ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಹೊಸ ಪೋಸ್ಟ್: ಶ್ರೀದೇವಿ ಬಗ್ಗೆ ಹೇಳಿದ್ದೇನು..?
ಮರೆಯಾಗುವಂತದಲ್ಲ. ತನ್ನ ಮನೋಜ್ಞ ನಟನೆಯ ಮೂಲಕ ಪ್ರೇಕ್ಷರ ಗಮನವನ್ನು ಹಿಡಿದಿಟ್ಟುಕೊಳ್ಳುತ್ತಿದ್ದ ಶ್ರೀದೇವಿ ಅಂದಿನ ಬಹುಬೇಡಿಕೆ ನಟಿ.
ತಮ್ಮ ನಾಲ್ಕನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ ಹಿಂದಿ, ಕನ್ನಡ, ತಮಿಳು, ತೆಲುಗು, ತಮಿಳಿನಲ್ಲಿ ಸುಮಾರು ಮುನ್ನೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ ತಮ್ಮ ಅಂದ ಹಾಗೂ ಅದ್ಭುತ ನಟನೆಯ ಮೂಲಕ ಸಿನಿ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಫಿಲ್ಮ್ ಫೇರ್ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಶ್ರೀದೇವಿ ಭಾರತೀಯ ಚಿತ್ರರಂಗದ ಅತೀಲೋಕ ಸುಂದರಿ ಎಂದೆ ವರ್ಣಿಸಬಹುದು.
ಪಂಚ ಭಾಷೆ ನಟಿಯಾಗಿದ್ದ ಶ್ರೀದೇವಿ ಅವರಿಗೆ ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಆಕೆ ಅಗಲಿದರೂ ಕೂಡ ಅವರ ಚಿತ್ರದ ಮೂಲಕ ಜೀವಂತವಾಗಿದ್ದು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಶ್ರೀದೇವಿಯ ಫೋಟೋ ಪೋಸ್ಟ್ ಮಾಡಿ ಆಕೆಯನ್ನು ನೆನೆಯುತ್ತಿರುತ್ತಾರೆ. ಕೇವಲ ಸಾಮಾನ್ಯ ಅಭಿಮಾನಿಗಳಲ್ಲ ಶ್ರೀದೇವಿ ಅವರಿಗೆ ನಟ ನಟಿಯರೂ ಕೂಡ ಅಭಿಮಾನಿಗಳಾಗಿದ್ದು, ಬಾಲಿವುಡ್ ನಟಿ ಕಂಗನಾ ಈ ವಿಚಾರವಾಗಿ ಸದ್ಯ ಸುದ್ದಿಯಲ್ಲಿದ್ದಾರೆ.

