ಪಶ್ಚಾತಾಪದ ಅಗ್ನಿಕುಂಡದಲ್ಲಿ ಪರಿಣಿತಿ ಚೋಪ್ರಾ ; ನನ್ನೆಲ್ಲ ಸೋಲುಗಳಿಗೆ ಆ ವ್ಯಕ್ತಿಗಳೇ ಕಾರಣ ಎಂದ ನಟಿ..!
ಪ್ರಿಯಾಂಕ ಚೋಪ್ರಾ ನೆರಳಿನಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನವನ್ನ ಮಾಡಿದವರು ಪರಿಣಿತಿ ಚೋಪ್ರಾ. ಆದರೆ.. ಬಾಲಿವುಡ್ ನಲ್ಲಿ ಪ್ರಿಯಾಂಕ ಗೆ ಸಿಕ್ಕ ಬೆಲೆ ಪರಿಣಿತಿಯಲ್ಲಿದ್ದ ಕಲೆಗೆ ಸಿಗಲಿಲ್ಲ. ರಾಷ್ಟ್ರ ಪ್ರಶಸ್ತಿ ಪಡೆದರು ಬಾಲಿವುಡ್ ಕ್ಯಾರೇ ಅನ್ನಲಿಲ್ಲ. ಕಾರಣ.. ಕರಣ್ ಜೋಹರ್ ಸೇರಿ ಬಾಲಿವುಡ್ ನ ಕೆಲ ನಿರ್ಮಾಪಕರಿಗಷ್ಟೇ ಗೊತ್ತಾದರೂ, ಸದ್ಯಕ್ಕೆ ಪರಿಣಿತಿ ಚೋಪ್ರಾ ಆರಕ್ಕೇರದ.. ಮೂರಕ್ಕಿಳಿಯದ.. ತಮ್ಮ ಚಿತ್ರ ಜೀವನದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ತಮ್ಮ ಗೆಲುವು ಸೋಲಿನ ಕಥೆಯನ್ನ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ
ಹೌದು, ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪರಿಣಿತಿ, ವೃತ್ತಿ ಬದುಕಿನ ಆರಂಭದಲ್ಲಿ.. ಈ ಬಣ್ಣದ ಪ್ರಪಂಚ ನನಗೆ ಸಂಪೂರ್ಣ ಹೊಸದಾಗಿತ್ತು, ತಪ್ಪು ಸರಿಗಳೇನೆಂದು ಗೊತ್ತಾಗದ ಮನಸ್ಥಿತಿ ಅದು. ಈ ಕಾರಣಕ್ಕೆ.. ಸಲಹೆ..ಸೂಚನೆಯನ್ನ ಪಡೆಯಲು ಮುಂದಾದೆ, ಇಲ್ಲಿಯೇ ನಾನು ಎಡವಿದ್ದು ಎಂದಿದ್ದಾರೆ ಪರಿಣಿತಿ ಚೋಪ್ರಾ.

ನನ್ನ ಸುತ್ತ ಮುತ್ತ ಇದ್ದ ಜನರೇ ನನ್ನ ದಾರಿಯನ್ನ ತಪ್ಪಿಸಿದರು ಎಂದಿರುವ ಪರಿಣಿತಿ, ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರಲು .. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು .. ತಪ್ಪು ಹೆಜ್ಜೆಯನ್ನ ಇಟ್ಟಿದ್ದೇನೆ ಎಂದಿದ್ದಾರೆ. ಇನ್ನೂ ಪಾತ್ರಕ್ಕೆ ಹಾಗೂ ಚಿತ್ರಕ್ಕೆ ನನ್ನಿಂದ ನ್ಯಾಯ ಸಲ್ಲಿಸಲು ಸಾಧ್ಯವಾಗದೇ ಇದ್ದರೂ ಕೂಡ ಬೇರೆಯವರ ಮಾತು ಕೇಳಿ ನಾನು ಚಿತ್ರವನ್ನ ಒಪ್ಪಿಕೊಂಡಿದ್ದು ಇದೆ ಅದರಿಂದ ಚಿತ್ರದ ಜೊತೆ ನಾನು ಸೋತಿದ್ದು ಇದೆ ಎಂದಿದ್ದಾರೆ. ಇಷ್ಟೇ ಅಲ್ಲ ನನ್ನಿಂದ ಆದ ಈ ಘನಘೋರ ತಪ್ಪುಗಳಿಂದ ಇವತ್ತು ಕೂಡ ನಾನು ಪಶ್ಚಾತಾಪ ಪಡುತ್ತಿದ್ದೇನೆ ಎಂದಿದ್ದಾರೆ. ನನ್ನ ಮನದ ಮಾತನ್ನ ನಾನು ಕೇಳಿ, ಬಾಲಿವುಡ್ ನಲ್ಲಿ ನಡೆದಿದ್ದರೆ.. ನನ್ನ ಬದುಕಿನ ಕಥೆ ಇವತ್ತು ಬೇರೆಯೇ ಇರುತ್ತಿತ್ತು ಎಂದಿದ್ದಾರೆ ಪರಿಣಿತಿ ಚೋಪ್ರಾ

