For Quick Alerts
  ALLOW NOTIFICATIONS  
  For Daily Alerts

  ಕಂಗನಾ, ಸೋನಮ್ ಸೇರಿದಂತೆ 4 ನಟಿಯರು ಶಾರುಖ್ ಜೊತೆ ನಟಿಸಲು ನಿರಾಕರಿಸಿದ್ದೇಕೆ?

  |

  ಬಾಲಿವುಡ್ ನ ಖ್ಯಾತ ನಟ, ಸೂಪರ್ ಸ್ಟಾರ್ ಶಾರುಖ್ ಖಾನ್ ಜೊತೆ ನಟಿಸಲು ಯಾರು ತಾನೆ ಇಷ್ಟಪಡಲ್ಲ. ಕಿಂಗ್ ಖಾನ್ ಜೊತೆ ತೆರೆಹಂಚಿಕೊಳ್ಳಬೇಕು ಎನ್ನುವ ಕನಸು ಪ್ರತಿಯೊಬ್ಬ ನಟಿಯರಿಗೂ ಇರುತ್ತೆ. ಬಾಲಿವುಡ್ ಅನೇಕ ಸ್ಟಾರ್ ನಟಿಯರು ಶಾರುಖ್ ಜೊತೆ ತೆರೆಹಂಚಿಕೊಂಡಿದ್ದಾರೆ. ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಅಲಿಯಾ ಭಟ್ ಸೇರಿದಂತೆ ಬಾಲಿವುಡ್ ನ ದೊಡ್ಡ ನಟಿಯರು ಶಾರುಖ್ ಜೊತೆ ಮಿಂಚಿದ್ದಾರೆ.

  ಆದರೆ ಇನ್ನು ಕೆಲವು ನಟಿಯರು ಕಿಂಗ್ ಖಾನ್ ಜೊತೆ ತೆರೆಹಂಚಿಕೊಳ್ಳಲು ನಿರಾಕರಿಸಿದ್ದಾರೆ. ನಿರಾಕರಿಸಿದ ನಟಿಯರಲ್ಲಿ ಕಂಗನಾ ರಣಾವತ್ ಮತ್ತು ಸೋನಮ್ ಕಪೂರ್ ಸೇರಿದಂತೆ 4 ನಟಿಯರಿದ್ದಾರೆ ಎನ್ನುವುದು ಅಚ್ಚರಿ ಮೂಡಿಸುತ್ತೆ. ಇವರೆಲ್ಲ ತಮ್ಮದೇ ಆದ ಕಾರಣಗಳಿಂದ ಶಾರುಖ್ ಜೊತೆ ನಟಿಯಲು ಹಿಂದೇಟು ಹಾಕಿದ್ದಾರೆ. ಯಾರೆಲ್ಲ ನಟಿಯರು, ಯಾವ ಕಾರಣಕ್ಕೆ ಬಾದ್ ಶಾ ಜೊತೆ ನಟಿಸಲು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ..

  ನಟಿ ಸೋನಮ್ ಕಪೂರ್

  ನಟಿ ಸೋನಮ್ ಕಪೂರ್

  ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಸೋನಮ್ ಕಪೂರ್ ಕೂಡ ಒಬ್ಬರು. ಅನಿಲ್ ಕಪೂರ್ ಪುತ್ರಿ ಸೋನಮ್ ಬಾಲಿವುಡ್ ಖ್ಯಾತ ನಟ ಶಾರುಖ್ ಜೊತೆ ತೆರೆಹಂಚಿಕೊಳ್ಳಲು ನಿರಾಕರಿಸಿದವರಲ್ಲಿ ಒಬ್ಬರು. ಶಾರುಖ್ ನಟನೆಯ ರಬ್ ನೇ ಬನಾದಿ ಜೋಡಿ ಚಿತ್ರಕ್ಕೆ ಸೋನಮ್ ಮೊದಲ ಆಯ್ಕೆಯಾಗಿದ್ದರು. ಆದರೆ ಸೋನಮ್ ಕಪೂರ್ ತಿರಸ್ಕರಿಸಿದ ಕಾರಣ ಆ ಪಾತ್ರ ಅನುಷ್ಕಾ ಶರ್ಮಾ ಪಾಲಾಯಿತು. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಸೋನಮ್, "ನನ್ನ ಜೊತೆ ಅವರು (ಶಾರುಖ್) ಕೆಲಸ ಮಾಡಲು ಬಯಸಲ್ಲ ಅನಿಸುತ್ತೆ" ಎಂದಿದ್ದರು.

  ಶಾರುಖ್ ಜೊತೆ ನಟಿಸಲು ಸೋನಮ್ ತಿರಸ್ಕರಿಸಿದ್ದೇಕೆ?

  ಶಾರುಖ್ ಜೊತೆ ನಟಿಸಲು ಸೋನಮ್ ತಿರಸ್ಕರಿಸಿದ್ದೇಕೆ?

  ಆದರೆ ಮೂಲಗಳ ಪ್ರಕಾರ ಸೋನಮ್ ಅವರೇ ಸಿನಿಮಾ ತಿರಸ್ಕರಿಸಿದರು ಎನ್ನಲಾಗಿದೆ. ಸೋನಮ್‌ಗಿಂತ ಶಾರುಖ್ ತುಂಬಾ ದೊಡ್ಡವರಾಗಿದ್ದರಿಂದ, ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಲ್ಲ ಎನ್ನವ ಕಾರಣಕ್ಕೆ ಶಾರುಖ್ ಜೊತೆ ತೆರೆಹಂಚಿಕೊಳ್ಳಲು ಸೋನಮ್ ಇಷ್ಟಪಟ್ಟಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ನಿಜವಾದ ಕಾರಣ ಏನು ಎಂದು ಸೋನಮ್ ಬಹಿರಂಗ ಪಡಿಸಿಲ್ಲ.

