ಕೇವಲ ಒಂದು ದಿನಕ್ಕೆ ದುಬೈನಲ್ಲಿ 23 ಲಕ್ಷ ಹಣ ಖರ್ಚು ಮಾಡಿದ್ದರು ಈ ಖ್ಯಾತ ನಾಯಕಿ...!
ಎರಡು ಸಾವಿರದ ಇಸವಿಯ ಆಸು ಪಾಸಿನಲ್ಲಿ ಚಿರಂಜೀವಿ, ಎನ್ ಟಿ ಆರ್ ಇತ್ಯಾದಿ ಸ್ಟಾರ್‌ಗಳ ಜೊತೆ ರೋಮ್ಯಾನ್ಸ್ ಮಾಡಿದ ಸಮೀರಾ ರೆಡ್ಡಿಯವರನ್ನು ಯಾರು ತಾನೇ ಮರೆಯಲು ಸಾಧ್ಯ. ಕನ್ನಡದ ವರದನಾಯಕ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಸದ್ಯಕ್ಕೆ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಮನೆ-ಗಂಡ-ಮಕ್ಕಳು ಎಂದು ಸಂಸಾರದಲ್ಲಿ ತಲ್ಲೀನರಾಗಿದ್ದಾರೆ
ಇಂಥಾ ಸಮೀರಾ ರೆಡ್ಡಿ ಒಂದು ಕಾಲದಲ್ಲಿ ಕೇವಲ ಶಾಪಿಂಗ್‌ಗೆ ಒಂದಲ್ಲ, ಎರಡಲ್ಲ, ಹತ್ತಲ್ಲ.. ಬರೋಬ್ಬರಿ 23 ಲಕ್ಷ ರೂಪಾಯಿ ಖರ್ಚು ಮಾಡಿದ್ದರು ಎಂದರೆ ನೀವು ನಂಬ್ತೀರಾ..? ನಂಬ್ಲೇಬೇಕು. ಯಾಕೆಂದರೆ ಸಮೀರಾ ರೆಡ್ಡಿ ಅವರೇ ಈ ಮಾತನ್ನೂ ಹೇಳಿದ್ದಾರೆ. ಈ ಮೂಲಕ ಎಲ್ಲರ ನಿಬ್ಬೇರಿಸಿದ್ದಾರೆ.

ಹೌದು, ಫೈನಾನ್ಸ್ ಪ್ಲಾಟ್‌ಫಾರ್ಮ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಮೀರಾ ರೆಡ್ಡಿ, ದುಬೈನಲ್ಲಿ ಕೇವಲ ಶಾಪಿಂಗ್‌ಗೆ ನಾನು ಒಂದು ದಿನಕ್ಕೆ 23 ಲಕ್ಷ ಖರ್ಚು ಮಾಡಿದ್ದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿದ್ದವರು ಶೋ ಆಫ್ ಮಾಡಲು ಇಚ್ಚಿಸುತ್ತಾರೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಈಗ ಅನಗತ್ಯ ಖರ್ಚು ಮಾಡುವುದಕ್ಕಿಂತ ಉಳಿತಾಯ ಮಾಡುವುದು ಮುಖ್ಯ ಎನ್ನುವುದು ನನ್ನ ಭಾವನೆ ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ. ಈಗ ಆ ತರಹದ ಹುಚ್ಚು ನನಗೆ ಇಲ್ಲ ಎಂದು ಕೂಡ ಹೇಳಿದ್ದಾರೆ. ಸಮೀರಾ ರೆಡ್ಡಿ ಅವರ ಈ ಮಾತು ಕೇಳಿ ನಿರೂಪಕಿ ಕೂಡ ಹೌಹಾರಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಸಮೀರಾ ರೆಡ್ಡಿ, ಬೇಗ ನಿವೃತ್ತಿಯಾಗಲು ಬಯಸುವವರು ವ್ಯವಸ್ಥಿತ ಹೂಡಿಕೆ ಯೋಜನೆ ಅಡಿ ಹಣ ಹೂಡಿದರೆ ಉತ್ತಮ ಎಂದು ಸಲಹೆಯನ್ನು ನೀಡಿದ್ಧಾರೆ. ನಿಮ್ಮ ಜೀವನ ಉತ್ತಮವಾಗಿರಬೇಕು ಅಂದರೆ ಹಣ ಉಳಿತಾಯ ಮಾಡಿ, ಕೊನೆ ಪಕ್ಷ 500 ರೂಪಾಯಿಯಾದರೂ ಮೀಸಲಿಡಿ ಎಂದು ಹೇಳಿದ್ದಾರೆ. ಮುಂದೊಂದು ದಿನ ಆ ಹಣ ನಿಮಗೆ ನೆರವಾಗುತ್ತೆ ಎಂದು ಕೂಡ ಹೇಳಿದ್ದಾರೆ.
ಈ ಕುರಿತು ವಿಡಿಯೋ ಜೊತೆ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಕೂಡ ಬರೆದುಕೊಂಡಿರುವ ಸಮೀರಾ ರೆಡ್ಡಿ, ನಾನು ವರ್ಷಗಳಿಂದ ಮಾಡಿದ ವ್ಯವಸ್ಥಿತ ಉಳಿತಾಯ ಮತ್ತು ಹೂಡಿಕೆಗಳು ನನ್ನನ್ನು ಒಂದು ಕಾಲದಲ್ಲಿ ಉಳಿಸಿದವು ಎಂದಿದ್ದಾರೆ. ಮುಂದುವರೆದು ನಿಮ್ಮ ಹಣದ ಮೇಲೆ ನೀವು ನಿಯಂತ್ರಣ ಹೊಂದಿರಬೇಕು ಎಂದು ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಕನ್ನಡದಲ್ಲಿ ವರದನಾಯಕ ಚಿತ್ರವೇ ಕೊನೆ. ಆ ನಂತರ ಬಣ್ಣದ ಲೋಕದಿಂದ ದೂರ ಇರುವ ಸಮೀರಾ ರೆಡ್ಡಿ, ಜನವರಿ 21-2014ರಂದು ಅಕ್ಷಯ್ ವರ್ದೆ ಅವರ ಜೊತೆ ಸಪ್ತಪದಿಯನ್ನ ತುಳಿದರು. ಆ ನಂತರ ಗರ್ಭಿಣಿಯಾಗಿದ್ದಾಗ ಸ್ವಿಮ್ ಸೂಟ್ ನಲ್ಲಿ, ಅದೂ ಅಂಡರ್ ವಾಟರ್ ಫೋಟೋ ಶೂಟ್ ಮಾಡಿಸಿಕೊಂಡು ನೋಡುಗರ ಹುಬ್ಬೇರುವಂತೆ ಮಾಡಿದ್ದರು. ಸಮೀರಾಗೆ ಸದ್ಯ ಎರಡು ಮುದ್ದಾದ ಮಕ್ಕಳಿದ್ದಾರೆ. ಸದ್ಯಕ್ಕೆ ಸಮೀರಾ ರೆಡ್ಡಿ ಗೋವಾದಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನೂ.. ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ಕೂಡ ಆಗಿರುವ ಸಮೀರಾ ರೆಡ್ಡಿ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.


Click it and Unblock the Notifications