ನಿಜಾ.. ನಾನು ಎಡವಿದ್ದೇನೆ.. ತಪ್ಪು ಮಾಡಿದ್ದೇನೆ.. ಆದರೆ, ಆ ತಪ್ಪುಗಳಿಂದ, ನನ್ನಲ್ಲಿನ ಪ್ರತಿಭೆಯನ್ನ, ಕಾರ್ಯ ಕ್ಷಮತೆಯನ್ನ ಅಳೆಯುವುದು ತಪ್ಪು ಎಂದಿರುವ ಪರಿಣಿತಿ ಚೋಪ್ರಾ, ನನಗೆ ಕೆಲಸ ಕೊಡಿ ಆಮೇಲೆ ನೋಡಿ ಎಂದಿದ್ದಾರೆ. ಇಷ್ಟೆಲ್ಲ ತಪ್ಪು ಹೆಜ್ಜೆಯನ್ನ ಇಟ್ಟರೂ ಕೂಡ ಇವತ್ತು ಕೂಡ ನಾನು ಬಾಲಿವುಡ್‌ನಲ್ಲಿಯೇ ಇರಲು ಕಾರಣ ನನ್ನಲ್ಲಿರುವ ಪ್ರತಿಭೆಯೇ ಕಾರಣ ಹೊರತು ಬೇರೆನೂ ಅಲ್ಲ ಎಂದು ಪರಿಣಿತಿ ಚೋಪ್ರಾ ಹೇಳಿದ್ದಾರೆ

ಅಂದ್ಹಾಗೇ ಕಳೆದ ವಾರವಷ್ಟೇ ಪರಿಣಿತಿ ಅಭಿನಯದ ಅಮರ್ ಸಿಂಗ್ ಚಮ್ಕಿಲಾ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರದಲ್ಲಿ ಪರಿಣಿತಿ ಚೋಪ್ರಾ ತಮ್ಮ ಅಭಿನಯ ಸಾಮರ್ಥ್ಯವನ್ನ ಸಾಬೀತು ಮಾಡಿದ್ದಾರೆ. ಅಮರಜೋತ್ ಕೌರ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಇದೇ ಚಿತ್ರದ ಪ್ರಚಾರದ ಸಮಯದಲ್ಲಿ ಪರಿಣಿತಿ ತಮ್ಮ ಈ ಮನದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಇನ್ನೂ ಇದೆಲ್ಲದರ ನಡುವೆ ಪರಿಣಿತಿ ಚೋಪ್ರಾ ಗರ್ಭಿಣಿಯಾಗಿದ್ದಾರೆ ಅನ್ನುವ ವದಂತಿ ಕೂಡ ಇದೆ. ಈ ವದಂತಿಯನ್ನ ಕೇಳಿ ಪರಿಣಿತಿ ಚೋಪ್ರಾ ನಕ್ಕು ಸುಮ್ಮನಾಗಿದ್ದರಷ್ಟೇ


Click it and Unblock the Notifications











