ಗಂಡು ಮಗುವಿಗೆ ಜನ್ಮ ಕೊಟ್ಟ ನಟಿ ಸೋನಂ ಕಪೂರ್!

ನಟಿ ಸೋನಂ ಕಪೂರ್ ಬಾಲಿವುಡ್‌ನಲ್ಲಿ ನಂಬರ್ 1 ನಟಿಯಾಗಿ ಮಿಂಚಿದ್ದಾರೆ. ಸೋನಂ ಕಪೂರ್ ಅನಿಲ್ ಕಪೂರ್ ಪುತ್ರಿ. ಹಾಗಾಗಿ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಸ್ಟಾರ್ ಆಗಿ ಬೇಡಿಕೆ ಇದ್ದರೂ ಕೂಡ, ಇತ್ತೀಚೆಗೆ ಸೋನಂ ಸಿನಿಮಾದಿಂದ ದೂರಾಗಿದ್ದಾರೆ.

ಮದುವೆ ಆದ ಬಳಿಕ ನಟಿ ಸೋನಂ ಕಪೂರ್ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದರು. ಸೋನಂ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದರೂ, ಕೂಡ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಪತಿಯ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಳ್ಳಯತ್ತಾ ಇದ್ದರು.

ಹಾಗೆಯೇ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದನ್ನು ಕೂಡ ಫೋಟೋ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು. ಈಗ ಮಗುವಿಗೆ ಜನ್ಮ ನೀಡುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ.

ತಾಯಿಯಾದ ಸೋನಂ ಕಪೂರ್!

ತಾಯಿಯಾದ ಸೋನಂ ಕಪೂರ್!

ನಟಿ ಸೋನಂ ಕಪೂರ್ ಇತ್ತೀಚಿಗೆ ತಾವು ತಾಯಿ ಆಗುತ್ತಿರುವ ಬಗ್ಗೆ ಸುದ್ದಿಯನ್ನು ಹಂಚಿಕೊಂಡಿದ್ದರು. ಇದೀಗ ಸೋನಂ ಕಪೂರ್ ಗಂಡು ಮಗುವಿಗೆ ಜನ್ಮ ನೀಡುವುದರ ಮೂಲಕ ತಾಯಿಯಾಗಿದ್ದಾರೆ. ಇಂದು( ಆಗಸ್ಟ್ 20)ರಂದು ಸೋನಂ ಕಪೂರ್ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ಸದ್ಯ ಹೊರಬಂದಿದ್ದು, ಸೋನಂ ಕಪೂರ್ ಕುಟುಂಬಸ್ಥರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಈ ಮೂಲಕ ಸೋನಂ ಕಪೂರ್ ಮತ್ತು ಪತಿ ಆನಂದ್ ಪೋಷಕರ ಪಟ್ಟಕ್ಕೇರಿದ್ದಾರೆ.

ಪೋಸ್ಟ್ ಹಂಚಿಕೊಂಡ ನೀತು ಕಪೂರ್!

ಪೋಸ್ಟ್ ಹಂಚಿಕೊಂಡ ನೀತು ಕಪೂರ್!

ನಟಿ ಸೋನಂ ಕಪೂರ್ ಮಗುವಿಗೆ ಜನ್ಮ ನೀಡಿರುವ ವಿಚಾರವನ್ನ, ನೀತು ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೋನಂ ಕಪೂರ್ ಮತ್ತು ಆನಂದ್ ಅಹುಜಾಗೆ ಶುಭಕೋರಿ ಪೋಸ್ಟನ್ನು ಹಾಕಿಕೊಂಡಿದ್ದಾರೆ. "ತುಂಬು ಹೃದಯದಿಂದ ಮುದ್ದಾದ ಮಗುವನ್ನು ನಾವು ಸ್ವಾಗತಿಸುತ್ತಿದ್ದೇವೆ, ಈ ಪಯಣದಲ್ಲಿ ನಮಗೆ ಸಹಕಾರ ನೀಡಿದ ವೈದ್ಯರು, ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಧನ್ಯವಾದಗಳು" ಎಂದು ಬರೆದು ಕೊಳ್ಳುವುದರ ಮೂಲಕ ಸೋನಂ ಕಪೂರ್ ಮತ್ತು ಆನಂದ್ ಅವ್ರಿಗೆ ಶುಭಕೋರಿದ್ದಾರೆ ನೀತು ಕಪೂರ್.

ಬೇಬಿ ಬಂಪ್ ಫೋಟೋಶೂಟ್!

ಬೇಬಿ ಬಂಪ್ ಫೋಟೋಶೂಟ್!

ಸೋನಂ ಕಪೂರ್ ತಾಯಿಯಾಗುತ್ತಿರುವ ವಿಚಾರವನ್ನು ಬೇಬಿ ಬಂಪ್ ಫೋಟೋಶೂಟ್ ಮಾಡುವ ಮೂಲಕ ಹಂಚಿಕೊಂಡಿದ್ದರು. ಸ್ಟೈಲಿಶ್ ಆಗಿ ವಿಭಿನ್ನ ರೀತಿಯಲ್ಲಿ ಬೇಬಿ ಫೋಟೋ ಶೂಟ್ ಮಾಡಿ ಮಿಂಚಿದ್ದರು ಸೋನಂ ಕಪೂರ್. ನಂತರ ಸೋನಂ ಕಪೂರ್ ಎರಡು ಬಾರಿ ಸೀಮಂತವನ್ನು ಕೂಡ ಮಾಡಿಕೊಂಡಿದ್ದರು. ಆದರೆ ಸೋನಂ ಕಪೂರ್ ಸೀಮಂತ ಕಾರ್ಯಕ್ರಮದಲ್ಲಿ ಕೂಡ ಮಾಡ್ರನ್ ಕಾಸ್ಟೂಂನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮಿಂಚಿದ್ದರು. ಇದೀಗ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.

ಕಪೂರ್ ಕುಟುಂಬದಲ್ಲಿ ಮುಂದಿ ಸರದಿ ಆಲಿಯಾದ್ದು!

ಕಪೂರ್ ಕುಟುಂಬದಲ್ಲಿ ಮುಂದಿ ಸರದಿ ಆಲಿಯಾದ್ದು!

ಸೋನಂ ಕಪೂರ್ ಬಳಿಕ ಈ ಸರದಿಯಲ್ಲಿ ನಟಿಯ ಆಲಿಯಾ ಭಟ್ ಇದ್ದಾರೆ. ಈಗಾಗಲೇ ಆಲಿಯಾ ಭಟ್ ತಾಯಿಯಾಗುತ್ತಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಹಾಗಾಗಿ ಕೆಲವು ತಿಂಗಳಿನಿಂದ ಆಲಿಯಾ ಭಟ್ ಬೇಬಿ ಬಂಪ್ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಪೂರ್ ಕುಟುಂಬದಲ್ಲಿ ಸೋನಂ ಕಪೂರ್ ಬಳಿಕ ಆಲಿಯಾ ಭಟ್ ಮಗುವಿಗೆ ಜನ್ಮ ನೀಡಲಿದ್ದಾರೆ. ಇದೇ ಕುತೂಹಲದಲ್ಲಿ ಕಪೂರ್ ಕುಟುಂಬ ಖುಷಿಯಲ್ಲಿ ಕಾಯುತ್ತಿದೆ.

More from Filmibeat

English summary
Bollywood Actress Sonam Kapoor Blessed With Baby Boy, All Are Wishing The Coupls, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X