»   » ಕತ್ರಿನಾ ಕೈಫ್ ನಾಪತ್ತೆ, ಎಲ್ಲಿ ಹೋದರು ಏನಾದರು?

ಕತ್ರಿನಾ ಕೈಫ್ ನಾಪತ್ತೆ, ಎಲ್ಲಿ ಹೋದರು ಏನಾದರು?

Posted By:
Subscribe to Filmibeat Kannada

ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅದೇ ರೀತಿ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್ ನಾಪತ್ತೆಯಾಗಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡಿದ್ದು ಗೊತ್ತೇ ಇದೆ. ನಮ್ಮ ರಮ್ಯಾ ಮೇಡಂ ಸ್ಯಾಂಡಲ್ ವುಡ್ ನಿಂದ ನಾಪತ್ತೆಯಾಗಿಲ್ಲವೇ. ಇದೀಗ ಇದೇ ಹಾದಿನಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್ ಸಹ ಕಾಣಿಸುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

ಅಯ್ಯೋ ಕತ್ರಿನಾ ಎಲ್ಲಿ ಹೋದರು, ಸುದ್ದಿಯಿಲ್ಲ ಸುಳಿವಿಲ್ಲ ಎಂದು ಅವರ ಅಭಿಮಾನಿಗಳು ಕಂಗಾಲಾಗಿದ್ದಾರೆ. ಕೆಲವರಂತೂ ಮತ್ತೆ ಭಾರತಕ್ಕೆ ಬರಬೇಡಿ ಎಂದು ಟ್ವೀಟ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಕತ್ರಿನಾ ಏನಾದರು? ಎಲ್ಲಿ ಹೋದರು? ಎಂಬ ಬಗ್ಗೆ ಮಾತ್ರ ನಿಖರ ಮಾಹಿತಿ ಇಲ್ಲ. [ನಟಿ ಕತ್ರಿನಾ ಕೈಫ್ ಅಸಲಿ ಬಂಡವಾಳ ಬಯಲಾಗುತ್ತಾ?]

Bollywood actress Katrina Kaif goes missing

ಅವರ ಮೇನೇಜರ್ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ. ಒಂದೆರಡು ದಿನ ಕಾದರೆ ಏನಾಗಿದೆ ಎಂದು ತಿಳಿಯಬಹುದು ಎಂದು ಬಾಲಿವುಡ್ ಕಾಯುತ್ತಿದೆ. ಸದ್ಯಕ್ಕೆ ಕತ್ರಿನಾ ಮೂರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಸೈಫ್ ಆಲಿ ಖಾನ್ ಜೊತೆಗಿನ 'ಫಾಂಟಮ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದರ ಜೊತೆಗೆ ರಣಬೀರ್ ಕಪೂರ್ ಹಾಗೂ ಗೋವಿಂದ ಮುಖ್ಯಭೂಮಿಕೆಯಲ್ಲಿರುವ ಅನುರಾಗ್ ಬಸು ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ 'ಜಗ್ಗಾ ಜಾಸೋಸ್' ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಇನ್ನೊಂದು ಚಿತ್ರ 'ಫಿತೂರ್' ಚಿತ್ರೀಕರಣ ಹಂತದಲ್ಲಿದೆ. ಈ ಚಿತ್ರದಲ್ಲಿ ಆದಿತ್ಯರಾಯ್ ಕಪೂರ್ ಗೆ ಅವರು ಜೋಡಿ. (ಏಜೆನ್ಸೀಸ್)

English summary
Rumour is that Bollywood actress Katrina Kaif has gone missing. Apparently all attempts to reach her or her manager have failed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada