ಬಾಳೆ ಹಣ್ಣಿನ ಜ್ಯೂಸ್ ಮಾಡಿ ಕಿಕ್ಕೇರಿಸಿದ ಪೂನಂ ಪಾಂಡೆ...!

ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರು ಪೂನಂ ಪಾಂಡೆ. ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡ ಪೂನಂ ಪಾಂಡೆ ತನ್ನ ದೇಹಸಿರಿಯನ್ನ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಕೂಡ ಗಮನ ಸೆಳೆಯುವ ಪ್ರಯತ್ನ ಮಾಡ್ತಾರೆ. ಸುದ್ದಿಯಾಗ್ತಾರೆ. ಇಂಥ ಪೂನಂ ಪಾಂಡೆ ಈಗ ಮತ್ತೊಮ್ಮೆ-ಮಗದೊಮ್ಮೆ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದಾರೆ. ತಮ್ಮ ಮಾದಕ ಮೈಮಾಟದಿಂದ ರಸಿಕರ ಕಣ್ಣರಳಿಸಿದ್ದಾರೆ

ಹೌದು..ಅಸಲಿಗೆ ತಮ್ಮ ಜೀವನ ಶೈಲಿಯ ಪ್ರತಿಯೊಂದು ವಿಚಾರವನ್ನ ಎಲ್ಲರ ಮುಂದೆ ಹಂಚಿಕೊಳ್ಳುತ್ತಾ, ದಿನನಿತ್ಯದ ತಮ್ಮ ಚಟುವಟಿಕೆಯನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಖಯಾಲಿಯನ್ನ ಹೊಂದಿರುವ ಪೂನಂ ಪಾಂಡೆ ,ಈಗ ಸೀದಾ ಮತ್ತೊಮ್ಮೆ ತಮ್ಮ ಅಡುಗೆ ಮನೆಗೆ ಎಲ್ಲರನ್ನ ಕರೆದೊಯ್ದಿದ್ದಾರೆ.

Bollywood Actress Poonam Pandey Shares Recipe Of Banana Juice

ಬಾಳೆ ಹಣ್ಣಿನ ಜ್ಯೂಸ್ ಮಾಡಿ ತೋರಿಸಿದ್ದಾರೆ. ಸದ್ಯಕ್ಕೆ.. ಪೂನಂ ಅವರ ಈ ಕೈಚಳಕಕ್ಕೆ ಪಡ್ಡೆಗಳ ಹೃದಯ ಖುಷ್ ಆಗಿದೆ. ಇನ್ನೂ ತಮ್ಮ ಈ ಜ್ಯೂಸ್‌ಗೆ ಏನೆಂದು ಹೆಸರಿಡಬೇಕು ಅನ್ನುವುದು ಪೂನಂಗೆ ಗೊತ್ತಾಗಿಲ್ಲ. ಹೀಗಾಗಿಯೇ.. ಈ ರೆಸಿಪಿಗೆ ಏನೆಂದು ಹೆಸರಿಡಲಿ ಎಂದು ಅಭಿಮಾನಿಗಳನ್ನು ಪೂನಂ ಪಾಂಡೆ ಪ್ರಶ್ನಿಸಿದ್ದಾರೆ. ಅದಕ್ಕೆ ಥರೇಹವಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಪೂನಂ ಪಾಂಡೆ ಪ್ರಿಯರು.

ಅಂದ್ಹಾಗೇ ಸದಾ ಕಾಲ ಅರೆ ಬೆತ್ತಲೆ ಭಾವ ಚಿತ್ರ ಹಾಕಿ ಪಡ್ಡೆ ಹುಡುಗರ ಭಾವನೆಯನ್ನ ಕೆಣಕುತ್ತಿದ್ದ ಪೂನಂ ಪಾಂಡೆ,ಒಂದು ಬಾಳೆ ಹಣ್ಣು, ಐಸ್‌ಕ್ರೀಮ್, ಹಾಲು, ಡ್ರೈ ಫ್ರ್ಯೂಟ್ಸ್, ಚಾಕೋಲೇಟ್ ಬಳಸಿ ಪೂನಂ ಪಾಂಡೆ ಈ ಜ್ಯೂಸ್ ತಯಾರಿಸಿದ್ದಾರೆ.

