»   » ಮತ್ತೆ ರಂಗದಲ್ಲಿ ಸೊಂಟ ಬಳುಕಿಸಲು ಪೂನಂ ರೆಡಿ

ಮತ್ತೆ ರಂಗದಲ್ಲಿ ಸೊಂಟ ಬಳುಕಿಸಲು ಪೂನಂ ರೆಡಿ

By: ಸೋನು ಗೌಡ
Subscribe to Filmibeat Kannada

ಬೆನ್ನು ಉಳುಕಿದ್ದರಿಂದ ತೀವ್ರ ಥರದ ನೋವು ಅನುಭವಿಸಿದ್ದ ಬಾಲಿವುಡ್ ಬಿಚ್ಚಮ್ಮ ಪೂನಂ ಪಾಂಡೆ ಮತ್ತೆ ರಂಗಕ್ಕೆ ಇಳಿಯತ್ತಿದ್ದಾರೆ.

'ಹೆಲನ್' ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಬೆಲ್ಲಿ ಡಾನ್ಸ್ ಮಾಡುತ್ತಿರುವಾಗ ಪೂನಂ ಪಾಂಡೆ ಅವರ ಬೆನ್ನು ಉಳುಕಿ ಚಿತ್ರೀಕರಣ ಅರ್ಧಕ್ಕೆ ನಿಂತುಹೋಗಿತ್ತು. ಇದೀಗ ಚೇತರಿಸಿಕೊಂಡಿರುವ ಪೂನಂ ಪಾಂಡೆ ಮತ್ತೆ ಚಿತ್ರೀಕರಣದಲ್ಲಿ ಸದ್ಯದಲ್ಲೇ ಪಾಲ್ಗೊಳ್ಳುತ್ತಾರಂತೆ.

Bollywood actress Poonam Pandey, returns back to shooting for the movie 'Helen'

ಪೂನಂ ಪಾಂಡೆ ವಾಪಸ್ ಬರುತ್ತಿದ್ದಾರೆ ಅಂದ್ರೆ ಇನ್ನೂ ಕೇಳೋದೇ ಬೇಡ, ಸದ್ಯಕ್ಕೆ ಈ ಹಾಟ್ ನ್ಯೂಸ್ ಕೇಳಿದ ಪಡ್ಡೆ ಹೈಕಳ ಮೈ ಬೆಚ್ಚಾಗಾಗಿದ್ದು, ಅಂತೂ ಗ್ಯಾರಂಟಿ.[ಹುಡುಗರ ಮೈ ಬಿಸಿ ಮಾಡುವ ಪೂನಂ ಪಾಂಡೆಗೆ ಚಳಿ]

ಈ ಮೊದಲು ಮುಂಬೈನ ಸ್ಟುಡಿಯೋ ಒಂದರಲ್ಲಿ ಸುಮಾರು ಒಂದು ಕೋಟಿ ಖರ್ಚು ಮಾಡಿ ಹಾಡಿನ ಚಿತ್ರೀಕರಣಕ್ಕೆ ಅದ್ದೂರಿ ಸೆಟ್ ಹಾಕಲಾಗಿತ್ತು ಆದರೆ ಪೂನಂ ಪಾಂಡೆ ಅವರಿಗೆ ಬೆನ್ನಿನ ಸಮಸ್ಯೆ ಆಗಿದ್ದರಿಂದ ಶೂಟಿಂಗ್ ಅರ್ಧಕ್ಕೆ ನಿಂತುಹೋಗಿತ್ತು.

ಇದೀಗ ವೈದ್ಯರ ಸಲಹೆಯಂತೆ ಆರೋಗ್ಯ ಸುಧಾರಣೆಯಾಗಿ ಚೇತರಿಸಿಕೊಂಡಿರುವ ನಟಿ ಪೂನಂ ಪಾಂಡೆ ಇನ್ನೊಂದು ತಿಂಗಳ ಒಳಗಡೆ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮತ್ತೆ ಶೂಟಿಂಗ್ ಗೆ ಹಾಜರಾಗುತ್ತಿದ್ದಾರಂತೆ.[ಸನ್ನಿಗೂ, ಪಾಂಡೆಗೂ ಯೋಗರಾಜ ಭಟ್ರರ ಸವಾಲು!]

Bollywood actress Poonam Pandey, returns back to shooting for the movie 'Helen'

ಈ ಹಿಂದೆ ಪೂನಂ ಪಾಂಡೆ ನಟನೆಯ 'ನಶಾ' ಚಿತ್ರಕ್ಕಾಗಿ ಸಂಗೀತ ಮತ್ತು ನೃತ್ಯ ನಿರ್ದೇಶನ ಮಾಡಿದ್ದ ಅಜಿತ್ ರಾಜ್ಪಾಲ್ ಅವರೇ ಮತ್ತೆ 'ಹೆಲೆನ್' ಚಿತ್ರಕ್ಕೂ ಸಂಗೀತ ಹಾಗೂ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.[ನೂರು ಕೋಟಿ ಮೇಲೆ ಕಣ್ಣಿಟ್ಟ ನಟಿ ಪೂನಂ ಪಾಂಡೆ]

ಹೆಸರೇ ಹೇಳುವಂತೆ 'ಹೆಲೆನ್' ಪ್ರೆಕ್ಷಕರಲ್ಲಿ ಕುತೂಹಲ ಮೂಡಿಸುವ ಸಿನಿಮಾವಂತೆ, ಮಾತ್ರವಲ್ಲದೇ ಈ ಸಿನಿಮಾ ಪೂನಂ ಪಾಂಡೆ ಅವರಿಗೆ ಬ್ರೇಕ್ ನೀಡುವ ಚಿತ್ರವಾಗಲಿದೆಯಂತೆ.

ಅದೇನೇ ಇರಲಿ ಒಟ್ನಲ್ಲಿ ಪೂನಂ ಪಾಂಡೆ ಮತ್ತೆ ಬಿಟೌನ್ ಗೆ ಕಾಲಿಟ್ಟಿರುವುದು ಕಂಡರೆ ಇನ್ನೂ ಎಲ್ಲೆಡೆ ಪಾಂಡೆ ಹವಾ ಎಬ್ಬಿಸೋದು ಗ್ಯಾರಂಟಿ ಅಂತ ಅಂದ್ರು ತಪ್ಪಾಗ್ಲಿಕ್ಕಿಲ್ಲಾ.

English summary
Bollywood actress Poonam Pandey, returns back to shoot in the movie of 'Helen' after recovering from back injury. 'Helen' movie is directed by Suresh Nakum.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada