Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮುದುಕಿ' ಎಂದು ಮಲೈಕಾಗೆ ಮಹಾ ಮಂಗಳಾರತಿ ಮಾಡಿದ ಟ್ರೋಲಿಗರು
Recommended Video
ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳಿ ರಾತ್ರೋ ರಾತ್ರಿ ಸ್ಟಾರ್ ಆದ ರಾನು ಮೊಂಡಲ್ ಅತಿಯಾಗಿ ಮೇಕಪ್ ಮಾಡಿಕೊಂಡಿದ್ದ ಫೋಟೋ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಫೋಟೋ ನೋಡಿ ನೆಟ್ಟಿಗರು ರಾನು ಮೊಂಡಲ್ ಕಾಲೆಳೆದಿದ್ದರು.
ಈಗ ಸೇಮ್ ಟು ಸೇಮ್ ಇದೇ ಪರಿಸ್ಥಿತಿ ಬಾಲಿವುಡ್ ನಟಿ ಮಲೈಕಾ ಅರೋರಗೆ ಎದುರಾಗಿದೆ. ಮೊನ್ನೆ ಮೊನ್ನೆಯಷ್ಟೇ ನಟಿ ಮಲೈಕಾ ಅರೋರ ಒಂದು ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಮಲೈಕಾ ಅರೋರ ಮೇಕಪ್ ಮಾಡಿಕೊಂಡಿದ್ದರು.
ಒಂದು ಮಗುವಿನ ತಾಯಿಯಾಗಿ ಹೀಗಾ ಬಟ್ಟೆ ಹಾಕೊಳ್ಳೋದು.? ಟ್ರೋಲ್ ಆದ ಮಲೈಕಾ.!
ಮಲೈಕಾ ಅರೋರಾ ರವರ ಅತಿಯಾದ ಮೇಕಪ್ ಕಂಡು ನೆಟ್ಟಿಗರು ಮಹಾ ಮಂಗಳಾರತಿ ಮಾಡಿದ್ದಾರೆ. ಈ ಫೋಟೋದಲ್ಲಿ ಮಲೈಕಾ ಮುದುಕಿ ತರಹ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಮೂಗು ಮುರಿದಿದ್ದಾರೆ. ಮೇಕಪ್ ಇಲ್ಲದೇ ಮಲೈಕಾ ಚೆನ್ನಾಗಿ ಕಾಣುತ್ತಾರೆ. ಮೇಕಪ್ ಹಾಕಿಕೊಂಡರೆ ಥೇಟ್ ರಾನು ಮೊಂಡಲ್ ತರಹ ಕಾಣಿಸುತ್ತಾರೆ ಅಂತೆಲ್ಲಾ ನೆಟ್ಟಿಗರು ತಲೆಗೊಂಡು ಕಾಮೆಂಟ್ ಮಾಡುತ್ತಿದ್ದಾರೆ.
''ನೀವು ಮೇಕಪ್ ಮೇಲೆ ಇದ್ದೀರಾ ಅಥವಾ ಮೇಕಪ್ ನಿಮ್ಮ ಮೇಲೆ ಇದ್ಯಾ.?'', ''ವಯಸ್ಸಾದ ಆಂಟಿ'', ''ಹಳೇ ಮುದುಕಿ'', ''ರಾನು ಮೊಂಡಲ್'' ಎಂದೆಲ್ಲ ಟ್ರೋಲಿಗರು ಬಾಯಿಗೆ ಬಂದ ಕಾಮೆಂಟ್ ಹಾಕುತ್ತಿದ್ದಾರೆ.
ಬಿಕಿನಿ ತೊಟ್ಟಿರುವ ಮಲೈಕಾಗೆ ಇನ್ಸ್ಟಾಗ್ರಾಮ್ ನಲ್ಲಿ ಶೇಮ್ ಶೇಮ್.!
ಹಾಗ್ನೋಡಿದ್ರೆ, ಮಲೈಕಾ ಅರೋರ ಟ್ರೋಲಿಗರಿಗೆ ಆಹಾರವಾಗಿರುವುದು ಇದೇ ಮೊದಲೇನಲ್ಲ. ಸ್ವಿಮ್ ಸೂಟ್ ಧರಿಸಿದ ಫೋಟೋ ಶೇರ್ ಮಾಡಿದಾಗಲೂ, ನೆಟ್ಟಿಗರು ಮಲೈಕಾ ಕಾಲೆಳೆದಿದ್ದರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಜೊತೆಗಿನ ದಾಂಪತ್ಯ ಮುರಿದುಕೊಂಡಾಗ ನೆಟ್ಟಿಗರು ಮಲೈಕಾಗೆ ಛೀಮಾರಿ ಹಾಕಿದ್ದರು. ಯಾರು ಏನೇ ಹೇಳಿದರೂ, ಮಲೈಕಾ ಅರೋರ ಮಾತ್ರ ಯಾವುದಕ್ಕೂ ಕೇರ್ ಮಾಡಿಲ್ಲ.