"ಫೋನ್ ಮಾಡಿ ನನಗೆ ಬೆದರಿಕೆ ಹಾಕುತ್ತಿದ್ದಾರೆ"; ನಟಿ ರೈಮಾ ಸೇನ್ ಆವೇದನೆ

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಟ್ರೋಲಿಂಗ್ ಹೆಚ್ಚಾಗುತ್ತಿದೆ. ಅದರಲ್ಲೂ ಸಿನಿಮಾ ತಾರೆಯರನ್ನು ಕೆಲವರು ಹೆಚ್ಚು ಹೆಚ್ಚು ಟ್ರೋಲ್ ಮಾಡುತ್ತಾರೆ. ಇನ್ನು ಕೆಲವೊಮ್ಮೆ ಫೋನ್ ಮಾಡಿ ಬೆದಿರಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಸದ್ಯ ಬಾಲಿವುಡ್ ನಟಿ ರೈಮಾ ಸೇನ್‌ಗೂ ಇದೇ ರೀತಿಯ ಕಹಿ ಅನುಭವ ಆಗಿದೆ.

ಮುಂಬೈ ಬೆಡಗಿ ರೈಮಾ ಸೇನ್ 1999ರಲ್ಲಿ ಬಂದ 'ಗಾಡ್‌ಮದರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಬಳಿಕ 'ಶಕ್ತಿ', 'ಧೈರ್ಯಂ', 'ಯಾತ್ರ', 'ಮುಂಬೈ ಕಟ್ಟಿಂಗ್', 'ಟೀನ್ ಪಟ್ಟಿ', '3 ಬ್ಯಾಚುಲರ್ಸ್', 'ಗಣೇಶ್ ಟಾಕೀಸ್', 'ಸನ್ ಗ್ಲಾಸ್', 'ಕಾಗಜ್ ಕೇ ಫೂಲ್ಸ್', 'ವೋಡ್ಕಾ ಡೈರೀಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ಮಿಂಚಿದ್ದಾರೆ.

Bollywood actress Raima Sen gets threat calls

ಸದ್ಯ ರೈಮಾ ಸೇನ್ 'ಮಾ ಕಾಳಿ' ಎನ್ನುವ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 1946ರಲ್ಲಿ ಕಲ್ಕತ್ತಾದಲ್ಲಿ ನಡೆದ ಹತ್ಯಾಕಾಂಡದ ಸುತ್ತಾ ಈ ಸಿನಿಮಾ ಕಥೆ ಸಾಗಲಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆದಿತ್ತು. ಆದರೆ ಈ ಪೋಸ್ಟರ್ ಹೊರ ಬಂದ ಬಳಿಕ ನಟಿ ರೈಮಾಗೆ ಸಂಕಷ್ಟ ಎದುರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದು ಮಾತ್ರವಲ್ಲದೇ ಮನೆಗೆ ಕರೆ ಮಾಡಿ ಬೆದರಿಸುತ್ತಿದ್ದಾರೆ ಎಂದು ಆಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

"ನನಗೆ ಆಶ್ಚರ್ಯವಾಯಿತು. ಏಕೆಂದರೆ ಒಂದು ಸಿನಿಮಾ ವಿಚಾರಕ್ಕೆ ಇಂತಹ ಬೆದರಿಕೆಗಳು ಬರುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ. ಹಿಂದಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಮೊದಲು ಸಿನಿಮಾ ನೋಡಿ ನಂತರ ನಿಮ್ಮ ಅಭಿಪ್ರಾಯ ತಿಳಿಸಿ. ಆದರೆ ಈಗ ಯಾಕೆ ಟೀಕಿಸುತ್ತಿದ್ದೀರಿ? 'ಮಾ ಕಾಳಿ' ಚಿತ್ರವನ್ನು ಏಕೆ ಒಪ್ಪಿಕೊಂಡಿರಿ ಎಂದು ಪ್ರಶ್ನಿಸುತ್ತಿದ್ದಾರೆ. ಖ್ಯಾತ ನಟಿ ಸುಚಿತ್ರಾ ಸೇನ್ ಅವರ ಮೊಮ್ಮಗಳು ಆಗಿರುವ ನೀವು ಇಂತಹ ಸಿನಿಮಾ ಮಾಡಲು ಹೇಗೆ ಒಪ್ಪಿಕೊಂಡಿರಿ? ನೀವು ಯಾವತ್ತಾದರೂ ಕೋಲ್ಕತ್ತಾದಲ್ಲಿ ಬಂದು ನೆಲೆಸಬೇಕಾಗುತ್ತದೆ. ನೋಡ್ತಾ ಇರು ಎಂದು ಬೆದರಿಸುತ್ತಾರೆ"

"ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ನಾನು ಯಾವಾಗಲೂ ವಿವಾದಗಳಿಂದ ದೂರವಿರುತ್ತೇನೆ. ಈ ರೀತಿ ಟ್ರೋಲ್ ಮಾಡುವುದು, ಫೋನ್ ಮಾಡಿ ಬೆದರಿಕೆ ಹಾಕುವುದು ಸರಿಯಲ್ಲ. ನಾನು ನನ್ನ ಕುಟುಂಬದೊಂದಿಗೆ ಕೋಲ್ಕತ್ತಾದಲ್ಲಿ ಇರುತ್ತೇನೆ. ಆದರೆ ಈ ಬೆದರಿಕೆ ಕರೆಗಳು ಮತ್ತು ಟ್ರೋಲ್ಸ್ ನನ್ನ ಪೋಷಕರನ್ನು ಚಿಂತೆಗೀಡುಮಾಡುತ್ತಿವೆ" ಎಂದು ರೈಮಾ ಸೇನ್ ಆತಂಕ ವ್ಯಕ್ತಪಡಿಸಿದ್ದಾರೆ.

"ಇನ್ನು ಸಿನಿಮಾ ಬಂದಿಲ್ಲ. ಸಿನಿಮಾ ಬರುವ ಮುನ್ನ ಏನೇನೋ ಕಲ್ಪಿಸಿಕೊಂಡು ಬೆದರಿಸುವುದು ಯಾವ ನ್ಯಾಯ? ನಟಿಯಾಗಿ ಎಂತಹ ಪಾತ್ರ ಆದರೂ ನಟಿಸುತ್ತೇನೆ. ಪಾತ್ರ ಇಷ್ಟವಾದರೆ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಆದರೆ 'ಮಾ ಕಾಳಿ' ಸಿನಿಮಾ ವಿಚಾರದಲ್ಲಿ ಸುಖಾ ಸುಮ್ಮನೆ ವಿವಾದ ಮಾಡುತ್ತಿದ್ದಾರೆ. ಈ ಹಿಂದೆ 'ವ್ಯಾಕ್ಸಿನ್ ವಾರ್' ಸಿನಿಮಾ ವಿಚಾರದಲ್ಲೂ ಇದೇ ರೀತಿ ವಿವಾದವಾಯಿತು. ಆದರೆ ಸಿನಿಮಾ ಬಿಡುಗಡೆ ಬಳಿಕ ಎಲ್ಲವೂ ತಣ್ಣಗಾಯಿತು. ಆದರೆ ಫೋನ್ ಮಾಡಿ ಬೆದರಿಸುವುದು ನನಗೆ ಇದೇ ಮೊದಲು" ಎಂದು ಆಕೆ ಹೇಳಿದ್ದಾರೆ.

ವಿಜಯ್ ಯೆಲಕಂಠಿ 'ಮಾ ಕಾಳಿ' ಚಿತ್ರಕ್ಕೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶ್ವ ಪ್ರಸಾದ್ ಬಂಡವಾಳ ಹೂಡಲಿದ್ದಾರೆ. 'ಮಾ ಕಾಳಿ' ಸಿನಿಮಾ ಟೈಟಲ್‌ಗೆ 'ದಿ ಸ್ಟೋರಿ ಆಫ್ ಮದರ್‌ಲ್ಯಾಂಡ್' ಎನ್ನುವ ಟ್ಯಾಗ್‌ಲೈನ್‌ ಕೂಡ ಇದೆ.

More from Filmibeat

English summary
Maa kaali film issue; Threat calls to actress Raima Sen;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X