twitter
    For Quick Alerts
    ALLOW NOTIFICATIONS  
    For Daily Alerts

    ಹರಿಯಾಣದಲ್ಲಿ ಹಿಂಸಾಚಾರ; ಮಲ್ಲಿಕಾ ಶೆರಾವತ್ ಹೇಳುವುದೇನು?

    By ರಮೇಶ್ ಬಿ
    |

    ಒಂದಲ್ಲಾ ಒಂದು ವಿವಾದಗಳಿಂದ ಸದಾ ಸದ್ದು-ಸುದ್ದಿ ಮಾಡುತ್ತಿದ್ದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಇದೀಗ ಸಮಾಜದ ಪರ ದನಿಯೆತ್ತಿದ್ದಾರೆ.

    ಹಿಂದುಳಿದ ವರ್ಗಕ್ಕೆ (ಒಬಿಸಿ) ತಮ್ಮ ಸಮುದಾಯವನ್ನು ಸೇರಿಸಬೇಕು, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಜಾಟ್ ಸಮುದಾಯ ಹರಿಯಾಣದಲ್ಲಿ ಹೋರಾಟ ನಡೆಸುತ್ತಿದೆ.

    ಜಾಟ್ ಸಮುದಾಯದ ಹೋರಾಟ ಹಿಂಸಾತ್ಮಕ ರೂಪ ಪಡೆದಿರುವುದರಿಂದ ಅನೇಕ ಕಡೆ ಹತ್ತಾರು ಜೀವಗಳು ಬಲಿಯಾಗಿವೆ.

    ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನಟಿ ಮಲ್ಲಿಕಾ ಶೆರಾವತ್, ಶಾಂತಿ ಕಾಪಾಡುವಂತೆ ಜಾಟ್ ಸಮುದಾಯಕ್ಕೆ ಟ್ವೀಟ್ ಮುಖಾಂತರ ಮನವಿ ಮಾಡಿದ್ದಾರೆ. ಮುಂದೆ ಓದಿ...

    ಹರಿಯಾಣ ಮೂಲದ ನಟಿ

    ಹರಿಯಾಣ ಮೂಲದ ನಟಿ

    ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಮೂಲತಃ ಹರಿಯಾಣದವರು. ತಮ್ಮ ಹುಟ್ಟೂರಿನಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಮಲ್ಲಿಕಾ ಶೆರಾವತ್ ಆತಂಕ ವ್ಯಕ್ತಪಡಿಸಿದ್ದಾರೆ.

    ಜಾಟ್ ಸಮುದಾಯಕ್ಕೆ ಸೇರಿದ ಮಲ್ಲಿಕಾ

    ಜಾಟ್ ಸಮುದಾಯಕ್ಕೆ ಸೇರಿದ ಮಲ್ಲಿಕಾ

    ನಿಮಗಿದು ಗೊತ್ತಿದ್ಯೋ, ಇಲ್ವೋ ಗೊತ್ತಿಲ್ಲ. ನಟಿ ಮಲ್ಲಿಕಾ ಶೆರಾವತ್ ಕೂಡ ಜಾಟ್ ಸಮುದಾಯಕ್ಕೆ ಸೇರಿದವರು.

    ಮಲ್ಲಿಕಾ ಶೆರಾವತ್ ಟ್ವೀಟ್

    'ಅಹಿಂಸೆ ಹಾಗೂ ಶಾಂತಿ ಕಾಪಾಡುವಂತೆ ಜಾಟ್ ಸಮುದಾಯಕ್ಕೆ ನನ್ನ ಕಳಕಳಿಯ ಮನವಿ'' ಎಂದು ನಟಿ ಮಲ್ಲಿಕಾ ಶೆರಾವತ್ ಟ್ವೀಟ್ ಮಾಡಿದ್ದಾರೆ.

    ಹರಿಯಾಣದಲ್ಲಿ ಹಿಂಸಾಚಾರ

    ಹರಿಯಾಣದಲ್ಲಿ ಹಿಂಸಾಚಾರ

    ಹರಿಯಾಣದಲ್ಲಿ ಬಸ್, ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಐದು ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಪ್ರತಿಭಟನಾಕಾರರು ದೆಹಲಿಗೆ ನೀರು ಪೂರೈಕೆ ಮಾಡುತ್ತಿದ್ದ ಮುನಕ್ ಕಾಲುವೆಯನ್ನು ಬಂದ್ ಮಾಡಿದ್ದಾರೆ.

    ಜಾಟ್ ಸಮುದಾಯದ ಹಿನ್ನಲೆ

    ಜಾಟ್ ಸಮುದಾಯದ ಹಿನ್ನಲೆ

    ಜಾಟ್ ಸಮುದಾಯದ ಅಸ್ತಿತ್ವ ಭಾರತದಲ್ಲಿ ಸಿಂಧೂ ನಾಗರಿಕತೆಯ ಕಾಲದಿಂದ ಇದೆ. ಮೂಲತಃ ಕೃಷಿಕರಾದ ಇವರು ಉತ್ತರ ಭಾರತ ಮತ್ತು ಪಾಕಿಸ್ತಾನದ ಹಲವೆಡೆ ನೆಲೆಸಿದ್ದಾರೆ. ದೆಹಲಿ, ಹರಿಯಾಣ, ಪಂಜಾಬ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಬ್ರಿಟಿಷರ ಕಾಲದಲ್ಲಿ ಜಾಟ್ ಸಮುದಾಯದ ಕೃಷಿಕರಿಂದ ತೆರಿಗೆ ಪಡೆಯಲು ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಸರ್ ಡೆನ್ಜಿಲ್ ಎಬೆಟ್ಸನ್ ಹೇಳಿದ್ದಾರೆ

    ಜಾಟ್ ಸಮುದಾಯದ ಬೇಡಿಕೆಗಳೇನು?

    ಜಾಟ್ ಸಮುದಾಯದ ಬೇಡಿಕೆಗಳೇನು?

    ಹರಿಯಾಣದ ಒಟ್ಟು ಜನಸಂಖ್ಯೆಯಲ್ಲಿ ಶೇ.29 ಜಾಟ್ ಸಮುದಾಯದವರಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಷ್ಟೇನೂ ಹಿಂದುಳಿದ ವರ್ಗವಲ್ಲವಾದರೂ, ಶೈಕ್ಷಣಿಕವಾಗಿ ಮೀಸಲಾತಿಗಾಗಿ ಆಗ್ರಹಿಸುತ್ತಿದ್ದಾರೆ. ಜಾತಿ ಆಧಾರದಲ್ಲಿ ತಮ್ಮ ಸಮುದಾಯವನ್ನು ಒಬಿಸಿ ವರ್ಗದಡಿ ಪರಿಗಣಿಸುವಂತೆ ಕೋರಿದ್ದಾರೆ.

    English summary
    Bollywood Actress Mallika Sherawat appealed in twitter to the Jat community to maintain peace and nonviolence.
    Wednesday, February 24, 2016, 17:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X