ಮೋದಿಯ ಹೊಸ ಟಾಸ್ಕ್: ಅಪಹಾಸ್ಯ ಮಾಡಿದ ಬಾಲಿವುಡ್ ನಟಿಗೆ ನೆಟ್ಟಿಗರ ತರಾಟೆ
ಇಡೀ ವಿಶ್ವವೆ ಕಿಲ್ಲರ್ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದೆ. ಕೊರೊನಾ ವೈರಸ್ ಮಟ್ಟಹಾಕಲೇ ಬೇಕೆಂದು ಭಾರತ ಕೂಡ ಪಣ ತೊಟ್ಟಿದೆ. ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಇತ್ತೀಚಿಗೆ ಜನತಾ ಕರ್ಫ್ಯೂಗೆ ಕರೆ ನೀಡಿ ಚಪ್ಪಾಳೆ ಹೊಡೆಯುವಂತೆ ಮನವಿ ಮಾಡಿಕೊಂಡಿದ್ದರು. ದೇಶದ ಜನತೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು.
ಈ ಬಾರಿ ಮೋದಿ ಹೊಸ ಟಾಸ್ಕ್ ನೀಡಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಅಂಧಾಕಾರವನ್ನು ತೊಲಗಿಸಿ ಬೆಳಕನ್ನು ತೋರಿಸಿ ಎಂದು ಮೋದಿ ಕರೆಕೊಟ್ಟಿದ್ದಾರೆ. ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಮನೆಯ ಎಲ್ಲಾ ದೀಪಗಳನ್ನು ಆರಿಸಿ ಮನೆ ಬಾಗಿಲಿನ ಬಳಿ ಅಥವಾ ಬಾಲ್ಕನಿಯಲ್ಲಿ ಮೊಂಬ್ಬತ್ತಿ, ದೀಪ, ಟಾರ್ಚ್, ಮೊಬೈಲ್ ಫ್ಲ್ಯಾಷ್ ಅನ್ನು ಬೆಳಗಿಸಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ. ಮೋದಿಯ ಹೊಸ ಟಾಸ್ಕ್ ಗೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ರೆ, ಬಾಲಿವುಡ್ ನಟಿ ತಾಪ್ಸಿ ಪನ್ನು ಅಪಹಾಸ್ಯ ಮಾಡಿದ್ದಾರೆ. ಮುಂದೆ ಓದಿ..
ದೀಪ ಬೆಳಗುವ ಟಾಸ್ಕ್ ಅಪಹಾಸ್ಯ ಮಾಡಿದ ತಾಪ್ಸಿ
ಮೋದಿಯ ಹೊಸ ಟಾಸ್ಕ್ ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಆದರೆ ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ದೀಪ ಬೆಳಗುವ ಟಾಸ್ಕ್ ಅನ್ನು ಅಪಹಾಸ್ಯ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ತಾಪ್ಸಿ "ಹೊಸ ಟಾಸ್ಕ್ ಇಲ್ಲಿದೆ" ಎಂದು ಹೆಚ್ಚು ಸಂತೋಷವಾಗಿರುವ ಚಿನ್ಹೆಯನ್ನು ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರ ತರಾಟೆ
ತಾಪ್ಸಿ ಪೋಸ್ಟ್ ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. "ಇಡೀ ದೇಶವೆ ದೀಪ ಬಳಗುತ್ತೆ. ನೀವು ಬೆಳಗಿಲ್ಲ ಅಂದಾಕ್ಷಣ ಏನು ಆಗುವುದಿಲ್ಲ". ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು "ನಿಮ್ಮ ಸಿನಿಮಾ ಕಥೆ ಇಲ್ಲಿಗೆ ಮುಗಿಯುತು" ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮೋದಿ ವಿರೋಧಿಗಳು ಎಂದು ಕರೆಯುತ್ತಿದ್ದಾರೆ.

ತಾಪ್ಸಿ ಪರನಿಂತ ಕೆಲವರು
ಅನೇಕರ ವಿರೋಧದ ನಡುವೆಯು ಕೆಲವರು ತಾಪ್ಸಿಗೆ ಬೆಂಬಲ ನೀಡಿ ಮಾತನಾಡುತ್ತಿದ್ದಾರೆ. ಸರಿಯಾದ ಉತ್ತರ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಾಪ್ಸಿ ಅಭಿನಯದ ಜೊತೆಗೆ ನೇರ ನುಡಿಯ ಮೂಲಕವೆ ಅಭಿಮಾನಿಗಳ ಮನಗೆದ್ದಿದ್ದಾರೆ. ತನಗನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ನಟಿ ತಾಪ್ಸಿ. ಸದ್ಯ ಮೋದಿಯ ದೀಪ ಬೆಳಗುವ ಟಾಸ್ಕ್ ಅನ್ನು ವಿರೋಧಿಸಿದ್ದಾರೆ.

ತಾಪ್ಸಿ ಬಳಿ ಇರುವ ಸಿನಿಮಾಗಳು
ಉತ್ತಮ ಸಿನಿಮಾಗಳ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿರುವ ತಾಪ್ಸಿ ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚಿಗೆ ತಪ್ಪಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಬಾಲಿವುಡ್ ನ ಹಸೀನ್ ದಿಲ್ ರುಬಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಭಾರತದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಬಯೋಪಿಕ್ ನಲ್ಲಯೂ ಬಣ್ಣಹಚ್ಚಿದ್ದಾರೆ.


Click it and Unblock the Notifications











