"ಮದುವೆ ಆಗದೇ ಗರ್ಭ ಧರಿಸಬಹುದು": ಟಬು ಬೋಲ್ಡ್‌ ಕಾಮೆಂಟ್ಸ್

ಹಿರಿಯ ನಟಿ ಟಬು ವಯಸ್ಸು ಐವತ್ತಾದರೂ ಮದುವೆಯಾಗಿಲ್ಲ. ತನ್ನದೇ ವಿಭಿನ್ನ ಸ್ಟೈಲ್ ಮತ್ತು ಮೈಮಾಟದಿಂದ ಈ ಹೈದರಾಬಾದ್‌ ಚೆಲುವೆ ಹೊಸ ನಟಿಯರಿಗೂ ಟಫ್ ಕಾಂಪಿಟೇಷನ್ ಕೊಡ್ತಿದ್ದಾರೆ. ಸೆಕೆಂಡ್ ಇನ್ನಿಂಗ್ ಶುರು ಮಾಡಿರುವ ಚೆಲುವೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇದೆಲ್ಲದರ ನಡುವೆ ಮದುವೆ ಹಾಗೂ ಮಕ್ಕಳ ಬಗ್ಗೆ ಟಬು ಬೋಲ್ಡ್ ಕಾಮೆಂಟ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಎದುರಾದ ಪ್ರಶ್ನೆಗೆ ಟಬು ಖಡಕ್ ಉತ್ತರ ಕೊಟ್ಟಿದ್ದಾರೆ. "ಇಷ್ಟು ವಯಸ್ಸಾದರೂ ನೀವು ಮದುವೆ ಮಾಡಿಕೊಂಡಿಲ್ಲ. ನಿಮಗೆ ಅಮ್ಮ ಎಂದು ಕರೆಸಿಕೊಳ್ಳುವ ಆಸೆ ಇಲ್ವಾ?" ಎನ್ನುವ ಪ್ರಶ್ನೆಗೆ "ನನಗೂ ತಾಯಿ ಆಗುವ ಆಸೆ ಇದೆ. ಇದಕ್ಕಾಗಿ ಮದುವೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.

ಮದುವೆ ಆಗದೆಯೇ ಗರ್ಭ ಧರಿಸಬಹುದು. ಅದಕ್ಕೆ ಸಾರೊಗಸಿ ಪದ್ಧತಿ ಮೂಲಕ ತಾಯಿಯಾಗುವ ಅವಕಾಶ ಇದೆ. ಮದುವೆ ಆಗದಿದ್ದರೆ ಸತ್ತು ಹೋಗುವುದಿಲ್ಲ. ತಾಯಿ ಆಗದಿದ್ದರೂ ಸಾಯುವುದಿಲ್ಲ. ಸದ್ಯ ಸಿನಿ ಕರಿಯರ್ ಹಾಗೂ ನಟನೆಯನ್ನು ಎಂಜಾಯ್ ಮಾಡ್ತಿದ್ದೀನಿ. ಮದುವೆಗೂ ಮಕ್ಕಳಿಗೂ ವಯಸ್ಸಿನ ಜೊತೆ ಸಂಬಂಧ ಇಲ್ಲ" ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.

