ ಅಕ್ಷತ್ ಮದುವೆಯ ಸಮಾರಂಭವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಕಂಗನಾ ಸಹೋದರ ಅಕ್ಷತ್ ರಣಾವತ್ ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ನಡೆಯುತ್ತಿದ್ದು, ಕಂಗನಾ ಸಹೋದರಿಯರು ಶಾಸ್ತ್ರಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿಗೆ ಮೆಹಂದಿ ಸಮಾರಂಭ ನಡೆದಿದ್ದು, ಕಂಗನಾ, ಸಹೋದರನಿಗೆ ಮೆಹಂದಿ ಹಾಕಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಮುಂದೆ ಓದಿ..

ಮೆಹಂದಿ ಶಾಸ್ತ್ರದಲ್ಲಿ ಕಂಗನಾ ಡ್ಯಾನ್ಸ್

ಮೆಹಂದಿ ಶಾಸ್ತ್ರದಲ್ಲಿ ಕಂಗನಾ ಡ್ಯಾನ್ಸ್

ನಟಿ ಕಂಗನಾ ಮತ್ತು ಸಹೋದರಿ ಅಕ್ಷತ್ ಮದುವೆ ಸಮಾರಂಭದ ಸಂತಸದಲ್ಲಿದ್ದಾರೆ. ಇಬ್ಬರು ಮೆಹಂದಿ ಶಾಸ್ತ್ರದಲ್ಲಿ ರಾಜಸ್ಥಾನದ ಜನಪ್ರಿಯ ಜಾನಪದ ಗೀತೆ 'ಕೇಸರಿಯಾ ಬಾಲಮೇ..' ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಂಗನಾ ನೃತ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದುಬಂದಿದೆ.

ಗೋಲ್ಡ್ ಬಣ್ಣದ ಲೆಹಂಗಾದಲ್ಲಿ ಕಂಗನಾ ಮಿಂಚಿಂಗ್

ಗೋಲ್ಡ್ ಬಣ್ಣದ ಲೆಹಂಗಾದಲ್ಲಿ ಕಂಗನಾ ಮಿಂಚಿಂಗ್

ಸಹೋದರನ ಮದುವೆಯಲ್ಲಿ ಕಂಗನಾ ಗೋಲ್ಡ್ ಬಣ್ಣದ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದರು. ವಿಡಿಯೋ ಶೇರ್ ಮಾಡಿ 'ಮೆಹಂದಿ ಸಂಭ್ರಮದಲ್ಲಿ ನಟಿ ಕಂಗನಾ ರಣಾವತ್' ಎಂದು ಬರೆದುಕೊಂಡಿದ್ದಾರೆ. ಮದುವೆಯ ಅನೇಕ ಫೋಟೋಗಳನ್ನು ಹಂಚಿಕೊಂಡಿರುವ ಕಂಗನಾ ಸಹೋದರನ ಪತ್ನಿ ಅತ್ತಿಯ ಫೋಟೋವನ್ನು ರಿವೀಲ್ ಮಾಡಿದ್ದಾರೆ.

ಉದೈಪುರ್ ನಲ್ಲಿ ನಡೆಯುತ್ತಿದೆ ಮದುವೆ

ಉದೈಪುರ್ ನಲ್ಲಿ ನಡೆಯುತ್ತಿದೆ ಮದುವೆ

ಅಕ್ಷತ್ ವಿವಾಹ ಸಮಾರಂಭ ಉದೈಪುರ್ ನಲ್ಲಿ ನಡೆಯುತ್ತಿದೆ. ಉದೈಪುರ್ ಕಂಗನಾ ಕುಟುಂಬದ ಮೂಲವಂತೆ, ಹಾಗಾಗಿ ಅಲ್ಲೇ ಮದುವೆ ಸಮಾರಂಭ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಂಗನಾ, 'ಇದು ನನ್ನ ಕುಟುಂಬ ಮತ್ತು ನನಗೆ ತುಂಬಾ ಸುಂದರವಾದ ಸಮಯ. ನಾನು ಉದಯಪುರದಲ್ಲಿ ನನ್ನ ಸಹೋದರನ ಮದುವೆ ಸಮಾರಂಭದಲ್ಲಿದ್ದೇನೆ. ಅಲ್ಲಿ ರಣಾವತ್ ಕುಟುಂಬ ನೆಲೆಸಿದೆ. ಈಗ ನನ್ನ ಹೆತ್ತವರ ಮನೆಗೆ ಹೊರಟಿದ್ದೇವೆ. ಕೊರೊನಾ ಕಾರಣದಿಂದ ತೀರ ಖಾಸಗಿಯಾಗಿ ಮದುವೆ ಸಮಾರಂಭ ನಡೆಯುತ್ತಿದೆ. ಆದರೆ ಅದೇ ಉತ್ಸಾಹ ಇದೆ' ಎಂದು ಹೇಳಿದ್ದಾರೆ.

Recommended Video

Sashikumar ಮಗನ್ನನ್ನು ನೋಡಿ ಇದು ಗೌರವ ಪಡುವಂತಹ ವಿಚಾರ ಎಂದ Shivanna | Seethayanam | Filmibeat Kannada
ಕಂಗನಾ ಸಿನಿಮಾಗಳು

ಕಂಗನಾ ಸಿನಿಮಾಗಳು

ಇನ್ನೂ ಕಂಗನಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಷ್ಟೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಬಯೋಪಿಕ್ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ತೇಜಸ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲು ತಯಾರಿ ನಡೆಸುತ್ತಿದ್ದಾರೆ.

More from Filmibeat

English summary
Bollywood Actress Kangana Ranaut Brother Aksht's Pre-Wedding festivities begins. Kangana Dance on Her brother Mehandi Ceremony video goes viral on socila media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X