ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ಪೋಸ್ಟ್‌ಗೆ ಪ್ರಿಯಾಂಕಾ ಸಂಭಾವನೆ ಕೋಟಿ ಕೋಟಿ!

ಅದೆಷ್ಟೋ ನಟ ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹತ್ತಿರರಾಗಿರ್ತಾರೆ. ತಾವು ಏನೇ ಮಾಡಿದರೂ, ಅಭಿಮಾನಿಗಳೊಂದಿಗೆ ಒಂದು ವಿಚಾರವನ್ನು ಹಂಚಿಕೊಳ್ಳಬೇಕು ಅಂದರೂ ಸೆಲೆಬ್ರೆಟಿಗಳು ಬಳಸೋ ಅಸ್ತ್ರವೇ ಸಾಮಾಜಿಕ ಜಾಲತಾಣ. ಅದರಲ್ಲೂ ಇತ್ತೀಚೆಗೆ ಅದೆಷ್ಟೋ ನಟ ನಟಿಯರು ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಆಕ್ಟಿವ್ ಆಗಿ ಇರುತ್ತಾರೆ. ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡುತ್ತಾ, ತಮ್ಮ ದಿನ ನಿತ್ಯದ ಅಪ್‌ಡೇಟ್‌ಗಳನ್ನು ನೀಡುತ್ತಾ ಸಮಯ ಕಳೆಯುತ್ತಾರೆ.

ಇನ್ನು ಬಾಲಿವುಡ್ ಸ್ಟಾರ್ ಸೆಲೆಬ್ರೆಟಿಗಳು ಕೂಡ ಇನ್‌ಸ್ಟಾಗ್ರಾಮ್ ಅತೀ ಹೆಚ್ಚು ಬಳಸುತ್ತಾರೆ. ಬಳಸೋದು ಮಾತ್ರವಲ್ಲ ಇದರಿಂದ ಕೋಟಿ ಕೋಟಿ ಸಂಪಾದನೆ ಕೂಡ ಮಾಡುತ್ತಿದ್ದಾರೆ. ಸ್ಟಾರ್ ಸೆಲೆಬ್ರೆಟಿಗಳು ಹಾಕುವ ಒಂದೊಂದು ಪೋಸ್ಟ್‌ಗಳಿಂದ ಲಕ್ಷ ಲಕ್ಷ ಕೈ ಸೇರುತ್ತದೆ. ಬಾಳುತ್ತೆ. ಅದರಲ್ಲೂ ಪ್ರಾಯೋಜಿತ ಪೋಸ್ಟ್‌ಗಳನ್ನು ಹಾಕುವ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಈ ಮೂಲಕವೂ ಹೆಚ್ಚು ಸದ್ದು ಮಾಡುವ ನಟ ನಟಿಯ ಪಟ್ಟಿಯನ್ನು ಇನ್‌ಸ್ಟಾಗ್ರಾಮ್ ಬಿಡುಗಡೆ ಮಾಡುತ್ತದೆ.

ಈ ಪಟ್ಟಿಯು ಪ್ರಾಯೋಜಿತ ಪೋಸ್ಟ್‌ಗಳಿಂದ ಅತೀ ಹೆಚ್ಚು ಸಂಭಾವಣೆ ಯಾರು ಪಡೆಯುತ್ತಾರೆ? ಯಾರು ನಂ.1 ಸ್ಥಾನದಲ್ಲಿ ಇದ್ದಾರೆ ಎಂಬ ಬಗ್ಗೆ ಜನರಿಗೆ ತಿಳಿಸುತ್ತದೆ. ಇದೀಗ ಇನ್‌ಸ್ಟಾಗ್ರಾಮ್ ಮತ್ತೊಂದು ಪಟ್ಟಿಯನ್ನು ರಿಲೀಸ್ ಮಾಡಿದ್ದು, ಅತೀ ಹೆಚ್ಚು ಸಂಭಾವನೆಯನ್ನು ಯಾವ ನಟಿ ಪಡೆದಿದ್ದಾರೆ ಎಂಬ ಬಗ್ಗೆ ಈ ಮೂಲಕ ತಿಳಿದು ಬಂದಿದೆ. ಅದು ಬೇರೆ ಯಾರು ಅಲ್ಲ ಬಾಲಿವುಡ್ ಬ್ಯೂಟಿ, ಹಾಟ್ ಬೆಡಗಿ ಪ್ರಿಯಾಂಕ ಚೋಪ್ರಾ. ಹೌದು ಬಾಲಿವುಡ್‌ನ ಬೇರೆಲ್ಲಾ ಸ್ಟಾರ್ ಸೆಲೆಬ್ರೆಟಿಗಳನ್ನು ಹಿಂದಿಕ್ಕಿ ಪ್ರಿಯಾಂಕ ಚೋಪ್ರಾ ಇನ್‌ಸ್ಟಾಗ್ರಾಮ್ ನಲ್ಲಿ ಸಂಭಾವಣೆ ವಿಚಾರದಲ್ಲಿ ನಂ.1 ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಒಂದು ಪ್ರಾಯೋಜಿತ ಪೋಸ್ಟ್‌ಗೆ ಎಷ್ಟು ದುಡ್ಡು ಗೊತ್ತಾ ?

