ಸನ್ನಿ ಲಿಯೋನ್ ಸಂಭಾವನೆ ಕೇಳಿ ನಿರ್ಮಾಪಕರು ಕಂಗಾಲು
Recommended Video

ಸನ್ನಿ ಲಿಯೋನ್, ಈ ನಟಿ ವರ್ಷಪೂರ್ತಿ ಸದ್ದು ಮಾಡುತ್ತಲೇ ಫೇಮಸ್ ಆದವರು. ಅಷ್ಟೇ ಅಲ್ಲದೆ ವರ್ಷಾಂತ್ಯದಲ್ಲೂ ಬೆಂಗಳೂರಿನಲ್ಲಿ ಸನ್ನಿಯದ್ದೇ ಸುದ್ದಿ. ಅಷ್ಟರ ಮಟ್ಟಿಗೆ ಸನ್ನಿ ಲಿಯೋನ್ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನೀಲಿ ಚಿತ್ರಗಳ ಸುಂದರಿ, ಮಾದಕ ನಟಿ ಅಂತೆಲ್ಲಾ ಫೇಮಸ್ ಆಗಿರುವ ನಟಿ ಸನ್ನಿ ಲಿಯೋನ್ ಗೂಗಲ್ ನಲ್ಲೂ ನಂಬರ್ ಒನ್ ಪಟ್ಟವನ್ನ ಪಡೆದುಕೊಂಡಿದ್ದಾರೆ. ಈ ವರ್ಷ ಜನರು ಗೂಗಲ್ ನಲ್ಲಿ ಅತೀ ಹೆಚ್ಚಾಗಿ ಸನ್ನಿ ಬಗ್ಗೆಯೇ ಸರ್ಚ್ ಮಾಡಿದ್ದಾರಂತೆ.
ಇಷ್ಟೇಲ್ಲಾ ವಿಚಾರದಲ್ಲಿ ಸುದ್ದಿ ಮಾಡಿರುವ ಈ ನಟಿ ಈಗ ಬಾಹುಬಲಿಯ ನಾಯಕಿಯನ್ನ ಹಿಂದಿಕ್ಕಿದ್ದಾರೆ. 'ಬಾಹುಬಲಿ' ಸಿನಿಮಾ ನೋಡಿ ವಾವ್ ನಾಯಕಿ ಅಂದರೆ ಹಿಂಗಿರಬೇಕು ಅಂತಿದ್ದ ಪ್ರೇಕ್ಷಕರಿಗೆ ಆಶ್ಚರ್ಯವಾಗುವಂತೆ ಸನ್ನಿ ಲಿಯೋನ್ ಮಾಡಿದ್ದಾರೆ.
ಹಾಗಾದರೆ ಅನುಷ್ಕಾ ಶೆಟ್ಟಿಯನ್ನು ಓವರ್ ಟೇಕ್ ಮಾಡುವಂತ ಕೆಲಸ ಸನ್ನಿ ಲಿಯೋನ್ ಏನು ಮಾಡಿದರು? ಅನುಷ್ಕಾ ಶೆಟ್ಟಿಗೂ ಸನ್ನಿ ಲಿಯೋನ್ ಗೂ ಎಲ್ಲಿಂದ ಎಲ್ಲಿಗೆ ಹೋಲಿಕೆ ಅಂತೆಲ್ಲಾ ನೀವೇನಾದರೂ ಯೋಚನೆ ಮಾಡಿದ್ದರೆ ಅದು ತಪ್ಪು. ಸನ್ನಿ ನಾನು ಯಾರಿಗೂ ಕಮ್ಮಿ ಇಲ್ಲ ಅಂತ್ತಿದ್ದಾರೆ. ಏನದು ಸುದ್ದಿ ಅಂತೀರಾ? ಮುಂದೆ ಓದಿ

ಸಂಭಾವನೆ ವಿಚಾರದಲ್ಲಿ ಅನುಷ್ಕಾರನ್ನು ಹಿಂದಿಕ್ಕಿದ ನಟಿ
ಮಾದಕ ನಟಿ ಸನ್ನಿ ಲಿಯೋನ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ದಿನೇ ದಿನೇ ಸನ್ನಿ ಲಿಯೋನ್ ಅವರಿಗೆ ಸಿನಿಮಾಗಳಲ್ಲಿ ಅಭಿನಯಿಸುವಂತೆ ಡಿಮ್ಯಾಂಡ್ ಹೆಚ್ಚಾಗಿರುವುದೇ ಇದಕ್ಕೆ ಕಾರಣವಂತೆ. ಈಗ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ.