Bollywood Actress Tabu Opens Up About Not Getting Married

ನನ್ನ ಮನಸ್ಸಿಗೆ ಇಷ್ಟವಾಗುವವರು ಇನ್ನು ಸಿಕ್ಕಿಲ್ಲ. ಮಹಿಳೆಯನ್ನು ಎಲ್ಲಾ ವಿಧದಲ್ಲೂ ಗೌರವಿಸುವ ವ್ಯಕ್ತಿ ಸಿಕ್ಕಿದರೆ ಮದುವೆ ಆಗುತ್ತೀನಿ ಎಂದು ಹೇಳಿದ್ದಾರೆ. ಟಬು ಮದುವೆ ಆಗದೇ ಇದ್ದರೂ ಸಾಕಷ್ಟು ನಟರ ಜೊತೆ ಈಕೆಯ ಹೆಸರು ತಳುಕು ಹಾಕಿಕೊಂಡಿತ್ತು. ಟಾಲಿವುಡ್‌, ಬಾಲಿವುಡ್‌ನಲ್ಲಿ ಸ್ಟಾರ್‌ ಹೀರೊಗಳ ಜೊತೆ ನಟಿಸಿ ಗೆದ್ದ ಟಬು ವಯಸ್ಸು 40 ದಾಟಿದರೂ ಗ್ಲಾಮರಸ್‌ ರೋಲ್‌ಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಸದ್ಯ 'ದೃಶ್ಯಂ- 2' ಹಿಂದಿ ರೀಮೆಕ್‌ನಲ್ಲಿ ನಟಿಸ್ತಿದ್ದಾರೆ. 'ಕುಫಿಯಾ' ಅನ್ನುವ ಮತ್ತೊಂದು ಸಿನಿಮಾ ನೇರವಾಗಿ ಓಟಿಟಿಗೆ ಬರ್ತಿದೆ. ಮತ್ತೆರಡು ಸಿನಿಮಾಗಳು ಈಕೆಯ ಕೈಯಲ್ಲಿದೆ. ಸದ್ಯ ಮದುವೆ ಹಾಗೂ ಮಕ್ಕಳ ಬಗ್ಗೆ ಟಬು ಮಾಡಿರುವ ಕಾಮೆಂಟ್ಸ್ ವೈರಲ್ ಆಗಿದೆ.

Bollywood Actress Tabu Opens Up About Not Getting Married

ಟಬು ಹಾಗೂ ನಾಗಾರ್ಜುನ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನುವ ಸುದ್ದಿ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಬ್ಬರು ನಟಿಸಿದ್ದು 2ನೇ ಸಿನಿಮಾ. 'ನಿನ್ನೆ ಪೆಳ್ಳಾಡತಾ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದಕ್ಕೆ ಕಾರಣ ಇವರಿಬ್ಬರ ಕೆಮೆಸ್ಟ್ರಿ. ಇದೇ ಕಾರಣಕ್ಕೆ ನಿಜ ಜೀವನದಲ್ಲೂ ಇಬ್ಬರ ನಡುವೆ ಸಮ್‌ಥಿಮ್ ಸಮ್‌ಥಿಂಗ್ ನಡೀತಿದೆ ಅನ್ನುವ ಗುಸುಗುಸು ಕೇಳಿ ಬರ್ತಾನೆ ಇರುತ್ತೆ. ಈ ಬಗ್ಗೆ ಸಾಕಷ್ಟು ಬಾರಿ ನಾಗಾರ್ಜುನ ಮಾತನಾಡಿದ್ದಾರೆ. ನಾವಿಬ್ಬರು ಆತ್ಮೀಯ ಸ್ನೇಹತರು. ಅದನ್ನು ಬಿಟ್ಟು ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ಹೇಳಿದ್ದಾರೆ. ಟಬು ಹೆಸರು ಕೇಳಿದ ತಕ್ಷಣ ನನ್ನ ಮುಖ ಅರಳುತ್ತದೆ. ಅದನ್ನು ನೋಡಿ ನೀವು ಏನೋ ಅಂದುಕೊಂಡರೆ ಅದು ನಿಮ್ಮ ಕಲ್ಪನೆ ಮಾತ್ರ. ನನ್ನ ಪ್ರಕಾರ ಆಕೆ ಸುಂದರವಾದ ಸ್ನೇಹಿತೆ ಅಷ್ಟೇ ಎಂದು ಇತ್ತೀಚೆಗಾ ನಾಗಾರ್ಜುನ ಹೇಳಿದ್ದರು.

Recommended Video

Coffee Nadu Chandu | ಬಿಟ್ಟಿ ಸಲಹೆ ಕೊಟ್ಟವ್ರಿಗೆ ಚಂದು ಖಡಕ್ ಉತ್ತರ | Filmibeat Kannada

More from Filmibeat

English summary
Bollywood Actress Tabu Opens Up About Not Getting Married. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X