Cannes 2024 ; ಕಿಯಾರಾ ಅಡ್ವಾಣಿಯ ಪರದೇಶಿ ವ್ಯಾಮೋಹಕ್ಕೆ ಕೆಂಡದಂತಹ ಪ್ರತಿಕ್ರಿಯೆ...!

ಒಂದಲ್ಲ ಒಂದು ವಿಚಾರಕ್ಕೆ ಸೆಲೆಬ್ರೆಟಿಗಳು ಟ್ರೋಲಿಗೆ ಒಳಗಾಗುವುದು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಮತ್ತೊಂದು ಉದಾಹರಣೆ ಕಿಯಾರ ಅಡ್ವಾಣಿ.

ಹೌದು, ಯಾವ ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ನೆಲೆಯೂರಿ ಬರೋಬ್ಬರಿ ಒಂದು ದಶಕವನ್ನ ಯಶಸ್ವಿಯಾಗಿ ಪೂರೈಸಿರುವ ಕಿಯಾರಾ, ಮೊನ್ನೆ.. ಜಗದ್ವಿಖ್ಯಾತ ಕಾನ್ ಫಿಲ್ಮ್ ಫೆಸ್ಟಿವಲ್‌ ಗೆ ತೆರಳಿದ್ದರು. ಗುಲಾಬಿ ಮತ್ತು ಕಪ್ಪು ಬಣ್ಣದ ಆಫ್-ಶೋಲ್ಡರ್ ಗೌನ್‌ನಲ್ಲಿ ಮಿರ ಮಿರ ಮಿಂಚಿದರು.

Bollywood Actress Kiara Advani brutally trolled for her fake accent at Cannes 2024

ಇನ್ನೂ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕಿಯಾರಾಗೆ ಇದು ಮೊದಲ ಅನುಭವ. ಈ ಕಾರಣಕ್ಕೆ ಸಂಭ್ರಮದ ಅಲೆಯಲ್ಲಿದ್ದ ಕಿಯಾರಾ ಅಲ್ಲಿದ್ದ ಕ್ಯಾಮರಾ ಎದುರು ತಮ್ಮ ಅನುಭವ ಹಂಚಿಕೊಳ್ಳಲು ಮುಂದಾದರು. ಎಡವಟ್ಟಾಗಿದ್ದು ಇಲ್ಲಿಯೇ.

ನಗುಮೊಗವನ್ನೊತ್ತು ಮಾತನಾಡಲು ಶುರು ಮಾಡಿದ ಕಿಯಾರಾ, ತಾನು ಬಾಲಿವುಡ್‌ ನಾಯಕಿ ಅನ್ನುವುದನ್ನ ಮರೆತರು. ಹಾಲಿವುಡ್ ನಾಯಕಿಯರಿಗೆ ಸೆಡ್ಡು ಹೊಡೆಯುವ ಶಪಥ ಮಾಡಿದಂತೆ ತಮ್ಮ ಮೂಲ ಉಚ್ಚಾರಣೆಯನ್ನ ಮರೆತು ಮಾತನಾಡಿದರು.

ಇನ್ನೇನು.. ಮೊದಲೇ ಇಲಿ ಹೋದರೆ ಹುಲಿ ಹೋಯಿತು ಎನ್ನುವ ಕಾಲ ಇದು. ಇಂತಹ ಕಾಲದಲ್ಲಿ ನಕಲಿ ಉಚ್ಚಾರಣೆಯಿಂದ ತಗಲಾಕಿಕೊಂಡ ಕಿಯಾರಾ ಅವರನ್ನ ಅನೇಕರು ಸದ್ಯಕ್ಕೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಕಿಯಾರಾ ಅಡ್ವಾಣಿಯನ್ನ ಟ್ರೋಲ್ ಮಾಡುತ್ತಿದ್ದಾರೆ. ಯಾರನ್ನ ಮೆಚ್ಚಿಸಲು ಈ ಫೇಕ್ ಆಕ್ಸೆಂಟ್ ಬಳಕೆ ಮಾಡಿದ್ದೀರಾ ಎಂಬ ಪ್ರಶ್ನೆಯನ್ನ ಮಾಡುತ್ತಿದ್ದಾರೆ.

Bollywood Actress Kiara Advani brutally trolled for her fake accent at Cannes 2024

ವಿದೇಶಿ ನೆಲಕ್ಕೆ ಕಾಲಿಟ್ರೆ ಸಾಕು ಇವರ ಇಂಗ್ಲೀಷ್ ಮೇಲಿನ ಅಭಿಮಾನ ಜಾಗೃತವಾಗಿ ಬಿಡುತ್ತೆ ಎಂದು ಹೇಳ್ತಿರುವ ಅನೇಕರು, ಕೇವಲ ಇಂಗ್ಲೀಷ್ ಉಚ್ಚಾರಣೆ ಅಷ್ಟೇ ಅಲ್ಲ ಕಿಯಾರಾ ಅವರ ಹಿಂದಿ ಉಚ್ಚಾರಣೆ ಕೂಡ ಭಯಾನಕವಾಗಿದೆ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಅತಿ ವಿನಯಂ ಧೂರ್ತ ಲಕ್ಷಣಂ ಎಂದು ದೊಡ್ಡವರು ನಿಮ್ಮಂಥವರನ್ನ ನೋಡಿಯೇ ಹೇಳಿದ್ದಾರೆ ಎಂದರೆ ಈ ತರಹದ ಕಾರ್ಯಕ್ರಮದಲ್ಲಿ ಹೇಗೆ ಮಾತನಾಡಬೇಕು ಎನ್ನುವುದನ್ನ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರಿಂದ ಕಲಿಯಿರಿ ಎಂದು ಉಪದೇಶವನ್ನೂ ಮಾಡುತ್ತಿದ್ದಾರೆ.

ಇನ್ನೂ ನಕಲಿ ಉಚ್ಚಾರಣೆಯನ್ನ ಹೊರತು ಪಡಿಸಿ, ಕಿಯಾರಾ ಅಡ್ವಾಣಿ ಅವರ ವೇಷ ಭೂಷಣ ಕೂಡ ಅನೇಕರ ಕಣ್ಣನ್ನ ಕೆಂಪಾಗಿಸಿದೆ. ಇದಕ್ಕೆ ಕೈಗನ್ನಡಿ ಅನ್ನುವಂತೆ ಅನೇಕರು ಕಿಯಾರಾ ಅವರ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ.ಮೇಕಪ್ ಜಾಸ್ತಿಯಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ

ಒಟ್ನಲ್ಲಿ ಕಿಯಾರಾ ಅಡ್ವಾಣಿ ಸದ್ಯಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗುತ್ತಿದ್ದಾರೆ. ಕಿಯಾರಾ ಅವರ ಈ ಉಚ್ಚಾರಣೆಯಿಂದ ಬೇರೆಯವರು ಪಾಠ ಕಲಿತು ತಮ್ಮತನವನ್ನ ಬಿಟ್ಟುಕೊಡದೇ, ತಮ್ಮ ಬೇರು ಮರೆಯದೇ, ಸಹಜವಾದ ಶೈಲಿಯಲ್ಲಿಯೇ ಇನ್ನಾದರೂ ಮಾತನಾಡುವುದನ್ನ ಕಲಿಯುತ್ತಾರಾ ಅನ್ನುವುದನ್ನ ಕಾದು ನೋಡಬೇಕಿದೆ.

More from Filmibeat

English summary
Kiara Advani Faces Criticism for Alleged 'Fake Accent' During Cannes Appearance, Netizens Label it as Cringeworthy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X