ಕರೀನಾ ಕಪೂರ್ ಬಟ್ಟೆ ಬೆಲೆ ಕೇಳಿ ಫ್ಯಾನ್ಸ್ ಹೀಗೆ ಅನ್ನೋದಾ?

ಸ್ಟಾರ್ ನಟ ನಟಿಯರು ಅಂದರೆ ಸಾಕು ದುಬಾರಿ ದುನಿಯಾದಲ್ಲೆ ತಮ್ಮ ಜೀವನ ನಡೆಸುತ್ತಾರೆ. ದುಬಾರಿ ಜೀವನ ನಡೆಸುವುದು ಪ್ರೆಸ್ಟೀಜ್ ಅಂದುಕೊಳ್ಳುವ ಹಲವರು, ಸಾವಿರದಲ್ಲಿ ಕೊಂಡುಕೊಳ್ಳಬಹುದಾದುದನ್ನು ಲಕ್ಷ ಕೊಟ್ಟು ಖರೀದಿ ಮಾಡಿರುತ್ತಾರೆ. ಸ್ಟಾರ್ ನಟ ನಟಿಯರ ಈ ದುಬಾರಿ ಜೀವನ ಕೆಲವೊಮ್ಮೆ ಸಾಮಾನ್ಯ ಅನ್ನಿಸಿದರೂ ಮತ್ತೂ ಕೆಲವೊಮ್ಮೆ ಸೆಲೆಬ್ರೆಟಿಗಳು ಹಿಂಗೆ ಮಾಡಲು ಹೋಗಿ ಟ್ರೋಲ್ ಆಗಿರ್ತಾರೆ. ಸದ್ಯ ಇದೀಗ ಬಾಲಿವುಡ್‌ ಬೇಬೊ ಕರೀನಾ ಕಪೂರ್ ಕೂಡ ಇಂತದ್ದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

2015ರಿಂದಲೂ ಕುಟುಂಬಕ್ಕೆ ಸಮಯ ನೀಡುತ್ತಿರುವ ಕರೀನಾ, ತನ್ನೆರಡು ಮಕ್ಕಳ ಹಾರೈಕೆ ಜೊತೆಗೆ, ಫಿಟ್‌ನೆಸ್ ಬಗ್ಗೆ ಕೂಡ ಗಮನ ಹರಿಸಿದ್ದಾರೆ. ಎರಡನೇ ಮಗ ಜೆಹ್ ಹುಟ್ಟಿದ ನಂತರದಲ್ಲಿ ಯೋಗಾಭ್ಯಾಸದ ಜೊತೆಗೆ ವರ್ಕ್ ಔಟ್ ಕೂಡ ಮಾಡಿ ಸ್ಲಿಮ್ ಆಗಿದ್ದರು. ಮತ್ತೆ ತನ್ನ ಹಿಂದಿನ ದೇಹ ಸೌಂದರ್ಯವನ್ನು ಪಡೆದ ಕರೀನಾ ಕಪೂರ್ ಮದುವೆ ನಂತರದಲ್ಲಿ ಸಿನಿಮಾಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳುತ್ತಿಲ್ಲ. ಕುಟುಂಬ, ಮಕ್ಕಳ ಜವಾಬ್ದಾರಿ ಅಂತ ಸಮಯ ಕಳೆಯುತ್ತಿದ್ದಾರೆ. ಸಿನಿಮಾಗಳನ್ನು ಲೆಕ್ಕಾಚಾರ ಹಾಕಿ ಒಪ್ಪಿಕೊಳ್ಳುತ್ತಿರುವ ಕರೀನಾ ಕಪೂರ್ ಸದ್ಯ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅದು ಬೇರೆನು ಅಲ್ಲಾ ಕರೀನಾ ಅವರ ದುಬಾರಿ ಬಟ್ಟೆಯ ವಿಚಾರವಾಗಿ. ಹೌದು ಬಾಲಿವುಡ್ ಬೇಬೊ ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದು, ಹಲವು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕರೀನಾ ಶೇರ್ ಮಾಡಿರುವ ಫೋಟೊ ನೋಡಿ ಹಲವು ನೆಟ್ಟಿಗರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಕರೀನಾ ಧರಿಸಿರುವ ಟು ಪೀಸ್ ಬಟ್ಟೆ.

ಬಾಲಿವುಡ್ ಸೆಲೆಬ್ರಿಟಿ ಸ್ಟೈಲಿಸ್ಟ್ ಲಕ್ಷ್ಮಿ ಲೆಹ್ರ್ ಅವರ ಇನ್ಸ್ಟಾಗ್ರಾಮ್ ನಲ್ಲೂ ಕರೀನಾ ಅವರ ಈ ಫೋಟೊವನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಕರೀನಾ ಹಳದಿ ಬಣ್ಣದ ಟು ಪೀಸ್ ಬಟ್ಟೆಯನ್ನು ಧರಿಸಿ ಪೋಸ್ ನೀಡಿದ್ದಾರೆ. ಅಲ್ಲದೇ ಇದರ ಜೊತೆ ಮ್ಯಾಚಿಂಗ್ ಶ್ರಗ್ ಕೂಡ ಹಾಕಿಕೊಂಡಿದ್ದಾರೆ. ಈ ಬಟ್ಟೆಯನ್ನು ಧರಿಸಿ ಬಹಳ ಮಾದಕವಾಗಿ ಕರೀನಾ ಕಪೂರ್ ಕಂಗೊಳಿಸಿದ್ದಾರೆ. ಕರೀನಾ ಬಿಕಿನಿ ತೊಡುವುದು ಕಾಮನ್. ಇದರಲ್ಲೇನಿದೆ ಟ್ರೋಲ್ ಆಗೋ ವಿಚಾರ ಅಂತ ನಿಮಗೆ ಅನ್ನಿಸಬಹುದು. ಟ್ರೋಲ್ ಆಗೋದಕ್ಕೆ ಕಾರಣವೂ ಇದೆ . ಅದೇ ಕರೀನಾ ಧರಿಸಿರುವ ಈ ಬಟ್ಟೆಯ ಬೆಲೆ.

