ಹೈ ಹೀಲ್ಸ್ ಧರಿಸಿ ಮೆಟ್ಟಿಲಿನಿಂದ ಜಾರಿ ಬಿದ್ದ ಕಂಗನಾ, ವೈರಲ್ ವಿಡಿಯೋ ಕಂಡು ಫ್ಯಾನ್ಸ್ ಶಾಕ್..!

ಪಬ್ಲಿಕ್ಕಿಗೆ ಬಂದಾಗ ಸೆಲೆಬ್ರೆಟಿಗಳು ಎಷ್ಟರಮಟ್ಟಿಗೆ ಮೈಯೆಲ್ಲಾ ಕಣ್ಣಾಗಿಟ್ಟುಕೊಳ್ಳಬೇಕಂದ್ರೆ ಚೂರು ಮಿಸ್ಸಾದರೂ ಮುಗಿಯಿತು. ನೆರೆದಿದ್ದವರೆಲ್ಲಾ ನಗುವ, ಗರಂ ಆಗುವ, ತರಾಟೆಗೆ ತೆಗೆದುಕೊಳ್ಳುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಲೇ ಇರುತ್ತದೆ.

ಅದರಲ್ಲೂ ಬಾಲಿವುಡ್ ನಲ್ಲಿ ದಿನಕ್ಕೊಂದರಂತೆ ಇಂತಹ ಘಟನೆಗಳು ಆಗುತ್ತಲೇ ಇರುತ್ತವೆ. ಇಂತಹ ವಿಚಾರಕ್ಕೆ ಕೆಲವರು ನಾಚಿಕೊಂಡರೆ, ಮತ್ತೂ ಕೆಲವರು ಕೋಪಗೊಂಡು ಆ ಸ್ಥಳದಲ್ಲಿ ನಿಲ್ಲದೇ ನಾಟಕೀಯವಾಗಿ ಪರಾರಿಯಾಗಿರುತ್ತಾರೆ. ಉದಾಹರಣೆಗೆ ಕಂಗನಾ ಶರ್ಮಾ.

Bollywood Actress Kangana Sharma falls down the stairs while posing for the media

ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಂಗನಾ ಆ ನಂತರ ಹೆಸರು ಮಾಡಿದ್ದು ಕಿರುತೆರೆಯಲ್ಲಿ. ತೂ ಸೂರಜ್ ಮೇ ಸಾಂಜ್, ಪಿಯಾಜಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅನೇಕರಿಗೆ ಚಿರಪರಿಚಿತವಾದ ಕಂಗನಾ ಈಗೀಗ ಧಾರಾಳವಾಗಿ ಅಂಗಾಂಗ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಉರ್ಫಿ ಜಾವೇದ್‌ ಜೊತೆ ಸ್ಫರ್ಧೆಗೆ ಇಳಿದವರಂತೆ ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ.ಇಂಥಾ ಕಂಗನಾ ಸದ್ಯ ಮುಂಬೈನ ಹೊಟೇಲ್‌ವೊಂದರಿಂದ ಹೊರ ಬರುವಾಗ ಆಯ ತಪ್ಪಿ ಮೆಟ್ಟಿಲಿಂದ ಬಿದ್ದಿದ್ದಾರೆ.

