"ಆದಿಲ್ ಖಾನ್ ನನ್ನ ಬೆತ್ತಲೆ ವಿಡಿಯೋ ಮಾರಾಟ ಮಾಡುತ್ತಿದ್ದಾನೆ" ಮೈಸೂರಿನಲ್ಲಿ ರಾಖಿ ಸಾವಂತ್ ಗದ್ದಲ!

By ಫಿಲ್ಮಿಬೀಟ್ ಡೆಸ್ಕ್

ಮೈಸೂರು: ಬಾಲಿವುಡ್ ನಟಿ ರಾಖಿ ಸಾವಂತ್ ಮೈಸೂರಿಗೆ ಆಗಮಿಸಿದ್ದಾಳೆ. ಸದಾ ವಿವಾದದಲ್ಲಿಯೇ ಮುಳುಗಿರೋ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮೈಸೂರಿನಲ್ಲಿರುವ ಪತಿ ಆದಿಲ್ ಖಾನ್ ಮನೆ ಮುಂದೆ ಹಂಗಾಮವನ್ನೇ ಸೃಷ್ಟಿಸಿದ್ದಾಳೆ.

ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್ ಹಾಗೂ ಆದಿಲ್ ಖಾನ್ ನಡುವೆ ಕಿತ್ತಾಟ ನಡೆಯತ್ತಲೇ ಇದೆ. ಇಬ್ಬರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಪ್ರತ್ಯಾರೋ ಮಾಡುತ್ತಲೇ ಇದ್ದಾರೆ. ಇದೀಗ ಮೈಸೂರಿನಲ್ಲಿರುವ ಆದಿಲ್ ಖಾನ್ ಮನೆಗೆ ಜೆಸಿಬಿಯಲ್ಲಿ ಬಂದು ಮತ್ತೊಂದು ಆರೋಪ ಮಾಡಿದ್ದಾಳೆ.

rakhi-sawant-adil-khan

ಮೈಸೂರಿನ ಆದಿಲ್ ಖಾನ್‌ರನ್ನು ವಿವಾಹವಾಗಿದ್ದ ರಾಖಿ ಸಾವಂತ್ ಈ ಹಿಂದೆ ಕೂಡ ಹಲವು ಆರೋಪಗಳನ್ನು ಮಾಡಿದ್ದಳು. ಪತಿಯ ವಿರುದ್ಧ ಅಕ್ರಮ ಸಂಬಂಧ ಹಾಗೂ ಹಣ ವಂಚನೆ ಮಾಡಿದ್ದಾನೆಂದು ಆರೋಪಿಸಿ ಜೈಲಿಗೂ ಕಳುಹಿಸಿದ್ದಳು.

ಜೆಸಿಬಿ ಏರಿದ ಬಂದ ರಾಖಿ ಸಾವಂತ್

ಬಾಲಿವುಡ್ ನಟಿ ರಾಖಿ ಸಾವಂತ್ ಡ್ರಾಮ ಕ್ವೀನ್ ಅನ್ನೋದು ಗೊತ್ತಿರೋ ವಿಷಯವೇ. ಈ ಹಿಂದೆ ವಿವಾದಗಳ ಸೃಷ್ಟಿಸಿ ಹೈ ಡ್ರಾಮ ಮಾಡಿದ ಹಲವು ಉದಾಹರಣೆಗಳಿವೆ. ಈ ಬಾರಿ ಕೂಡ ರಾಖಿ ಸಾವಂತ್ ಪತಿ ಮನೆಗೆ ಜೆಸಿಬಿಯಲ್ಲಿ ಆಗಮಿಸಿದ್ದಳು. ಈ ವೇಳೆ ರಾಖಿಯನ್ನು ವಾದ್ಯಗಳು ಸ್ವಾಗತ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು.

ಬೆತ್ತಲೆ ವಿಡಿಯೋ ಮಾರಾಟ ಆರೋಪ

ರಾಖಿ ಸಾವಂತ್ ಈ ಬಾರಿ ಮಾಡಿದ ಪ್ರಮುಖ ಆರೋಪಗಳಲ್ಲಿ ಬೆತ್ತಲೆ ವಿಡಿಯೋ ಮಾರಾಟ ಹೈಲೈಟ್ ಆಗಿದೆ. "ಪತಿ ಆದಿಲ್ ಖಾನ್ ನನ್ನ ಬೆತ್ತಲೆ ವಿಡಿಯೋವನ್ನು 2 ರಿಂದ 3 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾನೆ" ಎಂದು ರಾಖಿ ಆರೋಪಿಸಿದ್ದಾಳೆ. ಇದೇ ವೇಳೆ ಆದಿಲ್ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕಾಗಿ ನನ್ನ ಜೊತೆ ಪ್ರೀತಿ ನಾಟಕವಾಡಿದ್ದಾನೆ. ತನ್ನ ತಾಯಿಗೆ ಸರಿಯಾದ ಚಿಕಿತ್ಸೆ ಕೊಡಿಸದ ಹಿನ್ನೆಲೆ ಮೃತ ಪಟ್ಟಿದ್ದಾರೆಂದು ಮತ್ತೆ ಆರೋಪ ಮಾಡಿದ್ದಾಳೆ.

rakhi-sawant-adil-khan

ಆದಿಲ್ ಖಾನ್ ಮೋಸಗಾರ.. ವಿಚ್ಛೇದನ ನೀಡದ್ದೇನೆ

ಇದೇ ವೇಳೆ ರಾಖಿ ಸಾವಂತ್ ಮೈಸೂರಿನ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದಳು. ಅಲ್ಲಿ ಆದಿಲ್ ಖಾನ್ ಒಬ್ಬ ಮೋಸಗಾರ. ಆತನಿಗೆ ವಿಚ್ಛೇದನವನ್ನು ನೀಡಿದ್ದೇನೆ ಎಂದು ತಿಳಿಸಿದ್ದಾಳೆ. ಮಾಜಿ ಪತಿ ಆದಿಲ್ ಖಾನ್‌ಗಾಗಿ ನಾನು ತ್ಯಾಗ ಮಾಡಿದ್ದೇನೆ. ಅವನಿಗಾವಿ ಫಾತಿಮಾ ಆಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡೆ. ಆದರೆ ಆದಿಲ್ ನನ್ನ ಬದುಕನ್ನು ನಾಶ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

"ರಿಷಬ್ ಶೆಟ್ಟಿ ಬಯೋಪಿಕ್ ಡೈರೆಕ್ಷನ್ ಮಾಡ್ಬೇಕು"

ರಾಖಿ ಸಾವಂತ್ ತನ್ನ ಬಯೋಪಿಕ್ ಅನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಬೇಕು ಅಂತ ಆಸೆ ಪಟ್ಟಿದ್ದಾಳೆ. ತನ್ನ ಬದುಕನ್ನು ಸಿನಿಮಾ ಮಾಡುವುದಕ್ಕೆ ರಾಖಿ ಸಾವಂತ್ ಆಪ್ತ ಮುಂದೆ ಬಂದಿದ್ದಾರಂತೆ. ಶೀಘ್ರವೇ ಬಯೋಪಿಕ್ ಸಿನಿಮಾ ಸೆಟ್ಟೇರಲಿದೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

More from Filmibeat

English summary
Mysuru: Rakhi Sawant says Adil Khan Durrani sells her private video for 3 lakhs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X