ನಿದ್ರೆಯಲ್ಲಿದ್ದ ಪತಿಗೆ ಸರ್ಪೈಸ್ ಕೊಟ್ಟ ಪ್ರಿಯಾಂಕಾ: ಬೆಚ್ಚಿಬಿದ್ದ ನಿಕ್ ಜೋನಸ್
ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ನಿಕ್ ಜೋನಸ್ ಕೈಹಿಡಿದ ನಂತರ ಪ್ರಿಯಾಂಕಾ ಬಾಲಿವುಡ್ ನಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಪ್ರಿಯಾಂಕಾ, ನಿಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ತುಂಬುಂತ ಬಂದು. ಇದೆ ಡಿಸೆಂಬರ್ 1ಕ್ಕೆ ಪ್ರಿಯಾಂಕಾ ಮತ್ತು ನಿಕ್ ದಂಪತಿಯ ವಿವಾಹ ವಾರ್ಷಿಕೋತ್ಸವ.
ಮದುವೆ ವಾರ್ಷಿಕೋತ್ಸವಕ್ಕೆ ಇನ್ನು ಒಂದು ವಾರ ಇರುವಾಗಲೆ ಪ್ರಿಯಾಂಕಾ ಪತಿಗೆ ಸರ್ಪೈಸ್ ಗಿಫ್ಟ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಜೋರು ನಿದ್ದೆಯಲ್ಲಿದ್ದ ಪತಿಯನ್ನು ಎಬ್ಬಿಸಿ ಪ್ರಿಯಾಂಕಾ ಜರ್ಮನ್ ಶೆಫರ್ಡ್ ನಾಯಿಮರಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಪ್ರಿಯಾಂಕಾ ದಿಢೀರನೆ ಬಂದು ಎಬ್ಬಿಸಿ, ಉಡುಗೊರೆ ನೀಡಿದ್ದನ್ನು ನೋಡಿ ನಿದ್ರೆಯಲ್ಲಿದ್ದ ನಿಕ್ ಒಮ್ಮೆ ಏನು ಅಂತ ಗಾಬರಿಯಾಗಿ ಯಾರದು? ಎಂದು ತಿರುಗಿನೋಡಿದ್ದಾರೆ.

ಈ ವಿಡಿಯೋವನ್ನು ಪ್ರಿಯಾಂಕಾ ಮತ್ತು ನಿಕ್ ಇಬ್ಬರು ಸಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪ್ರಿಯಾಂಕಾ ಕೊಟ್ಟ ಉಡುಗೊರೆಯ ಸಂತಸವನ್ನು ನಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಪ್ರಿ, ಬೆಳಗ್ಗೆ ಅಚ್ಚರಿಯ ಉಡುಗೊರೆಯೊಂದಿಗೆ ಮನೆಗೆ ಬಂದಿದ್ದಾರೆ. ಇದು ನಮ್ಮ ಮುದ್ದಿನ ನಾಯಿಮರಿ ಗಿನೋ" ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಸದ್ಯ 'ದಿ ವೈಟ್ ಟೈಗರ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣದಲ್ಲಿದ್ದ ಪ್ರಿಯಾಂಕಾ ಅಮೆರಿಕಕ್ಕೆ ಮರಳಿ ಮದುವೆ ವಾರ್ಷಿಕೋತ್ಸವಕ್ಕೂ ಮುಂಚಿತವಾಗಿ ಪತಿಗೆ ಗಿಫ್ಟ್ ನೀಡಿದ್ದಾರೆ. ನಾಯಿಮರಿ ಮನೆಗೆ ಬರುತ್ತಿದ್ದಂತೆ ಗಿನೋ ಎಂದು ನಾಮಕರಣ ಮಾಡಿದ್ದಾರೆ. ಅಲ್ಲದೆ ಗಿನೋ ಹೆಸರಿನಲ್ಲಿ ಈಗಾಗಲೆ ಇನ್ಸ್ಟಾಗ್ರಾಮ್ ಖಾತೆ ಕೂಡ ತೆರೆದಿದ್ದಾರೆ. ಪ್ರಿಯಾಂಕಾ ಮನೆಯಲ್ಲಿ ಈಗಾಗಲೆ ಡಯಾನಾ ಎನ್ನುವ ನಾಯಿಮರಿ ಇದೆ. ಇದರ ಜೊತೆಗೀಗ ಗಿನೋ ಸೇರಿಕೊಂಡಿದೆ.


Click it and Unblock the Notifications











