twitter
    For Quick Alerts
    ALLOW NOTIFICATIONS  
    For Daily Alerts

    ತೂಕ ಇಳಿಸಿಕೊಳ್ಳುತ್ತಿರುವ ನಟಿ ಕಂಗನಾ ರಣಾವತ್: ಫೋಟೋ ವೈರಲ್

    |

    ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಮತ್ತು ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಪ್ರಹಾರ ನಡೆಸುತ್ತಿರುವ ಕಂಗನಾ, ಕಳೆದ ನಾಲ್ಕೈದು ತಿಂಗಳಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುವ ಕಂಗನಾ ಇತ್ತೀಚಿಗೆ ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ.

    ಕಂಗನಾ ಸದ್ಯ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಬಳಿಕ ಸುಮಾರು 7 ತಿಂಗಳ ನಂತರ ಕಂಗನಾ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿರುವ ಕೆಲವು ಫೋಟೋಗಳನ್ನು ಹಂಚಿಕೊಂಡು, ಮತ್ತೆ ಚಿತ್ರೀಕರಣಕ್ಕೆ ಮರಳಿದ ಸಂತಸವನ್ನು ವ್ಯಕ್ತಪಡಿಸಿದ್ದರು.

    ಕೋರ್ಟ್ ಆದೇಶದಂತೆ ಕಂಗನಾ ವಿರುದ್ಧ FIR ದಾಖಲಿಸಿದ ಕ್ಯಾತಸಂದ್ರ ಪೊಲೀಸ್ಕೋರ್ಟ್ ಆದೇಶದಂತೆ ಕಂಗನಾ ವಿರುದ್ಧ FIR ದಾಖಲಿಸಿದ ಕ್ಯಾತಸಂದ್ರ ಪೊಲೀಸ್

    ಅಂದ್ಹಾಗೆ ಕಂಗನಾ ಈ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಜಯಲಲಿತಾ ಹಾಗೆ ಕಾಣಿಸಲು ಕಂಗನಾ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಚಿತ್ರೀಕರಣ ಮುಗಿಯುತ್ತ ಬಂದಿದೆ. ಕೊನೆಯ 15 ದಿನಗಳ ಚಿತ್ರೀಕರಣ ಬಾಕಿ ಇದೆ. ಹಾಗಾಗಿ ಮತ್ತೆ ತೂಕ ಇಳಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ ಕಂಗನಾ.

    Bollywood Actress Kangana Ranaut Shares A Weight Loss Transformation Photo

    ತೂಕ ಇಳಿಸಿಕೊಳ್ಳಲು ಯೋಗ ಮತ್ತ ಜಿಮ್ ನ ಮೊರೆಹೋಗಿದ್ದಾರೆ. ಕಂಗನಾ ಯೋಗ ಮಾಡುತ್ತಿರುವ ವ ವಿಸ್ಮಯಕಾರಿ ಫೋಟೋ ಶೇರ್ ಮಾಡಿ ತೂಕ ಹೇಗೆ ಇಳಿಸಿಕೊಳ್ಳುತ್ತಿದ್ದಾರೆ ಎಂದು ತೋರಿಸಿದ್ದಾರೆ. ಅಂದ್ಹಾಗೆ ಕಂಗನಾ ಮುಂದಿನ ಸಿನಿಮಾ ಧಾಕಡ್ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.

    ತೂಕ ಇಳಿಕೆಯ ಬಗ್ಗೆ ಕಂಗನಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ನಾನು ತಲೈವಿ ಸಿನಿಮಾಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೆ. ಈಗ ಈ ಸಿನಿಮಾ ಮುಗಿಯುತ್ತ ಬಂದಿದೆ. ಮತ್ತೆ ನಾನು ಹಳೆಯ ತೂಕಕ್ಕೆ ಹಿಂದಿರುಗುತ್ತಿದ್ದೇನೆ. ಜಾಗಿಂಗ್, ವಾಕಿಂಗ್ ಮತ್ತು ಯೋಗ ಮೂಲಕ ತೂಕ ಇಳಿಸಿಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.

    Bollywood Actress Kangana Ranaut Shares A Weight Loss Transformation Photo

    Recommended Video

    ಕಂಗನಾ ಅಭಿನಯದ ಜಯಲಲಿತಾ ಬಯೋಪಿಕ್ ಗೆ ಎದುರಾಗಿದೆ ದೊಡ್ಡ ಕಂಟಕ | Filmibeat Kannada

    ಕಂಗನಾ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ. ಅದ್ಭುತ ನೀವು, ಈ ಮಟ್ಟಕ್ಕೆ ತಲುಪಲು ಸಾಕಷ್ಟು ಶ್ರಮಿಸಿದ್ದೀರಿ, ನಾವು ಕೂಡ ಯೋಗ ಮಾಡುತ್ತೇವೆ, ನೀವು ಸಾಕಷ್ಟು ಜನರಿಗೆ ಸ್ಫೂರ್ತಿ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಕಂಗನಾ ಸದ್ಯ ಕುಟುಂಬದ ಜೊತೆ ಮನಾಲಿಯಲ್ಲಿ ನೆಲೆಸಿದ್ದಾರೆ.

    English summary
    Bollywood Actress kangana ranaut Shares a weight loss transformation photo after gain 20 kg.
    Wednesday, October 14, 2020, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X