ಹೌದು, ಅಸಲಿಗೆ ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಕಂಗನಾ ಕೂಡ ಇದರಿಂದ ಹೊರತಾಗಿಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಕೆಲ ದಿನಗಳಿಂದ ಈ ಕಂಗನಾ ಅವರನ್ನು ಕಣ್ತುಂಬಿಕೊಳ್ಳದಿದ್ದರೆ ಕಣ್ಣಿಗೆ ನಿದ್ದೆಯೇ ಬರಲ್ಲ ಎಂಬಂತೆ ಈ ಪಾಪರಾಜಿಗಳು ವರ್ತಿಸುತ್ತಿದ್ದಾರೆ. ಕಂಗನಾ ಅವರ ಹಿಂದೆಯೇ ಸದಾ ಕಾಲ ಓಡಾಡುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮುಂಬೈನ ರೆಸ್ಟೋರೆಂಟ್‌ಗೆ ಕಂಗನಾ ತೆರಳಿದಾಗ ಹೊರಗಡೆ ಬಿಡಾರ ಹೂಡಿದ್ದ ಪಾಪರಾಜಿಗಳು ಕಂಗನಾ ಹೊರ ಬರುತ್ತಿದ್ದಂತೆಯೇ ಫೋಟೊಗೆ ಫೋಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ಹೀಗಾಗಿ ಮೊದಲೇ ಹೈಹೀಲ್ಸ್ ಧರಿಸಿದ್ದ ಕಂಗನಾ ಮುಗುಳು ನಗೆಯೊಂದಿಗೆ ಫೋಸ್ ಕೊಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಮೆಟ್ಟಿಲು ಇರುವುದನ್ನೇ ಮರೆತಂತೆ ಕಂಗನಾ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಆಗ ಆಯ ತಪ್ಪಿ ಕಾಲು ತಿರುಚಿ ದೊಪ್ಪನೆ ಬಿದ್ದೇ ಬಿಟ್ಟಿದ್ದಾರೆ ಕಂಗನಾ. ಕಂಗನಾ ಬಿದ್ದ ನಂತರ ಪಾಪರಾಜಿಗಳು ಸಹಾಯಕ್ಕೆ ಧಾವಿಸಿದ್ದಾರೆ. ಆಗ ಕಂಗನಾ ತಮಗೇನು ಆಗಿಲ್ಲ ಎಂಬಂತೆ ವರ್ತಿಸುವ ಪ್ರಯತ್ನವನ್ನು ಮಾಡುತ್ತಾರೆ. ನೋವಾದರೂ ಕೂಡ ನಗುವ ಪ್ರಯತ್ನ ಮಾಡಿದ್ದಾರೆ. ಆ ನಂತರ ತಮ್ಮ ಪಾದಗಳನ್ನು ಒತ್ತಿಕೊಳ್ಳುತ್ತಾ ಎಲ್ಲಾದರೂ ಗಾಯ ಆಗಿದೆಯಾ ಎಂದು ನೋಡಿಕೊಂಡಿದ್ದಾರೆ.

ಸದ್ಯ ಕಂಗನಾ ಬೀಳುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವಾರು ರೀತಿಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಕಂಗನಾ ಶರ್ಮಾ ಅವರ ಸೌಂದರ್ಯಕ್ಕೆ ಮನ ಸೋತ ಇವರ ಅಭಿಮಾನಿಗಳು ವಿಡಿಯೋ ನೋಡಿ ತಮ್ಮ ಕಳವಳ ವ್ಯಕ್ತಪಡಿಸಿದ್ದರೆ, ಇನ್ನು ಹಲವರು ನೆಲ ನೋಡಿ ನಡೆಯಬೇಕೆಂದು ಹೇಳುವುದು ಇದೇ ಕಾರಣಕ್ಕೆ ಎಂದಿದ್ದಾರೆ. ಮತ್ತೂ ಕೆಲವರು ಉಡುಗೆ-ತೊಡುಗೆಯ ಬಗ್ಗೆ ಪಾಠವನ್ನು ಮಾಡಿದ್ದಾರೆ.ಪೆಟ್ಟಾದರೂ ಅದನ್ನು ತೋರಿಸಿಕೊಳ್ಳಲು ಸಾಧ್ಯವಾಗಲ್ಲ ಕೃತಕವಾಗಿ ನಗುತ್ತಿರಬೇಕು, ಇಷ್ಟೇ ಸೆಲೆಬ್ರಿಟಿಗಳ ಜೀವನ ಎನ್ನುತ್ತಿದ್ಧಾರೆ. ಅಂದ್ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಕಂಗನಾ ಶರ್ಮಾ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2.8 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ಗಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X