ಮಲೈಕಾ ಅರೋರಾ ''ಯೋಗ'' ನೋಡುವುದೇ ಸುಯೋಗ ; 50 ರ ಹರೆಯದಲ್ಲಿ ಅಸೂಯೆಪಡುವಂತಹ ಮೈಕಟ್ಟು..!
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ನ ಮಲೈಕಾ ಅರೋರಾ ಪ್ರಮುಖರು. ವಯಸ್ಸು ಐವತ್ತಾದರೂ ಹದಿ ಹರೆಯದ ಯುವತಿಯರು ನಾಚುವಂತಹ ದೇಹ ಸಿರಿಯನ್ನ ಹೊಂದಿರುವ ಮಲೈಕಾ ಮತ್ತೊಮ್ಮೆ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.
ಹೌದು, ಮಲೈಕಾ ಮೊದಲಿಂದ ಯೋಗ ಪ್ರಿಯೆ. ಅರ್ಜುನ್ ಕಪೂರ್ ಅವರನ್ನ ಹೊರತು ಪಡಿಸಿದರೆ ಮಲೈಕಾ ಇಷ್ಟ ಪಡುವುದು ಯೋಗಾಸನವನ್ನೇ. ದಿನದ ಆಯಾಸ ಹೋಗಲಾಡಿಸಲು ಯೋಗದ ಮೊರೆ ಹೋಗುವ ಮಲೈಕಾ, ನಿನ್ನೆ ವಿಶ್ವ ಆರೋಗ್ಯ ದಿನದ ಪ್ರಯುಕ್ತ.. ತಮ್ಮ ಅದ್ಭುತ ಹಾಗೂ ವಿಶಿಷ್ಟ ಯೋಗ ಕಲೆಯನ್ನ ಪ್ರದರ್ಶಿಸಿದ್ದಾರೆ.

ಇನ್ನೂ.. ಸಾಮಾನ್ಯಕ್ಕೆ ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ಏಕಾಗ್ರತೆಗೊಳಿಸುವುದೇ ಯೋಗದ ಗುರಿ ಅನ್ನುವುದು ಅನೇಕರ ಅಭಿಪ್ರಾಯ. ಆದರೆ.. ಮಲೈಕಾ ಅವರ ಈ ಯೋಗಾಭ್ಯಾಸವನ್ನ ಕಂಡ ಅನೇಕರು ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಲೈಕಾ ಅರೋರಾ ಅವರ ಈ ವಿಡಿಯೋ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಮಲೈಕಾ ಸೌಂದರ್ಯವನ್ನ ಹಾಡಿ ಹೊಗಳುತ್ತಿದ್ದಾರೆ.
ಇದೆಲ್ಲದರ ನಡುವೆ ಮಲೈಕಾ ಅರೋರಾ ಅವರ ಈ ಯೋಗ ಭಂಗಿ, ಯೋಗಾಸನಕ್ಕೂ-ವ್ಯಾಯಾಮಕ್ಕೂ ಇರುವ ವ್ಯತ್ಯಾಸದ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಕೆಲವರು ಮಲೈಕಾ ಅವರ ಈ ಆಸನ- ಅಭ್ಯಾಸ ವ್ಯಾಯಾಮದ ಒಂದು ಭಾಗವೆಂದರೆ, ಇನ್ನೂ ಕೆಲವರು ಮಲೈಕಾ ನೆಲಹಾಸಿನ ಮೇಲೆ ಅಭ್ಯಾಸ ಮಾಡಿದ್ದಾರೆ. ಈ ಕಾರಣಕ್ಕೆ ಮಲೈಕಾ ಮಾಡಿದ್ದು ವ್ಯಾಯಾಮ ಅಲ್ಲ ಯೋಗ ಅನ್ನುವ ವಾದ ಮಾಡುತ್ತಿದ್ದಾರೆ.

ಉಳಿದಂತೆ ಕೆಲವು ನೆಗೇಟಿವ್ ಕಮೆಂಟ್ ಗಳನ್ನು ಬಿಟ್ಟರೆ ಮಲೈಕಾಗೆ ಪ್ರಶಂಸೆಗಳ ಸುರಿಮಳೆಯೇ ಬಂದಿದೆ. 'ನೀವು ಎಷ್ಟು ಫಿಟ್ ಆಗಿದ್ದೀರಿ, ನಿಮ್ಮ ಲೈಫ್ ಸ್ಟೈಲ್ ಚೆನ್ನಾಗಿದೆ, ನಮಗೂ ಈ ಕುರಿತು ಟಿಪ್ಸ್ ನೀಡಿರೆಂದು ಕೇಳಿಕೊಂಡಿದ್ದಾರೆ.
ಇನ್ನೂ ಚಿತ್ರರಂಗದ ವಿಚಾರಕ್ಕೆ ಬಂದರೆ ಮಲೈಕಾ ಅರೋರಾ ಕೈಯಲ್ಲಿ ಸದ್ಯಕ್ಕೆ ಯಾವ ಚಿತ್ರ ಇಲ್ಲ. ಅರ್ಜುನ್ ಕಪೂರ್ ಜೊತೆ ಮದುವೆಯಾಗ್ತಾರೆ ಅನ್ನುವ ಸುದ್ದಿ ಇದೆ. ಆದರೆ ಅದಕ್ಕೆ ಕಾಲ ಯಾವತ್ತು ಕೂಡಿ ಬರಲಿದೆ ಗೊತ್ತಿಲ್ಲ. ಸದ್ಯಕ್ಕೆ ಇಬ್ಬರು ಲಿವಿಂಗ್ ಟುಗೆದರ್ ನಲ್ಲಿದ್ದಾರೆ. ಬದುಕನ್ನ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