  ಕಂಗನಾ ರಣಾವತ್

  ಕಂಗನಾ ರಣಾವತ್

  ಬೋಲ್ಡ್ ಮತ್ತು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಕೂಡ ಶಾರುಖ್ ಜೊತೆ ನಟಿಸಲು ಒಲ್ಲೆ ಎಂದಿದ್ದಾರೆ. ಶಾರುಖ್ ಸೇರಿದಂತೆ ಮಾತ್ರವಲ್ಲ ಬಾಲಿವುಡ್‌ನ ಮೂರು ಖಾನ್ ಗಳ ಜೊತೆಯೂ ಕಂಗನಾ ನಟಿಸಿಲ್ಲ. ಖಾನ್ ಗಳೊಂದಿಗೆ ಕೆಲಸ ಮಾಡುವುದರಲ್ಲಿ ದೀರ್ಘಾಯುಷ್ಯವಿಲ್ಲ ಎಂದು ಕಂಗನಾ ಹೇಳಿದ್ದರು.

  ಖಾನ್ ಗಳ ಜೊತೆ ನಟಿಸದಿರುವ ಬಗ್ಗೆ ಕಂಗನಾ ಪ್ರತಿಕ್ರಿಯೆ

  ಖಾನ್ ಗಳ ಜೊತೆ ನಟಿಸದಿರುವ ಬಗ್ಗೆ ಕಂಗನಾ ಪ್ರತಿಕ್ರಿಯೆ

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕರಂಗನಾ, "ಖಾನ್‌ಗಳೊಂದಿಗೆ ಕೆಲಸ ಮಾಡುವುದರಲ್ಲಿ ದೀರ್ಘಾಯುಷ್ಯವಿಲ್ಲ. ನಟಿಸಿದ್ರೆ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತೆ. ನಾನು ಈಗಾಗಲೇ ಇರುವ ಸ್ಥಾನಕ್ಕಿಂತ ಎತ್ತರಕ್ಕೆ ಕರೆದುಕೊಂಡು ಹೋಗುತ್ತಾ? ಸಾಧ್ಯವಿಲ್ಲ. ನನಗೆ ಏನು ನೀಡುತ್ತೆ" ಎಂದಿದ್ದರು. ನಾನು ಶಾರುಖ್ ಖಾನ್ ದೊಡ್ಡ ಅಭಿಮಾನಿ. ಆದರೆ ನಾನು ನನ್ನ ಗೆರೆಯನ್ನು ದಾಟುವುದಿಲ್ಲ" ಎಂದಿದ್ದರು.

  ಹೇಮಾ ಮಾಲಿನಿ

  ಹೇಮಾ ಮಾಲಿನಿ

  ಬಾಲಿವುಡ್‌ನಲ್ಲಿ ಶಾರುಖ್ ಖಾನ್ ದೊಡ್ಡ ಬ್ರೇಕ್ ನೀಡಿದ ನಟಿ ಹೇಮಾ ಮಾಲಿನಿ. 1992ರಲ್ಲಿ ಹೇಮಾ ಮಾಲಿನಿ ಶಾರುಖ್ ಖಾನ್‌ಗೆ 'ದಿಲ್ ಆಶ್ನಾ ಹೈ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಹೇಮಾ ಮಾಲಿನಿ ನಿರ್ದೇಶನದ ಮೊದಲ ಸಿನಿಮಾವಿದು. ಆದರೆ ಅದೇ ನಟಿ ಶಾರುಖ್ ಜೊತೆ ನಟಿಸಲು ತಿರಸ್ಕರಿಸಿದ್ದರು. ಶಾರುಖ್ ಓವರ್ ಆಕ್ಟಿಂಗ್ ಮಾಡುತ್ತಾರೆ, ಅವರ ಅಭಿನಯ ನೈಜವಲ್ಲ ಎನ್ನುವ ಕಾರಣಕ್ಕೆ ಹೇಮಾ ಮಾಲಿನಿ ಶಾರುಖ್ ಜೊತೆ ನಟಿಸಿಲ್ಲ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

  ಗರ್ಲ್ ಫ್ರೆಂಡ್ ಗಾಗಿ ಐಫೋನ್ ಕೇಳಿದವನಿಗೆ ಸೋನು ಸೂದ್ ಏನಂದ್ರು ನೋಡಿ | Filmibeat Kannada
  ಅಮೀಶಾ ಪಟೇಲ್

  ಅಮೀಶಾ ಪಟೇಲ್

  ಶಾರುಖ್ ಜೊತೆ ನಟಿಸಲು ತಿರಸ್ಕರಿಸಿದ ನಟಿಯರಲ್ಲಿ ಅಮಿಶಾ ಪಟೇಲ್ ಕೂಡ ಒಬ್ಬರು. ಶಾರುಖ್ ಜೊತೆ ಮತ್ತು ಅಮೀಶಾ ಕೆಮಿಸ್ಟ್ರಿ ಪ್ರೇಕ್ಷಕರು ಇಷ್ಟಪಡುವುದಿಲ್ಲ ಎನ್ನುವ ಕಾರಣಕ್ಕೆ ಕಿಂಗ್ ಖಾನ್ ಜೊತೆ ನಟಿಸಲು ಅಮೀಶಾ ಹಿಂದೇಟು ಹಾಕಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಮೀಶಾ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

  English summary
  Bollywood 4 Actress refused to work with Shah Rukh Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X