ದತ್ತು ಮಗಳ 'ಆ' ಮಾತು ಕೇಳಿ ಭಾವುಕರಾದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್
Recommended Video
ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 44ನೇ ವಸಂತಕ್ಕೆ ಕಾಲಿಟ್ಟ ಸುಶ್ಮಿತಾ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೆ ಸಂದರ್ಭದಲ್ಲಿ ಸುಶ್ಮಿತಾ ದತ್ತು ಮಗಳ ಆ ಮಾತು ಕೇಳಿ ಕಣ್ಣೀರಾಕಿದ್ದಾರೆ.
ನಟಿ ಸುಶ್ಮಿತಾ ಸೇನ್ ರೀನಿ ಮತ್ತು ಅಲಿಶಾ ಎಂಬ ಎರಡು ಹಣ್ಣುಮಕ್ಕಳನ್ನು ದತ್ತು ಪಡೆದಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೆ. 10 ವರ್ಷದ ಮಗಳು ಅಲಿಶಾ ತಾಯಿಯ ಕುರಿತು ಆಡಿರುವ ಮಾತುಗಳನ್ನು ಕೇಳಿ ಸುಶ್ಮಿತಾ ಭಾವುಕರಾಗಿದ್ದಾರೆ. ಈ ಬಗ್ಗೆ ಸ್ವತಹ ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಮಗಳು ಅಲಿಶಾ ದತ್ತು ಮಕ್ಕಳ ಬಗ್ಗೆ ಇತ್ತೀಚಿಗೆ ಪ್ರಬಂಧವೊಂದನ್ನು ಬರೆದಿದ್ದಾರೆ. ಈ ಪ್ರಬಂಧದಲ್ಲಿ "ಅಮ್ಮ ನಮ್ಮನ್ನು ದತ್ತು ಪಡೆದು ಮೂಲಕ ನೀನು ಎರಡು ಮಕ್ಕಳಿಗೆ ಜನ್ಮ ನೀಡಿರುವೆ" ಎನ್ನುವ ಭಾವುಕ ಸಾಲುಗಳನ್ನು ಬರೆದಿದ್ದಾರೆ. ಮಗಳ ಈ ಸಾಲುಗಳನ್ನು ನೋಡಿ ಸುಶ್ಮಿತಾಗೆ ದುಃಖವಾಗಿದೆಯಂತೆ. ಮಗಳೆ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿಲ್ಲ ನಿಜ. ಆದರೆ ನೀನು ನನ್ನ ಹೃದಯದಲ್ಲಿ ಜನಿಸಿರುವೆ" ಎಂದು ಹೇಳಿ ಮುದ್ದಿನ ದತ್ತು ಮಗಳಿಗೆ ಪ್ರೀತಿ ಹರಿಸಿದ್ದಾರೆ.

ಇನ್ನು ಮದುವೆಯಾಗದೆ ಸಿಂಗಲ್ ಆಗಿರುವ ಸುಶ್ಮಿತಾ ಸದ್ಯ ಗೆಳೆಯ ರೋಷ್ಮಾನ್ ಶಾನ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ಎರಡು ವರ್ಷದಿಂದ ಮಾಡೆಲ್ ರೋಹ್ಮಾನ್ ಶಾಲ್ ಜೊತೆ ಡೇಟಿಂಗ್ ನಲ್ಲಿರುವ ಸುಶ್ಮಿತಾ ಈಗ ಅದೆ ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ. ಆದರೆ ಈ ಬಗ್ಗೆ ಸುಶ್ಮಿತಾ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.


Click it and Unblock the Notifications











