ಕೊನೆಗೂ ಮದುವೆ ಆಗಿದೆ ಎಂದು ಒಪ್ಪಿಕೊಂಡ ರಾಕಿ ಸಾವಂತ್

ವಿವಾದಾತ್ಮಕ ಹೇಳಿಕೆಗಳ ಮೂಲಕವೆ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಕಿ ಸಾವಂತ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಸದ್ದು ಮಾಡುತ್ತಿತ್ತು. ಆದ್ರೆ ಈ ಬಗ್ಗೆ ರಾಕಿ ಮಾತ್ರ ತುಟಿ ಬಿಚ್ಚಿರಲಿಲ್ಲ.

ರಾಕಿ ಮದುವೆ ಬಗ್ಗೆ ಗುಲ್ಲಾಗಲು ಕಾರಣ, ಇತ್ತೀಚಿಗೆ ರಾಕಿ ಸಾವಂತ್ ಹೋಟೆಲ್ ವೊಂದರಲ್ಲಿ ಮದುಮಗಳ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನ ನೋಡಿದ ಅನೇಕರು ಕೊನೆಗೂ ರಾಕಿ ಮದುವೆ ಆದ್ರು ಅಂತ ಹೇಳಲಾರಂಭಿಸಿದ್ರು. ಆದ್ರೆ ಇದೆಲ್ಲ ಸುಳ್ಳು ಸುದ್ದಿ, ಇದು ಕೇವಲ ಫೋಟೋ ಶೂಟ್ ಅಷ್ಟೆ ಎಂದಿದ್ರು ರಾಕಿ.

ಆದ್ರೆ ಸಾಮಾಜಿಕ ಜಾಲತಾಣದಲ್ಲಿ ರಾಕಿ ತರಹೇವಾರಿ ಪೋಟೋಗಳನ್ನು ಹಂಚಿಕೊಳ್ಳೋಕೆ ಶುರು ಮಾಡಿದ್ರು. ಹಣೆಯಲ್ಲಿ ಕುಂಕುಮ, ಕೊರಳಲ್ಲಿ ಮಾಂಗಲ್ಯ ಸರ ಇರುವ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಇದನ್ನು ನೋಡಿದ ನೆಟ್ಟಿಗರು ಮದುವೆಯಾಗಿದ್ದೀರಾ ರಾಕಿ ಎಂದು ಕಮೆಂಟ್ ಮಾಡಲು ಶುರು ಮಾಡಿಕೊಂಡಿದ್ದರು. ಆದ್ರೀಗ ಮದುವೆ ಬಗ್ಗೆ ಮೌನ ಮುರಿದ್ದಾರೆ ರಾಕಿ.

Bollywood Actress Rakhi Sawant Confirms Marrying NRI Ritesh

"ನಾನು ಮದುವೆಯಾಗಿದ್ದೀನಿ. ನನ್ನ ಗಂಡನ ಹೆಸರು ರಿತೇಷ್. ಯುಕೆಯವರು ಅವರು ಈಗಾಗಲೆ ಯುಕೆಗೆ ಹೊರಟು ಹೋಗಿದ್ದಾರೆ. ನನ್ನ ವೀಸಾ ಬರಬೇಕಿದೆ. ಬಳಿಕ ನಾನು ಯುಕೆಯಲ್ಲಿ ನೆಲೆಸುತ್ತೇನೆ. ನಾನು ಯಾವಾಗಲು ಟಿವಿ ಶೋಗಳನ್ನು ನಿರ್ಮಾಣ ಮಾಡಲು ಬಯಸುತ್ತೇನೆ. ನನ್ನ ದೀರ್ಘಕಾಲದ ಕನಸು ಈಗ ಈಡೇರಿದೆ ಎಂದು ಬಯಸುತ್ತೇನೆ" ಎಂದಿದ್ದಾರೆ.

Bollywood Actress Rakhi Sawant Confirms Marrying NRI Ritesh

ತೀರಾ ಖಾಸಗಿಯಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ರಾಕಿ ಸಾವಂತ್ ಕುಟುಂಬ ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ರು. ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನೆರವೇರಿದೆ.

More from Filmibeat

English summary
Bollywood actress Rakhi Sawant confirms marrying NRI after honeymoon photos viral in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X