"ನಿರ್ಮಾಪಕರೇ ನನ್ನ ಬಗ್ಗೆ ರೂಮರ್ ಹಬ್ಬಿಸುತ್ತಿದ್ರು"; ಉಪ್ಪಿ ಶಿವಣ್ಣ ಜೊತೆ ನಟಿಸಿದ ಸೋನಾಲಿ ಬೇಂದ್ರೆ ಕಾಮೆಂಟ್

By ಫಿಲ್ಮಿಬೀಟ್ ಡೆಸ್ಕ್

ಸೋನಾಲಿ ಬೇಂದ್ರ ಒಂದು ಕಾಲದ ಸ್ಟಾರ್ ಹೀರೋಯಿನ್. ಬಾಲಿವುಡ್ ಸಿನಿಮಾಗಳು ಮಾತ್ರವೇ ಅಲ್ಲದೆ, ಮರಾಠಿ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈ ನಟಿ ಒಂದು ಕಾಲದ ಟಾಪ್ ಹೀರೋಯಿನ್. ಯುವಕರ ಫೇವರಿಟ್ ನಾಯಕಿಯಾಗಿದ್ದವರು.

ಈ ಬಾಲಿವುಡ್ ನಟಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಆ ಸಿನಿಮಾ ಮತ್ಯಾವುದೂ ಅಲ್ಲ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಅಭಿನಯದ 'ಪ್ರೀತ್ಸೆ'. ಈ ಸಿನಿಮಾ ಬಾಲಿವುಡ್‌ನ 'ಡರ್' ಸಿನಿಮಾದ ರಿಮೇಕ್ ಅಗಿದ್ದರೂ, ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಹಿಟ್ ಆಗಿತ್ತು.

Bollywood Actress Sonali Bendre says south producers spread rumours

ಸೋನಾಲಿ ಬೇಂದ್ರೆ ನಟಿಸಿದ್ದು ಕೇವಲ ಒಂದೇ ಒಂದು ಕನ್ನಡ ಸಿನಿಮಾ ಅದು 'ಪ್ರೀತ್ಸೆ'. ಈ ಸಿನಿಮಾ ಬಿಟ್ಟೆ ತಮಿಳಿನಲ್ಲಿ ಎರಡು, ತೆಲುಗಿನಲ್ಲಿ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿದರೆ, ತೆಲುಗಿನಲ್ಲಿ ನಟಿಸಿದ್ದೇ ಹೆಚ್ಚು. ಕೇವಲ ಬೆರಳೆಣಿಕೆಯಷ್ಟು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ಸೋನಾಲಿ ಬೇಂದ್ರೆ ನಿರ್ಮಾಪಕರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗಷ್ಟೇ ಸೋನಾಲಿ ಬೇಂದ್ರೆ ಸಂದರ್ಶನವೊಂದರಲ್ಲಿ ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 1994ರಲ್ಲಿ ಇಂಡಸ್ಟ್ರಿಗೆ ಬಂದೆ. ಆಗಿನ ಪರಿಸ್ಥಿತಿಯನ್ನು ಹೋಲಿಸಿದೆ, ಈಗಿನ ಪರಿಸ್ಥಿತಿ ತೀರಾ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಆಗ ನಿರ್ಮಾಪಕರು ತನ್ನ ಮತ್ತು ತನ್ನ ಸಹ ನಟರ ನಡುವೆ ವದಂತಿಗಳನ್ನು ಹಬ್ಬಿಸುತ್ತಿದ್ದರು ಎಂದು ಸೋನಾಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, "ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಎಲ್ಲಾ ಹೀರೋಯಿನ್‌ಗಳು ಕೊಬ್ಬಿದವರಾಗಿದ್ದರು. ಆದರೆ ನಾನು ಮಾತ್ರ ತೆಳ್ಳಗಿದ್ದೆ. ಎಲ್ಲರೂ ನನ್ನನ್ನು ಆಡಿಕೊಳ್ಳುತ್ತಿದ್ದರು. ಅಲ್ಲದೆ ನಿರ್ಮಾಪಕರು ನನ್ನ ಹಾಗೂ ನಟರ ನಡುವೆ ವದಂತಿಗಳನ್ನು ಹಬ್ಬಿಸುತ್ತಿದ್ದರು. ಆ ಕೆಟ್ಟ ಪ್ರವೃತ್ತಿ ಇನ್ನೂ ಇದೆ" ಎಂದು ಸೋನಾಲಿ ಬೇಂದ್ರೆ ಹೇಳಿದ್ದಾರೆ.

Bollywood Actress Sonali Bendre says south producers spread rumours

ಇದರೊಂದಿಗೆ "ನಿರ್ಮಾಪಕರೇ ನಟ ನಟಿಯರ ನಡುವೆ ವದಂತಿಗಳನ್ನು ಮಾಧ್ಯಮಗಳಿಗೆ ಹರಿಯ ಬಿಡುತ್ತಿದ್ದರು. ಇದನ್ನು ತಿಳಿದು ನನಗೆ ಶಾಕ್ ಆಗಿತ್ತು. ಅನೇಕರು ನನ್ನ ಬಗ್ಗೆ ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ." ಎಂದು ಸೋನಾಲಿ ಬೇಂದ್ರೆ ಹೇಳಿಕೊಂಡಿದ್ದು, ಅದೇ ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಸೋನಾಲಿ ಬೇಂದ್ರೆ ವಿವಾಹದ ಬಳಿಕ ಸಿನಿಮಾದಿಂದ ದೂರವಿದ್ದಾರೆ. ಅಲ್ಲದೆ ಕ್ಯಾನ್ಸರ್ ಗೆದ್ದು ಬಂದಿರೋ ನಟಿ ಕೆಲವು ವರ್ಷಗಳಿಂದ ಟಿವಿ ಶೋಗಳು ಹಾಗೂ ವೆಬ್‌ ಸೀರಿಸ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bollywood Actress Sonali Bendre says south producers spread rumours  
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X