ಫೋಟೋಗ್ರಾಫರ್ ಜೊತೆ ಶ್ರದ್ಧಾ ಕಪೂರ್ ಮದುವೆ: ನಟಿ ಹೇಳಿದ್ದೇನು?
Recommended Video
ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸ್ಟ್ರೀಟ್ ಡ್ಯಾನ್ಸರ್-3 ಸಿನಿಮಾದ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದಾರೆ. ಸದಾ ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರದ್ಧಾ ಬಗ್ಗೆ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಹೋ ನಟಿ ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸ್ಟಾರ್ ನಟಿ ಖ್ಯಾತ ಫೋಟೋಗ್ರಾಫರ್ ರೋಹನ್ ಶ್ರೇಷ್ಠಾ ಅವರನ್ನು ಪ್ರೀತಿಸುತ್ತಿದ್ದಾರೆ. ಈ ವರ್ಷವೇ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಶ್ರದ್ಧಾ ಮತ್ತು ರೋಹನ್ ನಡುವಿನ ಪ್ರೀತಿ, ಪ್ರೇಮದ ವಿಚಾರ ಆಗಾಗ ಸುದ್ದಿ ಆಗುತ್ತಲೆ ಇದೆ. ಆದ್ರೀಗ ಈ ಸುದ್ದಿ ಮತ್ತೆ ವೈರಲ್ ಆಗಿದ್ದು, ಸದ್ಯದಲ್ಲೆ ಮದುೆವ ಆಗ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶ್ರದ್ಧಾ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಮಾತನಾಡಿದ ಶ್ರದ್ಧಾ ನಗುತ್ತಾ ಉತ್ತರಿಸಿದ್ದಾರೆ.
"ಈಗ ನನಗೆ ಸಿನಿಮಾ ಬಿಟ್ಟರೆ ಬೇರೆಯಾವುದರ ಬಗ್ಗೆಯು ಯೋಚನೆ ಮಾಡಲು ಸಮಯವಿಲ್ಲ. ನಾನು ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೀನಿ. ನೀವು ಕೇಳಿದ್ದಂತೆ ಇದು ವದಂತಿ ಮಾತ್ರ" ಎಂದು ಹೇಳಿದ್ದಾರೆ. ಅಂದ್ಮೇಲೆ ಶದ್ಧಾ ಸಧ್ಯದಲ್ಲೇ ಹಸೆಮಣೆ ಏರುತ್ತಾರೆ ಎನ್ನುವ ಮಾತು ಸಧ್ಯಕ್ಕೆ ದೂರವಾದ ಮಾತಾಗಿದೆ.

ಸ್ಕ್ರೀಟ್ ಡ್ಯಾನ್ಸರ್ ಸಿನಿಮಾ ಜೊತೆಗೆ ಭಾಗಿ-3 ಮತ್ತು ಲವ್ ರಂಜನ್ ನಿರ್ದೇಶನದ ರಣಬೀರ್ ಕಪೂರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದಲ್ಲು ಶ್ರದ್ಧಾ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರದ್ಧಾ ಮದುವೆ ಕನಸು ದೂರದ ಮಾತಾಗಿದೆ.


Click it and Unblock the Notifications