ಒಂದು ಪ್ರಾಯೋಜಿತ ಪೋಸ್ಟ್‌ಗೆ ಎಷ್ಟು ದುಡ್ಡು ಗೊತ್ತಾ ?

ಪ್ರಿಯಾಂಕ ಇನ್‌ಸ್ಟಾಗ್ರಾಮ್‌ನಲ್ಲಿ ಸಂಭಾವಣೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪಿಗ್ಗಿ ಇನ್‌ಸ್ಟಾಗ್ರಾಮ್‌ನಲ್ಲೆ ಹೆಚ್ಚೆಚ್ಚು ಹಣ ಸಂಪಾದಿಸುತ್ತಿದ್ದಾರೆ. ಈಗಾಗಲೇ ತಿಳಿದಿರುವಂತೆ ಸೆಲೆಬ್ರೆಟಿಗಳು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಪ್ರಾಯೋಜಿತ ಪೋಸ್ಟ್‌ಗೆ ಸಂಭಾವನೆ ಪಡೆಯುತ್ತಾರೆ. ಇಂತಹ ಪೋಸ್ಟ್‌ಗಳಿಗೆ ಅತೀ ಹೆಚ್ಚು ಸಂಭಾವಣೆ ಪಡೆಯುತ್ತಿದ್ದ ನಟಿಯರಲ್ಲಿ ಪಿಗ್ಗಿ ನಂ.1 ಆಗಿದ್ದಾರೆ. ತಾನು ಹಾಕುವ ಒಂದೊಂದು ಪ್ರಾಯೋಜಿತ ಪೋಸ್ಟ್‌ಗು ಕೋಟಿ ಕೋಟಿ ಹಣ ಪಡೆಯುತ್ತಿದ್ದಾರೆ ಪಿಗ್ಗಿ. ಹೀಗಾಗಿ ಪ್ರಾಯೋಜಿತ ಪೋಸ್ಟ್‌ಗಾಗಿ ಅತೀ ಹೆಚ್ಚು ಸಂಭಾವಣೆ ಪಡೆಯುವ ಭಾರತದ ಮೊದಲ ನಟಿ ಹಾಗೂ ಜಗತ್ತಿನಲ್ಲಿ 27ನೇ ಸೆಲೆಬ್ರೆಟಿಯಾಗಿ ಗುರುತಿಸಿಕೊಂಡಿದ್ದಾರೆ.

ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಪ್ರಿಯಾಂಕ

ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಪ್ರಿಯಾಂಕ

ಪ್ರಿಯಾಂಕ ಚೋಪ್ರಾ ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ನಟಿ. ಅಲ್ಲದೇ ಪಿಗ್ಗಿಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಪ್ರಿಯಾಂಕ ಅವರ ಬಗ್ಗೆ ಅಪ್‌ಡೇಟ್‌ಗಳನ್ನು ತಿಳಿದುಕೊಳ್ಳಲು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಾರೆ. ಅದರಂತೆ ಈಗ ನಟಿ ಪ್ರಿಯಾಂಕ ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಭಾರತೀಯ ನಂ.1 ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಟಾಪ್ ಸ್ಥಾನದಲ್ಲಿ ಇದ್ದ ನಟ ನಟಿಯರನ್ನು ಹಿಂದಿಕ್ಕಿರುವ ಪ್ರಿಯಾಂಕ ಈ ಭಾರಿ ಮೊದಲ ಸ್ಥಾನಕ್ಕೆ ಏರಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಪ್ರಿಯಾಂಕ ಅದೆಷ್ಟು ಫಾಲೋವರ್ಸ್ ಹೊಂದಿದ್ದಾರೆ ?

