ಬಾಲಿವುಡ್ ನಟಿ ಶಕೀಲಾ ಹೃದಯಾಘಾತದಿಂದ ನಿಧನ
1950ರ ದಶಕದ ಜನಪ್ರಿಯ ಬಾಲಿವುಡ್ ನಟಿ ಶಕೀಲ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶಕೀಲಾ, ಬುಧವಾರ (ಸೆಪ್ಟೆಂಬರ್ 20) ಸಂಜೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
1956 ರಲ್ಲಿ ತೆರೆಕಂಡಿದ್ದ 'ಹತಿಮ್ ತೈ', 'ಆರ್ ಪಾರ್' (1954), 'ಚೈನಾ ಟೌನ್', 'ಪೋಸ್ಟ್ ಬಾಕ್ಸ್ 999', 'ದಾಸ್ತಾನ್', 'ಅಘೋಷ್', 'ರಾಜ್ ಮಹಾಲ್', 'ಅರ್ಮಾನ್', 'ಲಾಲ್ ಪುರಿ', 'ರೂಪ್ ಕುಮಾರಿ', 'ಶ್ರೀಮಾನ್ ಸತ್ಯವತಿ' (1960) ಸೇರಿದಂತೆ ಹಲವು ಚಿತ್ರಗಳಲ್ಲಿ ಶಕೀಲಾ ನಟಿಸಿದ್ದರು.

ನಟನೆಗಿಂತ ಹೆಚ್ಚು ಡಾನ್ಸ್ ನಲ್ಲಿ ನಟಿ ಶಕೀಲಾ ಖ್ಯಾತಿಗಳಿಸಿಕೊಂಡಿದ್ದರು. 'ಬಾಬುಜೀ ಧೀರೆ ಚಲ್ನಾ', 'ನೀಂದ್ ನಾ ಮುಜ್ಕೋ ಆಯೇ' ಹಾಗೂ 'ಲೇಕೆ ಪೆಹ್ಲಾ ಪೆಹ್ಲಾ ಪ್ಯಾರ್' ಮುಂತಾದ ಹಿಟ್ ಸಾಂಗ್ ಗಳಲ್ಲಿ ಹೆಜ್ಜೆ ಹಾಕಿದ್ದರು.

ಶಕೀಲಾ, ಎನ್‌ಆರ್‌ಐ ವ್ಯಕ್ತಿಯನ್ನ ವಿವಾಹವಾಗಿದ್ದು, ಮದುವೆಯ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಿ ಕೆಲ ವರ್ಷ ಲಂಡನ್‌ನಲ್ಲಿ ನೆಲೆಸಿದ್ದರು. ನಂತರ ಮುಂಬೈಗೆ ವಾಪಾಸ್ಸಾಗಿ ಇಲ್ಲಿಯೇ ನೆಲೆಸಿದ್ದರು.
More from Filmibeat
English summary
Actress Shakila passed away on Wednesday evening after a heart attack at the age of 82. The funeral was held on Thursday morning at the Mahim cemetery in Mumbai


Click it and Unblock the Notifications











