ದಪ್ಪಗೆ ಮುದ್ದು ಮುದ್ದಾಗಿ ಇರುವ ಈ ಹುಡುಗಿ ಈಗ ಬಾಲಿವುಡ್ ಸ್ಟಾರ್ ನಟಿ
ದಪ್ಪಗೆ, ಗುಂಡಗೆ ಮುದ್ದಾಗಿ ಇರುವ ಈ ಸುಂದರಿ ಈಗ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟನ ಮಗಳು ಒಂದು ಕಾಲದಲ್ಲಿ ಹೀಗಿದ್ದರು. ಇದು ತುಂಬಾ ವರ್ಷಗಳ ಹಿಂದಿನ ಫೋಟೋ ಅಂತ ಅಂದ್ಕೋಬೇಡಿ. ಸುಮಾರು ನಾಲ್ಕು ವರ್ಷಗಳ ಹಿಂದಿನ ಫೋಟೊ ಅಷ್ಟೆ. ಅಂದು ಈಕೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಅಂತ ಯಾರು ಅಂದುಕೊಂಡಿರಲ್ಲ.
ಆದರೀಗ ತುಂಬಾ ತೆಳ್ಳಗೆ ಆಗಿ ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಂದ್ಹಾಗೆ ಈಕೆ ಮತ್ಯಾರು ಅಲ್ಲ ಬಾಲಿವುಡ್ ನಟ ಸೈಲ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್. ಈ ಬಗ್ಗೆ ಈಗ್ಯಾಕೆ ಅಂತೀರಾ, ಸಾರಾ ಇತ್ತೀಚಿಗೆ ತನ್ನ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾರಾ ಬದಲಾವಣೆ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. 2018ರಲ್ಲಿ ಕೇದಾರನಾಥ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಸಾರಾ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಎರಡು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ.
ಚಿತ್ರರಂಗಕ್ಕೂ ಎಂಟ್ರಿ ಕೊಡುವ ಮೊದಲು ಸಾರಾ ಸುಮಾರು 90kg ಇದ್ದರಂತೆ. ಆ ನಂತರ ಸಿನಿಮಾಗಾಗಿ ಜಿಮ್ ನಲ್ಲಿ ಬೆವರಳಿಸಿ, ವರ್ಕೌಟ್ ಮಾಡಿ ಸ್ಲಿಮ್ ಆಗಿದ್ದಾರೆ. ನಾಲ್ಕು ವರ್ಷಗಳಲ್ಲಿ ಝೀರೋ ಸೈಜ್ ಆಗಿರುವ ಸಾರಾ ತೂಕ ಇಳಿಸಿಕೊಳ್ಳುವ ವೇಳೆ ಸಖತ್ ಕಷ್ಟಪಟ್ಟಿದ್ದಾರಂತೆ. ಹಾರ್ಮೋನ್ ಗಳಲ್ಲಿ ತುಂಬ ವ್ಯತ್ಯಾಸವಾಗುತ್ತಿತ್ತಂತೆ. ಆದರೂ ಛಲ ಬಿಡದೆ ಹಗಲು ರಾತ್ರಿ ವರ್ಕೌಟ್ ಮಾಡಿ ಸ್ಲಿಮ್ ಆಗಿ ಈಗ ಬಾಲಿವುಡ್ ನ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.


Click it and Unblock the Notifications