ಸಾಮಾನ್ಯವಾಗಿ ಸೆಲೆಬ್ರೆಟಿಗಳು ಅಂದರೇ ದುಬಾರಿ ಬಟ್ಟೆಗಳನೇ ಖರೀದಿ ಮಾಡುತ್ತಾರೆ. ಆದರೇ ಬೇಬೋ ಈ ಟು ಪೀಸ್ ಬಟ್ಟೆಗೆ ಬರೋಬ್ಬರಿ 1 ಲಕ್ಷದ 20 ಸಾವಿರ ನೀಡಿದ್ದಾರೆ ಅನ್ನೋದು ಗೊತ್ತಾಗಿದೆ. ಹೀಗಾಗಿ ನೆಟ್ಟಿಗರು ಈ ಡ್ರೆಸ್ ಬೆಲೆ ಕೇಳಿ ಮತ್ತಷ್ಟು ಶಾಕ್ ಆಗಿದ್ದಾರೆ. ಈ ಡ್ರೆಸ್ ಬೆಲೆ ತಿಳಿದ ಅಭಿಮಾನಿಗಳು ಮತ್ತು ಟ್ರೋಲಿಗರು ಎರಡು ತುಂಡು ಬಟ್ಟೆಗೆ ಇಷ್ಟೊಂದು ದುಡ್ಡಾ ಎಂದು ಕಾಲೆಳೆದಿದ್ದಾರೆ. ಈ ಡ್ರೆಸ್ನಲ್ಲಿ ಅಂಥದ್ದೇನಿದೆ? ನೋಡೋಕೆ ಚೆನ್ನಾಗಿಯೂ ಇಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Bollywood Actress Kareena Kapoor Khan Trolled for Her Dress

ಇನ್ನು ಹಲವರು ಕರೀನಾರ ಈ ಸಿಂಪಲ್‌ ಲುಕ್ಕಿಗೆ ಫಿದಾ ಆಗಿದ್ದಾರೆ. ಡ್ರೆಸ್ ಬೆಲೆ ಎಷ್ಟಾದ್ರೇನು ಬೇಬೋ ಬ್ಯೂಟಿ ಮುಂದೆ ದುಡ್ಡು ಯಾವ ಲೆಕ್ಕಕ್ಕೂ ಇಲ್ಲ ಅಂತಿದ್ದಾರೆ. ಅಲ್ಲದೇ ಕರೀನಾ ಹಾಟ್ ಲುಕ್ಕಿಗೆ ಹಲವರು ಫಿದಾ ಆಗಿದ್ದಾರೆ. ಬಾಲಿವುಡ್‌ ಬ್ಯೂಟಿಯ ಸಿಂಪಲ್ ಲುಕ್ಕಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಇನ್ನು ಕರೀನಾ ಕಪೂರ್ ಆಗಾಗ ಬಿಕಿನಿ ತೊಟ್ಟು ತನ್ನ ಮೈಮಾಟದ ಪ್ರದರ್ಶನವನ್ನು ಮಾಡುತ್ತಲೇ ಇರುತ್ತಾರೆ. ವರ್ಷಕ್ಕೆ ಒಂದೆರೆಡು ಸಲ ಫಾರಿನ್ ಟ್ರಿಪ್ ಹಾರುವ ಸೆಲೆಬ್ರೇಟಿಗಳಲ್ಲಿ ನಟಿ ಕರೀನಾ ಕೂಡ ಒಬ್ಬರು.

ಆಗಾಗ ಮಾಲ್ಡೀವ್ಸ್‌ಗೆ ಹಾರುವ ನಟಿಯರಲ್ಲಿ ಲಿಸ್ಟ್‌ನಲ್ಲಿ ಕರೀನಾ ಕಪೂರ್ ಖಾನ್ ಕೂಡ ಇದ್ದಾರೆ. ಕರೀನಾ ಮಾಲ್ಡೀವ್ಸ್‌ಗೆ ಹೋದರೆ, ಮುಗೀತು ಬಿಕಿನಿ ಧರಿಸಿದ ಒಂದೆರಡು ಫೋಟೊಗಳನ್ನು ತನ್ನ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಕರೀನಾ ಧರಿಸಿದ ಪ್ರಿಂಟೆಡ್ ಬಿಕಿನಿಯ ಬೆಲೆ 20,590 ರೂಪಾಯಿ ಎಂದು ವರದಿ ಆಗಿತ್ತು. ಈಗ ಮತ್ತೆ ವಿಭಿನ್ನ ಬಗೆಯ ಬಿಕಿನಿ ತರಹದ ಬಟ್ಟೆ ತೊಟ್ಟು ಕರೀನಾ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದಾರೆ.

More from Filmibeat

English summary
Kareena Kapoor Khan trolled for her costliest two piece dress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X