ಪ್ರಿಯಾಂಕಾ ವಿದೇಶಿ ಯುವಕನನ್ನು ಮದುವೆ ಆಗೋದು ಅವರ ತಾಯಿಗೆ ಇಷ್ಟವಿರಲಿಲ್ಲವಂತೆ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ವಿಶ್ವದ ಸುಂದರ ಜೋಡಿಗಳಲ್ಲಿ ಪ್ರಿಯಾಂಕಾ ಮತ್ತು ನಿಕ್ ಜೋಡಿ ಕೂಡ ಒಂದು. ಇಬ್ಬರ ದಾಂಪತ್ಯ ಜೀವನ ಸುಂದರವಾಗಿ ಸಾಗುತ್ತಿದೆ.
ಆದರೆ ಪ್ರಿಯಾಂಕಾ ಚೋಪ್ರಾ ವಿದೇಶಿ ಹುಡುಗನ ಜೊತೆ ಹಸೆಮಣೆ ಏರುತ್ತಾರೆ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಪ್ರಿಯಾಂಕಾ ವಿದೇಶಿ ಹುಡುಗನ್ನು ಮದುವೆ ಆಗ್ತಾರೆ ಎನ್ನುವುದು ಸ್ವತಃ ಅವರ ತಾಯಿ ಮಧು ಚೋಪ್ರಾ ಅವರಿಗೆ ನಂಬಲು ಸಾಧ್ಯವಾಗಿರಲಿಲ್ಲವಂತೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ ತಾಯಿ ಮಧು ಚೋಪ್ರಾ, ಮಗಳು ವಿದೇಶಿ ಹುಡುಗನ ಜೊತೆ ಮದುವೆ ಆಗುತ್ತಾಳೆ ಎನ್ನುವ ಕಲ್ಪನೆ ಸಹ ಇರಲಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕಾ ಬಾಲಿವುಡ್ ನಿಂದ ಹಾಲಿವುಡ್ ಗೆ ಕಾಲಿಟ್ಟಾಗ ಅಲ್ಲಿನ ಸಾಕಷ್ಟು ನಟರ ಜೊತೆ ಪ್ರಿಯಾಂಕಾ ಹೆಸರು ಕೇಳಿಬರುತ್ತಿತ್ತು. ಈ ಸಮಯದಲ್ಲಿ ಮಾಧ್ಯಮದವರು ಪ್ರಿಯಾಂಕಾ ತಾಯಿಯನ್ನು ಕೇಳಿದಾಗ, 'ವಿದೇಶಿ ಹುಡುಗನ ಜೊತೆ ಪ್ರಿಯಾಂಕಾ ಮದುವೆಯನ್ನು ಊಹಿಸಿಕೊಳ್ಳಲೂ ನನಗೆ ಸಾಧ್ಯವಿಲ್ಲ' ಎಂದು ಹೇಳಿದ್ದರು.

ಆದರೆ ಪ್ರಿಯಾಂಕಾ ವಿದೇಶ ಯುವಕನನ್ನೇ ಪ್ರೀತಿಸಿ ಮದುವೆಯಾದರು. 2018ರಲ್ಲಿ ಪ್ರಿಯಾಂಕಾ ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ಹಸೆಮಣೆ ಏರಿದ್ದಾರೆ. ಇಬ್ಬರು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಪ್ರಿಯಾಂಕಾ ಬಾಲಿವುಡ್ ಜೊತೆಗೆ ಹಾಲಿವುಡ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.


Click it and Unblock the Notifications











