ಕೃತಿ ಸನೊನ್ ಗೆ ಕೊರೊನಾ ಪಾಸಿಟಿವ್; ಶೀಘ್ರದಲ್ಲೇ ಕೆಲಸಕ್ಕೆ ಮರಳುತ್ತೇನೆ ಎಂದ ನಟಿ

ಬಾಲಿವುಡ್ ನ ಖ್ಯಾತ ನಟಿ ಕೃತಿ ಸನೊನ್ ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನಟಿ ಕೃತಿ ಸನೊನ್ ಸದ್ಯ ರಾಜ್ ಕುಮಾರ್ ರಾವ್ ನಾಯಕನಾಗಿ ನಟಿಸುತ್ತಿರುವ ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಸಿನಿಮಾದ ಚಿತ್ರೀಕರಣ ಚಂಡೀಗಢದಲ್ಲಿ ನಡೆಯುತ್ತಿದೆ.

ನಟಿ ನೀತು ಕಪೂರ್ ಮತ್ತು ವರುಣ್ ಧವನ್ ಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ನಟಿ ಕೃತಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ವರುಣ್ ಧವನ್ ಮತ್ತು ನೀತು ಕಪೂರ್ ಚಂಡೀಗಢದಲ್ಲಿ 'ಜಗ್ ಜಗ್ ಜೀಯೊ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಚಿತ್ರೀಕರಣ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡರೂ ಸಹ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದೀಗ ಕೃತಿ ಚಂಡೀಗಢದಿಂದ ಮುಂಬೈಗೆ ಬಂದಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೃತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

Bollywood Actress Kriti Sanon Tests Positive for Coronavirus

'ನನಗೆ ಕೊರೊನಾ ಪಾಸಿಟಿವ್ ಬಂದಿರುವುದು ನಿಜ. ನಾನು ಚೆನ್ನಾಗಿದ್ದೇನಿ. ಬಿಎಂಸಿ ಮತ್ತು ನನ್ನ ವೈದ್ಯರ ಸಲಹೆಯಂತೆ ನಾನು ಕ್ವಾರಂಟೈನ್ ಆಗಿದ್ದೇನೆ. ಭಯ ಪಡಬೇಕಾಗಿಲ್ಲ. ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣಕ್ಕೆ ಹೊರಡುತ್ತೇನೆ. ಎಲ್ಲರ ವಿಶ್ ಗಳನ್ನು ಓದುತ್ತಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಿ. ಕೊರೊನಾ ಇನ್ನೂ ಹೋಗಿಲ್ಲ.' ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಕೃತಿ ಸನೊನ್ ಗೆ ಅನೇಕರು ಶೀಘ್ರವೇ ಗುಣಮುಖರಾಗುವಂತೆ ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಪ್ರಾರ್ಥನೆ ಮಾಡುತ್ತಿದ್ದಾರೆ. ಟೈಗರ್ ಶ್ರಾಫ್, ಭೂಮಿ ಪಡ್ನೇಕರ್, ಏಕ್ತಾ ಕಪೂರ್, ಪ್ರೀತಿ ಜಿಂಟಾ ಸೇರಿದಂತೆ ಅನೇಕರು ಶೀಘ್ರ ಗುಣುಮುಖರಾಗುವಂತೆ ವಿಶ್ ಮಾಡಿದ್ದಾರೆ. ಎಲ್ಲರಿಗೂ ಕೃತಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನೂ ನಟ ವರುಣ್ ಧವನ್ ಚಂಡೀಗಢದ ಹೋಟೆಲ್ ನಲ್ಲೇ ಕ್ವಾರಂಟೈನ್ ಆಗಿದ್ದಾರೆ. ನಟಿ ನೀತು ಕಪೂರ್ ಮುಂಬೈಗೆ ತೆರಳಿದ್ದು, ಮನೆಯಲ್ಲೇ ಇದ್ದಾರೆ. ಎಲ್ಲರೂ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

More from Filmibeat

English summary
Bollywood Actress Kriti Sanon Tests Positive for Coronavirus. Tiger Shroff, Ekta Kapoor And other celebs send get well soon wishes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X