Bollywood Actress Poonam Pandey Shares Recipe Of Banana Juice

ಇನ್ನೂ.. ಆಹಾರಪ್ರಿಯರಿಗಾಗಿಯೇ ಎಂದೇ ಫುಡ್‌ಗಾಸಮ್‌ ಎಂಬ ಸರಣಿಯನ್ನೂ ಶುರುಮಾಡಿರುವ ಪೂನಂ ಪಾಂಡೆ ಈ ಹಿಂದೆ ಮಾವಿನ ಹಣ್ಣಿನ ರೆಸಿಪಿಯೊಂದನ್ನು ತಮ್ಮ ಸಮಸ್ತ ಅಭಿಮಾನಿಗಳಿಗೆ ಹಂಚಿಕೊಂಡಿದ್ದರು. ಕೇಕ್ ವಿಥ್ ಐಸ್‌ಕ್ರೀಮ್ ರೆಸಿಪಿಯೊಂದನ್ನೂ ನೀಡಿದ್ದರು. ಚಾಕೋಲೇಟ್ ಕೇಕ್ ತಯಾರಿಸಿ ಅದನ್ನು ಐಸ್‌ಕ್ರೀಮ್ ಜೊತೆ ತಿಂದು ಬಾಯಿ ಚಪ್ಪರಿಸಿದ್ದರು.

ಸದ್ಯಕ್ಕೆ ಪೂನಂ ಪಾಂಡೆ ಅವರ ಈ ಬಾಳೆ ಹಣ್ಣಿನ ಜ್ಯೂಸ್‌ ನೋಡಿ ಅನೇಕರ ಬಾಯಲ್ಲಿ ನೀರು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಣ್ತುಂಬಿಕೊಂಡು ಒಂದು ವರ್ಗ ಪೂನಂ ಪಾಂಡೆಯವರ ಆರಾಧನೆಯನ್ನೂ ಮಾಡುತ್ತಿದೆ. ಇನ್ನೂ ಕೆಲವರು ಈ ರೆಸಿಪಿಯ ಬಗ್ಗೆ ತಿಳಿದುಕೊಳ್ಳಲು ಪೂನಂ ಪಾಂಡೆ ಅವರ ಇನ್ಸ್ಟಾಗ್ರಾಮ್‌ಗೆ ಲಗ್ಗೆ ಇಡುತ್ತಿದ್ದಾರೆ.

ವೀಡಿಯೋ ನೋಡುತ್ತಾ ಪೂನಂ ಪಾಂಡೆ ಅವರಂತೆಯೇ ಜ್ಯೂಸ್ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪೂನಂ ಪಾಂಡೆಯವರ ಈ ವಿಡಿಯೋ ಮೇಲೆ ಲೈಕ್.. ಕಮೆಂಟ್ ಮತ್ತು ಶೇರ್‌ಗಳ ಸುರಿಮಳೆ ಆಗ್ತಿದೆ. ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪೂನಂ ಪಾಂಡೆಯ ಈ ಹಾಟ್ ಲುಕ್ ವೈರಲ್ ಆಗುತ್ತಿದೆ. ಉಳಿದಂತೆ ಬಾಲಿವುಡ್‌ನಲ್ಲಿ ಪೂನಂ ಪಾಂಡೆಗೆ ಮಾಡಲು ಹೆಚ್ಚಿನ ಕೆಲಸವೇನೂ ಇಲ್ಲ. ಹೀಗಾಗಿ ಚಾಲ್ತಿಯಲ್ಲಿರಲು ಪೂನಂ ಈ ತರಹದ ಸಾಹಸ ಮಾಡ್ತಿರ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತಹದ್ದೇ.

More from Filmibeat

English summary
Viral Video, Bollywood actress Poonam Pandey recently shared a refreshing recipe for banana juice, showcasing her culinary skills beyond the screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X