ಹನಿಮೂನ್ ಗೆಂದು ಅಮೇರಿಕಕ್ಕೆ ಹೊರಟ ನೇಹಾ ಧೂಪಿಯಾ ದಂಪತಿ
ನಿನ್ನೆಯಷ್ಟೇ (ಮೇ 10) ದೆಹಲಿಯಲ್ಲಿ ಸಿಖ್ ಸಂಪ್ರದಾಯದಂತೆ ಮದುವೆ ಆದ ನಟಿ ನೇಹಾ ಧೂಪಿಯಾ ಹಾಗೂ ನಟ ಅಂಗದ್ ಸಿಂಗ್ ಬೇಡಿ ಇಂದು ಹನಿಮೂನ್ ಗೆಂದು ವಿದೇಶಕ್ಕೆ ಹಾರಿದರು.
ಮದುವೆ ಬಗ್ಗೆ ಮಾಧ್ಯಮಗಳಿಗೆ ಗುಟ್ಟು ಬಿಟ್ಟುಕೊಡದೆ, ಕುಟುಂಬಸ್ಥರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ನಾಂದಿ ಹಾಡಿದರು ನೇಹಾ ಧೂಪಿಯಾ ಹಾಗೂ ಅಂಗದ್ ಸಿಂಗ್ ಬೇಡಿ.
ವರ್ಷಗಳ ಕಾಲ ಪ್ರೀತಿಸಿ, ಮದುವೆ ಆದ ಈ ಜೋಡಿ ಇಂದು ಮುಂಜಾನೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡರು. ವರದಿಗಳ ಪ್ರಕಾರ, ನವ ದಂಪತಿಗಳು ಹನಿಮೂನ್ ಗೆಂದು ಯು.ಎಸ್.ಎಗೆ ಹಾರಿದ್ದಾರೆ.

35 ವರ್ಷ ವಯಸ್ಸಿನ ಅಂಗದ್ ಸಿಂಗ್ ಬೇಡಿ ಮಾಡೆಲ್ ಹಾಗೂ ನಟ.2011 ರಲ್ಲಿ ಬಿಡುಗಡೆ ಆದ 'ಫಾಲ್ತು' ಸೇರಿದಂತೆ 'ಪಿಂಕ್', 'ಟೈಗರ್ ಜಿಂದಾ ಹೇ' ಚಿತ್ರಗಳಲ್ಲಿ ಅಂಗದ್ ಸಿಂಗ್ ಬೇಡಿ ಅಭಿನಯಿಸಿದ್ದಾರೆ. ಕಿರುತೆರೆಯ 'ಎಮೋಷನಲ್ ಅತ್ಯಾಚಾರ' ಸೇರಿದಂತೆ ಹಲವು ಶೋಗಳಿಗೆ ಹೋಸ್ಟ್ ಆಗಿದ್ದವರು ಅಂಗದ್ ಸಿಂಗ್ ಬೇಡಿ.
ಇನ್ನೂ ನೇಹಾ ಧೂಪಿಯಾ 2002 ರ 'ಮಿಸ್ ಇಂಡಿಯಾ' ಹಾಗೂ ಬಾಲಿವುಡ್ ನಟಿ. 'ಕ್ಯಾ ಕೂಲ್ ಹೇ ಹಮ್', 'ದಸ್ ಕಹಾನಿಯಾ', 'ಚುಪ್ ಚುಪ್ ಕೇ', 'ಸಿಂಗ್ ಈಸ್ ಕಿಂಗ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನೇಹಾ ಧೂಪಿಯಾ ಅಭಿನಯಿಸಿದ್ದಾರೆ.


Click it and Unblock the Notifications











