ಪ್ರಿಯಾಂಕಾ ಚೋಪ್ರ ಮತ್ತು ಫರಾನ್ ಅಖ್ತರ್ ಬೆಡ್ ರೂಮ್ ದೃಶ್ಯ ಲೀಕ್

Recommended Video

Priyanka Chopra's Beautiful scene with Farhan Akhtar leaked from the movie Sky is Pink

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜೊತೆ ಯು ಎಸ್ ಎಯಲ್ಲಿ ನೆಲೆಸಿದ್ದಾರೆ. ಮದುವೆ ನಂತರ ಪ್ರಿಯಾಂಕಾ ಅಭಿನಯದ ಸಿನಿಮಾಗಳು ತೆರೆಗೆ ಬಂದಿಲ್ಲ. ನಿಕ್ ಜೋನಸ್ ಕೈ ಹಿಡಿದ ಬಳಿಕ ಬಾಲಿವುಡ್ ನಿಂದ ಸ್ವಲ್ಪ ಅಂತರ ಕಾಯ್ದು ಕೊಂಡಿದ್ದ ಪ್ರಿಯಾಂಕಾ ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ.

ಪ್ರಿಯಾಂಕಾ ಈಗ ಮತ್ತೆ ಸುದ್ದಿಯಲ್ಲಿರುವುದು ನಟ ಫರಾನ್ ಅಖ್ತರ್ ಜೊತೆ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಮೂಲಕ. ಹೌದು, ಇಬ್ಬರ ಬೆಡ್ ರೂಮ್ ದೃಶ್ಯ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರು ಮುದ್ದಾಡುತ್ತಿರುವ ಈ ಖಾಸಗಿ ವಿಡಿಯೋ ನೋಡಿ ಪ್ರಿಯಾಂಕಾ ನಿಕ್ ಜೋನಸ್ ಯಿಂದ ದೂರ ಆಗ್ಬಿಟ್ರಾ ಅಂತ ಅಂದ್ಕೋಬೇಡಿ. ಸದ್ಯ ವೈರಲ್ ಆಗಿರುವ ವಿಡಿಯೋ ಪ್ರಿಯಾಂಕಾ ಮತ್ತು ಫರಾನ್ ಅಭಿನಯದ ಸ್ಕೈ ಈಸ್ ಪಿಂಕ್ ಚಿತ್ರದ್ದು.

ಇತ್ತೀಚಿಗಷ್ಟೆ ಸ್ಕೈ ಈಸ್ ಪಿಂಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರತಂಡ ಸದ್ಯ ಭರ್ಜರಿ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಇದರ ನಡುವೆ ಚಿತ್ರದ ರೋಮ್ಯಾಂಟಿಕ್ ದೃಶ್ಯ ಲೀಕ್ ಆಗಿದೆ. ಆದ್ರೆ ಇದು ಕೂಡ ಪ್ರಮೋಷನ್ ಗಿಮಿಕ್ ಆಗಿರಬಹುದ ಎನ್ನುವುದು ಅನುಮಾನ ಮೂಡಿಸಿದೆ.

Bollywood Actress Priyanka Chopra And Farhan Akhtar Bedroom Scene Leaked

ಪ್ರಿಯಾಂಕಾ ಚೋಪ್ರಾ ಮತ್ತು ಫರಾನ್ ಅಖ್ತರ್ ಇಬ್ಬರು ಎರಡನೆ ಬಾರಿಗೆ ತೆರೆ ಮೇಲೆ ಮಿಂಚುತ್ತಿದ್ದಾರೆ. ಈ ಮೊದಲು ದಿಲ್ ಧಡಕ್ನೆ ದೋ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಸ್ಕೈ ಈಸ್ ಪಿಂಕ್ ಚಿತ್ರದ ಮೂಲಕ ಮತ್ತೆ ಒಟ್ಟಿಗೆ ಬರುವುತ್ತಿರುವುದನ್ನು ನೋಡಲು ಪ್ರೇಕ್ಷಕರು ಕಾತುರಾಗಿದ್ದಾರೆ.

ಅಂದ್ಹಾಗೆ ಸ್ಕೈ ಈಸ್ ಪಿಂಕ್ ಸೊನಾಲಿ ಬೋಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ವಿಶೇಷ ಅಂದ್ರೆ ಇತ್ತೀಚಿಗೆ ಬಾಲಿವುಡ್ ನಿಂದ ದೂರ ಸರಿಯುವ ನಿರ್ಧಾರ ಮಾಡಿರುವ ನಟಿ ಝೈರಾ ವಾಸಿಂ ಕೂಡ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದೆ.

More from Filmibeat

English summary
Bollywood actress Priyanka Chopra and Farhan Akhtar bedroom scene leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X