28ರ ಯುವಕನ ಜೊತೆ 42ವಯಸ್ಸಿನ ಸುಶ್ಮಿತಾ ಸೇನ್ ಮದುವೆ?

ಮಾಡಿ ವಿಶ್ವಸುಂದರಿ ಸುಶ್ಮಿತಾ ಸೇನ್ ಮದುವೆ ವಿಚಾರವಾಗಿ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸುಶ್ಮಿತಾ ಸೇನ್ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 42 ವರ್ಷವಾದರು ಮದುವೆಯಾಗದೆ ಸಿನಿಮಾ, ಮಾಡಲಿಂಗ್, ರ್ಯಾಂಪ್ ವಾಕ್ ಅಂತಿದ್ದ ಸುಶ್ಮಿತಾ ಈಗ ದಿಢೀರನೆ ಮದುವೆ ಪ್ಲಾನ್ ಮಾಡಿದ್ದಾರೆ.

ಸುಶ್ಮಿತಾ ಹೆಸರು ಸಾಕಷ್ಟು ಜನರ ಜೊತೆ ತಳಕು ಹಾಕಿಕೊಂಡರು ಯಾರ ಜೊತೆಯು ಮದುವೆಯಾಗ ಸಿಶ್ಮಿತಾ ಈಗ ಗೆಳೆಯ ರೋಹ್ಮಾನ್ ಶಾನ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷದಿಂದ ಮಾಡೇಲ್ ರೋಹ್ಮಾನ್ ಶಾಲ್ ಜೊತೆ ಡೇಟಿಂಗ್ ನಲ್ಲಿದ್ದ ಸುಶ್ಮಿತಾ ಈಗ ಅದೆ ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ನಿರ್ಧಾರಮಾಡಿದ್ದಾರಂತೆ.

ಟಾಪ್ ಬ್ಯೂಟಿ ಇದುವೆರಗೂ ಮದುವೆಯಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆಗಾಗ ಸುಶ್ಮಿತಾ ಹೆಸರು ಕೆಲವರ ಜೊತೆ ಲಿಂಕ್ ಅಪ್ ಆದರು ಮದುವೆ ವರೆಗೂ ಹೋಗಿರಲ್ಲಿಲ್ಲ. ಆದ್ರೀಗ ಮಾಜಿ ವಿಶ್ವ ಸುಂದರಿಯ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವರ್ಷದ ಕೊನೆಯಲ್ಲಿ ಸುಶ್ಮಿತಾ ಮದುವೆ

ವರ್ಷದ ಕೊನೆಯಲ್ಲಿ ಸುಶ್ಮಿತಾ ಮದುವೆ

ಸುಶ್ಮಿತಾ ಸೇನ್ ಮತ್ತು ರೋಹ್ಮಾನ್ ಶಾನ್ ಇಬ್ಬರು ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲು ಪ್ಲಾನ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೆ ಈ ಜೋಡಿ ಮದುವೆಗೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಒಟ್ಟಿಗೆ ಸುತ್ತಾಡಿಕೊಂಡಿದ್ದ ಈ ಜೋಡಿ ತಮ್ಮ ಸ್ನೇಹವನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಲು ನಿರ್ಧಾರಿಸಿದ್ದಾರೆ. ಈ ವರ್ಷದ ಕೊನೆ ಅಂದ್ರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಹಸೆ ಮಣೆ ಏರುವ ಸಾಧ್ಯತೆ ಇದೆ.

ಚರ್ಚೆಯಾಗುತ್ತಿದೆ ವಯಸ್ಸಿನ ಅಂತರ

ಚರ್ಚೆಯಾಗುತ್ತಿದೆ ವಯಸ್ಸಿನ ಅಂತರ

ಸುಶ್ಮಿತಾ ಸೇನ್ ಅವರಿಗೆ 42 ವರ್ಷ. ಆದ್ರೆ ರೋಹ್ಮಾನ್ ಇನ್ನು 28 ವರ್ಷದ ಯುವಕ. ಇಬ್ಬರ ನಡುವೆ ಬರೋಬ್ಬರಿ 14 ವರ್ಷಗಳ ಅಂತರವಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇತ್ತೀಚಿಗಷ್ಟೆ 35 ವರ್ಷದ ಪ್ರಿಯಾಂಕಾ ಚೋಪ್ರ 25 ವರ್ಷದ ನಿಕ್ ಜೋನಸ್ ಜೊತೆ ಮದುವೆಯಾದಾಗಲು ಇಬ್ಬರ ವಯಸ್ಸಿನ ಅಂತರ ಜಾರಾಗಿ ಚರ್ಚೆಯಾಗಿತ್ತು.

ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ

ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ

ಈಗಾಲೆ ಸುಶ್ಮಿತಾ ಮತ್ತು ರೋಹ್ಮಾನ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುತ್ತಿದೆ. ನಿಶ್ಚಿತಾರ್ಥದ ಉಂಗುರ ಧರಿಸಿರುವ ಸುಶ್ಮಿತಾ ಇತ್ತೀಚಿಗಷ್ಟೆ ಇನ್ಸ್ಟಾಗ್ರಾಮ್ ನಲ್ಲಿ ರೋಹ್ಮಾನ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಸುಶ್ಮಿತಾ ಕೈ ಬೆರಳಿನಲ್ಲಿ ನೀಲಿ ಸ್ಟೋನ್ ಮತ್ತು ವಜ್ರದ ಹರಳಿರುವ ಉಂಗುರ ಧರಿಸಿದ್ದಾರೆ. ಇದನ್ನ ನೋಡಿದ ನೆಟ್ಟಿಗರು ಮಾಜಿ ವಿಶ್ವಸುಂದರಿ ರೋಹ್ಮಾನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಭಾರಿ ಚರ್ಚೆ

ಯಾರು ಈ ರೋಹ್ಮಾನ್?

ಯಾರು ಈ ರೋಹ್ಮಾನ್?

ಅಂದ್ಹಾಗೆ, ರೋಹ್ಮಾನ್ ಶಾಲ್ ಖ್ಯಾತ ಮಾಡೆಲ್. ಈ ಹ್ಯಾಂಡ್ ಸಮ್ ಹುಡುಗ ಸುಶ್ಮಿತಾಗೆ ಜಿಮ್ ನಲ್ಲಿ ಪರಿಚಯವಾಗಿದ್ದಾರಂತೆ. 2017ರಲ್ಲಿ ಸುಶ್ಮಿತಾ ಅವರಿಗೆ ಪರಿಚಿತರಾದ ರೋಹ್ಮಾನ್, ಈ ಗೆಳೆತನ ಪ್ರೀತಿಗೆ ತಿರುಗಿ ಈಗ ಮದುವೆ ವರೆಗೂ ಬಂದಿದೆ ಎಂದು ಹೇಳಲಾಗುತ್ತಿದೆ.

ಅಮ್ಮನ ಮದುವೆಗೆ ಮಕ್ಕಳ ಗ್ರೀನ್ ಸಿಗ್ನಲ್

ಅಮ್ಮನ ಮದುವೆಗೆ ಮಕ್ಕಳ ಗ್ರೀನ್ ಸಿಗ್ನಲ್

ಇನ್ನು ಮದುವೆಯಾಗದ ಸುಶ್ಮಿತಾ ಸೇನ್ ಇಬ್ಬರು ಮಕ್ಕಳನ್ನು ದತ್ತು ಪಡೆದು ಖುಷಿಯಾಗಿದ್ದಾರೆ. 2000ರಲ್ಲಿ ಮೊದಲ ಮಗು ರೆನೀಯನ್ನು ದತ್ತು ಪಡೆದ ಸುಶ್ಮಿತಾ ಆ ನಂತರ ಎರಡನೆ ಮಗು ಅಲಿಶಾ ಅವರನ್ನು ದತ್ತು ಪಡೆದಿದ್ದಾರೆ. ಈ ಇಬ್ಬರು ಮಕ್ಕಳ ಜೊತೆಯೂ ರೋಹ್ಮಾನ್ ಒಡನಾಟ ತುಂಬಾ ಚೆನ್ನಾಗಿದೆಯಂತೆ. ಅಲ್ಲದೆ ಇಬ್ಬರು ಮಕ್ಕಳು ಸಹ ಅಮ್ಮನ ಮದುವೆ ವಿಚಾರ ಕೇಳಿ ಸಂತಸಗೊಂಡಿದ್ದಾರಂತೆ.

More from Filmibeat

English summary
Bollywood Actress Sushmita Sen and her boyfriend Rohman Shawl to tie the knot this year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X