ಈ ಬಾರಿ ಯಾರ ಬಗ್ಗೆ ತುಟಿ ಬಿಚ್ಚಿದ್ರು ಕಾಂಟವರ್ಸಿ ಕ್ವೀನ್
ಬಾಲಿವುಡ್ ನಟಿ ಕಂಗನಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಪ್ರಸ್ತುತ ವಿದ್ಯಾಮಾನಗಳ ಬಗೆಗಿನ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳು ಅನೇಕ ಬಾರಿ ವಿವಾದಕ್ಕೂ ಕಾರಣವಾಗಿದೆ. ಇನ್ನು ಬಾಲಿವುಡ್ ಚಿತ್ರರಂಗದ ಬಗ್ಗೆಯೂ ಪೋಸ್ಟ್ ಮಾಡುವ ಕಂಗನಾ ಅನೇಕ ನಿರ್ಮಾಪಕರ, ನಿರ್ದೇಶಕ ಅಷ್ಟೇ ಅಲ್ಲ ಸಹ ನಟರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ನಾನೇ ಶ್ರೀದೇವಿ ಬಿಗೆಸ್ಟ್ ಫ್ಯಾನ್ ಎಂದ ಬಾಲಿವುಡ್ ನಟಿ
ಕಂಗನಾ ಇತ್ತೀಚಿಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಸ್ಟೋರಿಯೊಂದು ನಟಿ ಶ್ರೀದೇವಿ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ. ಬಾಲಿವುಡ್ನಲ್ಲಿ ಶ್ರೀದೇವಿಗೆ ಅಪಾರ ಅಭಿಮಾನಿಗಳಿದ್ದು, ನಾನೂ ಶ್ರೀದೇವಿಯವರ ದೊಡ್ಡ ಅಭಿಮಾನಿ ಎಂದು ಕಂಗನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದು, ಜೊತೆಗೆ ಮಿಸ್ಟರ್ ಇಂಡಿಯಾ ಚಿತ್ರದ ಶ್ರೀದೇವಿಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಶ್ರೀದೇವಿಯನ್ನು ಹಾಡಿ ಹೊಗಳಿದ ಕಂಗನಾ
ಅನಿಲ್ ಕಪೂರ್ ಹಾಗೂ ಶ್ರೀದೇವಿ ನಟನೆಯ ಮಿಸ್ಟರ್ ಇಂಡಿಯಾ ಚಿತ್ರದ ಹಾಡಿನಲ್ಲಿ ಶ್ರೀದೇವಿ ಮಳೆಯಲ್ಲಿ ನೆನೆದು ನೃತ್ಯ ಮಾಡುತ್ತಿರುವ ವಿಡಿಯೋವನ್ನು ಕಂಗಾನಾ ಹಂಚಿಕೊಂಡಿದ್ದಾರೆ. ಜೊತೆಗೆ ಆಕೆಯ ಬಗ್ಗೆ ವರ್ಣಿಸಿರುವ ಕಂಗನಾ ಶ್ರೀದೇವಿ ಅವರ ನಟನೆ ನನ್ನ ಊಹೆಗೂ ಮೀರಿದ್ದು, ಒಬ್ಬ ನಟಿ ಮಗುವಿನ ಮುಗ್ಧತೆಯೊಂದಿಗೆ.. ತಮಾಷೆಯಾಗಿದ್ದುಕೊಂಡು ಇಂತಹ ಸನ್ನಿವೇಶದಲ್ಲಿ ನಟಿಸಬಲ್ಲರು ಎಂದು ಆಕೆಯ ನಟನೆಯನ್ನು ಹಾಡಿ ಹೊಗಳಿದ್ದಾರೆ. ಇನ್ನು ಈ ಹಿಂದೆ ಕೂಡ ಕಂಗನಾ ತಾನು ಶ್ರೀದೇವಿಯ ಅಭಿಮಾನಿ ಎಂದು ಹೇಳಿಕೊಂಡಿದ್ದರು.

ಬಾಲಿವುಡ್ ಕೆಂಗಣ್ಣಿಗೆ ಗುರಿಯಾದ ನಟಿ
ಸದ್ಯ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ 'ಬ್ರಹಾಸ್ತ್ರ'ರ ಚಿತ್ರದ ಗಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಕಂಗನಾ ಚಿತ್ರತಂಡದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಕಂಗನಾ ಇದೆಲ್ಲಾ ಮೂವಿ ಮಾಫಿಯಾ ಎಂದಿದ್ದರು. ಈ ಟ್ವೀಟ್ ಮೂಲಕ ಕಂಗನಾ ಬಾಲಿವುಡ್ನ ಕಳ್ಳತನ ಹಾಗೂ ಅವಕಾಶವಾದಿತನದ ಬಗ್ಗೆಯೂ ಬರೆದುಕೊಂಡಿದ್ದರು. ಜೊತೆಗೆ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ, ನಾಯಕ ರಣಬೀರ್ ಕಪೂರ್ ಹಾಗೂ ನಾಯಕಿ ಆಲಿಯಾ ಭಟ್ ಬಗ್ಗೆಯೂ ಟೀಕೆ ಮಾಡಿ ಚಿತ್ರತಂಡದ ಹಾಗೂ ಬಾಲಿವುಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


Click it and Unblock the Notifications











