India
  For Quick Alerts
  ALLOW NOTIFICATIONS  
  For Daily Alerts

  ಜ್ಞಾನವ್ಯಾಪಿ ಮಸೀದಿ ಪ್ರಕರಣದ ಬಗ್ಗೆ ನಟಿ ಕಂಗನಾ ರನೌತ್ ಹೇಳಿದ್ದೇನು?

  |

  ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಪವಿತ್ರ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವ್ಯಾಪಿ ಮಸೀದಿ ಆವರಣದೊಳಗೆ ನಡೆಸಿರುವ ವಿಡಿಯೋಗ್ರಫಿ ಸಮೀಕ್ಷೆಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಈ ಪ್ರಕರಣ ಉತ್ತರ ಪ್ರದೇಶದಲ್ಲಿ ಭಾರೀ ಸದ್ದು ಮಾಡ್ತಿದೆ. ಸದ್ಯ ಈ ಪ್ರಕರಣದ ಬಗ್ಗೆ ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರಕರಣದ ಬಗ್ಗೆ ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದಾರೆ.

  ನಟಿ ಕಂಗನಾ ಅಭಿನಯದ 'ಧಾಕಡ್' ಸಿನಿಮಾ ಇಂದು (ಮೇ 20) ರಿಲೀಸ್‌ ಆಗಿದೆ. ಇದಕ್ಕೂ ಮೊದಲು ನಿನ್ನೆ (ಮೇ 19) ರಂದು ದೇವರ ಆರ್ಶೀವಾದ ಪಡೆಯಲು ನಟಿ ಕಂಗನಾ ರನೌತ್ ಹಾಗೂ 'ಧಾಕಡ್' ಚಿತ್ರತಂಡ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜ್ಯಾನವ್ಯಾಪಿ ಮಸೀದಿ ಪ್ರಕರಣದ ಬಗ್ಗೆ ಕಂಗನಾ ಮಾತನಾಡಿದ್ದಾರೆ.

  ನನ್ನ ಸ್ನೇಹಿತರಾಗಲೂ ಬಾಲಿವುಡ್‌ನಲ್ಲಿ ಯಾರಿಗೂ ಯೋಗ್ಯತೆ ಇಲ್ಲ: ಕಂಗನಾ ರನೌತ್ನನ್ನ ಸ್ನೇಹಿತರಾಗಲೂ ಬಾಲಿವುಡ್‌ನಲ್ಲಿ ಯಾರಿಗೂ ಯೋಗ್ಯತೆ ಇಲ್ಲ: ಕಂಗನಾ ರನೌತ್

  'ಮಥುರಾದ ಕಣ ಕಣದಲ್ಲಿ ಶ್ರೀ ಕೃಷ್ಣ ಹೇಗಿದ್ದಾನೋ, ಅಯೋಧ್ಯೆಯ ಕಣ ಕಣದಲ್ಲಿ ಶ್ರೀರಾಮ ಹೇಗಿದ್ದಾನೋ, ಹಾಗೇ ಕಾಶಿಯ ಕಣ ಕಣದಲ್ಲೂ ಶಿವ ಇದ್ದಾನೆ. ಶಿವನಿಗೆ ಯಾವುದೇ ಸ್ಥಳದ ಅವಶ್ಯಕತೆಯಿಲ್ಲ. ಕಣ ಕಣದಲ್ಲೂ ಶಿವ ಇರುತ್ತಾನೆ. ಹರ ಹರ ಮಹಾದೇವ್,' ಎಂದು ನಟಿ ಕಂಗನಾ ರನೌತ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

  ನಟಿ ಕಂಗನಾ ಅಭಿನಯಿಸಿರುವ 'ಧಾಕಡ್' ಸಿನಿಮಾ ಇಂದು (ಮೇ 20 ) ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ. ಸಿನಿಮಾ ನೋಡಲು ಕಂಗನಾ ಅಭಿಮಾನಿಗಳು ಥಿಯೇಟರ್‌ಗಳಿಗೆ ಆಗಮಿಸ್ತಿದ್ದಾರೆ. ಚಿತ್ರದಲ್ಲಿಇ ಸ್ಪೈ ಏಜೆಂಟ್ ಅಗ್ನಿ ಪಾತ್ರದಲ್ಲಿ ನಟಿ ಕಂಗನಾ ನಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಇರುವ ಈ ಸಿನಿಮಾಗೆ ಜನರು ಎಷ್ಟು ಮಾರ್ಕ್ಸ್ ಕೊಡ್ತಾರೆ. ಬಾಕ್ಸಾಫೀಸ್‌ನಲ್ಲಿ ಬಾಲಿವುಡ್‌ನ ಈ ಸಿನಿಮಾವಾದರೂ ಭರ್ಜರಿ ಕಲೆಕ್ಷನ್ ಮಾಡುತ್ತಾ ನೋಡಬೇಕಿದೆ.

  Bollywood Actress Kangana Ranaut Reaction on Gyanvapi Mosque Controversy

  ಜ್ಷಾನವ್ಯಾಪಿ ವಿಡಿಯೋಗ್ರಫಿ ಸಮೀಕ್ಷೆಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಓರ್ವ ವಕೀಲರು ಮಸೀದಿಯಲ್ಲಿ ಇರುವ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಮಸೀದಿಯಲ್ಲಿ ನಮಾಜ್ ಮಾಡುವುದಕ್ಕೂ ಮೊದಲು ಬಾವಿಯಲ್ಲಿರುವ ನೀರಿನಲ್ಲಿ ಶುದ್ಧೀಕರಣ ಮಾಡಲಾಗುತ್ತಿತ್ತು. ಅಲ್ಲದೆ ಅಲ್ಲಿರುವ ಮುಸ್ಲಿಂ ನಾಯಕರು ಅದು ಶಿವಲಿಂಗವಲ್ಲ ಕಾರಂಜಿ ಎಂದು ವಾದಿಸಿದ್ದಾರೆ. ಸದ್ಯಕ್ಕೆ ಶಿವಲಿಂಗ ಇರುವ ಸ್ಥಳವನ್ನು ಭದ್ರಪಡಿಸಿ. ಆದರೆ, ನಮಾಜ್ ಮಾಡುವುದಕ್ಕೆ ಯಾವುದೇ ತೊಂದರೆ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸದ್ಯ ಈ ಪ್ರಕರಣ ಈಗ ಉತ್ತರ ಪ್ರದೇಶದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದು, ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಈ ಪ್ರಕರಣದ ಬಗ್ಗೆ ಚರ್ಚೆ ಶುರುವಾಗಿದೆ.

  English summary
  Bollywood Actress Kangana Ranaut Reaction on Gyanvapi Mosque Controversy. She Said There's Lord Shiva in Every Particle of Kashi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X