ಬಿಗ್ ಬಜೆಟ್ ಸಿನಿಮಾದಲ್ಲಿ ಸನ್ನಿ ಲಿಯೋನ್
ಸೌತ್ ಸಿನಿಮಾವೊಂದರಲ್ಲಿ ಸನ್ನಿ ಲಿಯೋನ್ ರನ್ನು ನಾಯಕಿ ಮಾಡಲು ನಿರ್ಮಾಪಕರೊಬ್ಬರು ಸಂಪರ್ಕ ಮಾಡಿದ್ದಾರೆ. ಆಗ ಸನ್ನಿ ಟ್ಯಾಕ್ಸ್ ಎಲ್ಲವೂ ಸೇರಿ 3.5 ಕೋಟಿ ಸಂಭಾವನೆಯನ್ನ ಡಿಮ್ಯಾಂಡ್ ಮಾಡಿದ್ದಾರಂತೆ. 'ಬಾಹುಬಲಿ' ಚಿತ್ರದಲ್ಲಿ ನಟಿಸಲು ಅನುಷ್ಕಾ ಶೆಟ್ಟಿ 2.5ಕೋಟಿ ಪಡೆದಿದ್ದರಂತೆ. ಆದರೆ ಸನ್ನಿ ಈಗ ಅನುಷ್ಕಾರಿಗಿಂತ ಹೆಚ್ಚು ಹಣ ಪಡೆದು ನಾಲ್ಕು ಭಾಷೆಯಲ್ಲಿ ತೆರೆಗೆ ಬರಲಿರುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇಮೇಜ್ ಬದಲಿಸಿಕೊಳ್ಳಲಿರುವ ನಟಿ
ಸದ್ಯ ಸನ್ನಿ ಲಿಯೋನ್ 3.5 ಕೋಟಿ ಸಂಭಾವನೆ ಕೇಳಿರುವ ಸಿನಿಮಾದ ಬಗ್ಗೆ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ ಸಿನಿಮಾತಂಡ. ಆದರೆ ಚಿತ್ರದಲ್ಲಿ 18 ನೇ ಶತಮಾನದ ರಾಜಕುಮಾರಿ ಪಾತ್ರದಲ್ಲಿ ಸನ್ನಿಲಿಯೋನ್ ಅಭಿನಯಿಸಲಿದ್ದಾರೆ. ಇದೇ ಕಾರಣಕ್ಕೆ ಅನುಷ್ಕಾ 'ಬಾಹುಬಲಿ' ಚಿತ್ರದಲ್ಲಿ ಪಡೆದ ಸಂಭಾವನೆಗಿಂತಲೂ ಹೆಚ್ಚು ಹಣವನ್ನ ಕೇಳಿದ್ದಾರೆ. ಫೆಬ್ರವರಿ ಮೊದಲವಾರದಲ್ಲಿ ಚಿತ್ರ ಸೆಟ್ಟೇರಲಿದೆ.

ಸನ್ನಿ ಲಿಯೋನ್ ಈಗ ಮೀನಾ ಕುಮಾರಿ
ಭಾರತೀಯ ಸಿನಿಮಾರಂಗದಲ್ಲಿ ಅತೀ ಸುಂದರಿ ಹಾಗೂ ದುರಂತ ನಾಯಕಿ ಎಂದೇ ಪ್ರಖ್ಯಾತಿ ಪಡೆದಿದ್ದ ನಟಿ ಮೀನಾ ಕುಮಾರಿಯ ಪಾತ್ರದಲ್ಲಿ ಸನ್ನಿ ಲಿಯೋನ್ ಅಭಿನಯಿಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ವಿದ್ಯಾಬಾಲನ್ ಹಾಗೂ ಮಾಧುರಿ ದೀಕ್ಷಿತ್ ಅಭಿನಯಿಸಲು ಒಪ್ಪದೇ ಇದ್ದ ಪಾತ್ರವನ್ನ ಸನ್ನಿ ನಿರ್ವಹಿಸಲಿದ್ದಾರೆ. ಈ ಚಿತ್ರದ ಮೂಲಕ ನೀಲಿ ಸಿನಿಮಾಗಳ ನಟಿ ಎನ್ನುವ ಹಣೆ ಪಟ್ಟಿ ಕಿತ್ತಾಕಲಿದ್ದಾರೆ ಸನ್ನಿಲಿಯೋನ್ .


Click it and Unblock the Notifications