ಪ್ರಿಯಾಂಕ ಅದೆಷ್ಟು ಫಾಲೋವರ್ಸ್ ಹೊಂದಿದ್ದಾರೆ ?

ಇನ್ನು ಪಿಗ್ಗಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 72.3 ಮಿಲಿಯನ್ (7 ಕೋಟಿ 23 ಲಕ್ಷ) ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಭಾರತೀಯ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದು ವರದಿಯ ಪ್ರಕಾರ ಪ್ರಿಯಾಂಕ ಬಾಲಿವುಡ್‌ನಲ್ಲಿ ಅಷ್ಟೆ ಅಲ್ಲದೇ ಹಾಲಿವುಡ್‌ನಲ್ಲೂ ಈಗ ಹೆಚ್ಚು ಸಕ್ರಿಯರಾಗಿದ್ದಾರೆ. ಹಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪಿಗ್ಗಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಮತ್ತು ಪಿಗ್ಗಿ ಮತ್ತು ನಿಕ್ ಮದುವೆ ಆದ ಬಳಿಕ ನಿಕ್ ಫಾಲೋವರ್ಸ್‌ ಕೂಡ ಪ್ರಿಯಾಂಕ ರನ್ನು ಹಿಂಬಾಲಿಸುತ್ತಿದ್ದಾರೆ. ಹೀಗಾಗಿ ಪಿಗ್ಗಿ ಇನ್‌ಸ್ಟಾಗ್ರಾಮ್ ನಲ್ಲಿ ನಂ.1 ಸ್ಥಾನವನ್ನು ಅಲಂಕರಿಸಲು ಸಾಧ್ಯವಾಯ್ತು ಅಂತ ಹೇಳಲಾಗುತ್ತಿದೆ.

ಫಾಲೋವರ್ಸ್‌ ಲೆಕ್ಕ ಕೇಳಿದ್ರೆ ದಂಗಾಗ್ತೀರಾ !

ಫಾಲೋವರ್ಸ್‌ ಲೆಕ್ಕ ಕೇಳಿದ್ರೆ ದಂಗಾಗ್ತೀರಾ !

ಪ್ರಿಯಾಂಕಾ ಚೋಪ್ರಾ ಬಳಿಕ ಬಾಲಿವುಡ್‌ನ ಮತ್ತೋರ್ವ ನಟಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಅದು ಮತ್ಯಾರು ಅಲ್ಲ ಶ್ರದ್ಧಾ ಕಪೂರ್. ಹೌದು ಶ್ರದ್ಧಾ ಕಪೂರ್‌ಗೆ ಇನ್‌ಸ್ಟಾಗ್ರಾಮ್ ನಲ್ಲಿ 6 ಕೋಟಿ 85 ಲಕ್ಷ ಫಾಲೋವರ್ಸ್ ಇದ್ದಾರೆ. ಇವರು ಕೂಡ ಪ್ರಾಯೋಜಿತ ಪೋಸ್ಟ್‌ಗಳಿಗೆ ಕೋಟಿ ಲೆಕ್ಕದಲ್ಲಿ ಸಂಭಾವಣೆ ಪಡೆಯುತ್ತಾರೆ. ಮೂರನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದು 6 ಕೋಟಿ 34 ಲಕ್ಷ ಫಾಲೋವರ್ಸ್ ಇದ್ದಾರೆ. ಹಾಗೂ ಕತ್ರೀನಾ ಕೈಫ್‌ಗೆ 6 ಕೋಟಿ 4 ಲಕ್ಷ ಫಾಲೋವರ್ಸ್ ಇದ್ದರೇ ಬಾಲಿವುಡ್ ನಟ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ. 5ಕೋಟಿ 83 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ ಅಕ್ಷಯ್ ಕುಮಾರ್.

More from Filmibeat

English summary
Priyanka Chopra featured on the list of the highest-earning celebs on Instagram, recorded a new high.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X