For Quick Alerts
  ALLOW NOTIFICATIONS  
  For Daily Alerts

  ಆಲಿಯಾ, ರಣ್ಬೀರ್ ಸಿನಿಮಾ 'ಬ್ರಹ್ಮಾಸ್ತ್ರ' ಕಲೆಕ್ಷನ್ ಮೇಲೆ ಕಂಗನಾಗೆ ಮತ್ತೆ ಅನುಮಾನ!

  |

  ಬಾಲಿವುಡ್ ನಟಿ ಕಂಗನಾ ರನೌತ್ ಮತ್ತೆ 'ಬ್ರಹ್ಮಾಸ್ತ್ರ' ಸಿನಿಮಾದ ಕಲೆಕ್ಷನ್ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಅನುಮಾನವಿತ್ತು. ಸೆಪ್ಟೆಂಬರ್ 9ರಂದು ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಆಗಿತ್ತು.

  'ಬ್ರಹ್ಮಾಸ್ತ್ರ' ಸಿನಿಮಾ ಗಳಿಕೆಯನ್ನೇ ಮುಂದಿಟ್ಟುಕೊಂಡು ಇದು ಹಿಟ್ ಎಂದು ಹೇಗೆ ಕರೆಸಿಕೊಳ್ಳುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಮೊದಲು 5 ದಿನದ ಗಳಿಕೆ 150 ಕೋಟಿ ರೂ. ಆಸುಪಾಸಿನಲ್ಲಿ ಗಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಕಂಗನಾ ಅನುಮಾನ ವ್ಯಕ್ತಪಡಿಸಿದ್ದಾರೆ.

  'ಬ್ರಹ್ಮಾಸ್ತ್ರ' ಕಲೆಕ್ಷನ್ ಮೇಲೆ ಕಂಗನಾಗೆ ಅನುಮಾನ

  ಕಂಗನಾ ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬ್ರಹ್ಮಾಸ್ತ್ರ' ಕಲೆಕ್ಷನ್ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  "ಈ ಸಿನಿಮಾ ಕೇವಲ 144 ಕೋಟಿ ರೂ. (650 ಕೋಟಿ ರೂ. ಬಜೆಟ್) ಗಳಿಸಿ ದೊಡ್ಡ ಹಿಟ್ ಎಂದು ಘೋಷಣೆ ಮಾಡಲಾಗಿದೆ. ಇದು ಮೂವಿ ಮಾಫಿಯಾ ಹೇಗೆ ಕಾರ್ಯ ನಿರ್ವಹಿಸುತ್ತದೆ ಅನ್ನೋದನ್ನು ತೋರಿಸುತ್ತದೆ. " ಎಂದು ಕಿಡಿ ಕಾರಿದ್ದಾರೆ.

  Bollywood Actress Kangana Ranaut Doubted Again About Brahmastra Collections

  ಯಾವುದು ಹಿಟ್ ಯಾವುದು ಫ್ಲಾಪ್

  " ಇಲ್ಲಿ ಸಿನಿಮಾದ ಕಲೆಕ್ಷನ್ ಹಾಗೂ ಹಿಂಪಡೆದ ಹಣವನ್ನು ಲೆಕ್ಕಿಸದೆ, ಯಾವ ಚಿತ್ರವನ್ನು ಹಿಟ್ ಎಂದು ಘೋಷಿಸಬೇಕು, ಹಾಗೇ ಯಾವುದನ್ನು ಫ್ಲಾಪ್ ಎಂದು ಕರೆಯಬೇಕು ಎಂಬುದನ್ನು ಅವರುಗಳೇ ನಿರ್ಧಾರ ಮಾಡಿರುತ್ತಾರೆ. ಯಾರಿಗೆ ಪ್ರಚಾರ ಮಾಡಬೇಕು. ಯಾರಿಗೆ ಬಹಿಷ್ಕಾರ ಹಾಕಬೇಕೆಂದು ಅವರು ಆಯ್ಕೆ ಮಾಡುತ್ತಾರೆ." ಎಂದು ಕಂಗನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  ಇಷ್ಟೇ ಅಲ್ಲದೆ ಕಂಗನಾ ರನೌತ್ 'ಬ್ರಹ್ಮಾಸ್ತ್ರ' ಸಿನಿಮಾಗೆ ದೊಡ್ಡ ಸೋಲು ಎಂದು ಮಾಡಿರೋ ಟ್ವೀಟ್ ಅನ್ನೂ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ 5 ದಿನಗಳಲ್ಲಿ ಭಾರತದಲ್ಲಿ ಸಿನಿಮಾ ಗಳಿಕೆ ನೆಟ್ ಮೊತ್ತ ಅಂದಾಜು ₹144 ಕೋಟಿ. ಭಾರತದಲ್ಲಿ ಸುಮಾರು ₹168 ಗ್ರಾಸ್ ಗಳಿಸಿದ್ದರೆ, ಓವರ್ ಸೀಸ್ ಗಳಿಸಿದ್ದು ₹78. ಒಟ್ಟು ವಿಶ್ವದಾದ್ಯಂತ ಕಲೆಕ್ಷನ್ ಮಾಡಿದ್ದು ಅಂದಾಜು ₹246 ಕೋಟಿ. ಇಲ್ಲಿವರೆಗೂ ಸುಮಾರು ಶೇ.38ರಷ್ಟು ಹಣವನ್ನು ಮಾತ್ರ ರಿಕವರಿ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ಮತ್ತೆ ಕಂಗನಾ 'ಬ್ರಹ್ಮಾಸ್ತ್ರ' ವಿರುದ್ಧ ತಿರುಗಿಬಿದ್ದಂತಾಗಿದೆ.

  English summary
  Bollywood Actress Kangana Ranaut Doubted Again About Brahmastra Collections, Know More.
  Thursday, September 15, 2022, 10:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X