ಪ್ಲೀಸ್ ಇವತ್ತು ಬೇಡ್ವೇ ಬೇಡ ; ಎಣ್ಣೆ ಏಟಿನಲ್ಲಿ ಉರ್ಫಿ ಜಾವೇದ್ ಮಾಡಿದ್ದೇನು...?
ಸೆಲೆಬ್ರೆಟಿಗಳು ಏನೋ ಮಾಡಲು ಹೋಗಿ ಮತ್ತೇನೋ ಅವಘಡಗಳಾಗಿ ಪಬ್ಲಿಕ್ಕಿನಲ್ಲಿ ಮಾನ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಇಂತಹ ವಿಚಾರಕ್ಕೆ ಕೆಲವರು ನಾಚಿಕೊಂಡರೆ, ಮತ್ತೂ ಕೆಲವರು ಕೋಪಗೊಂಡು ಆ ಸ್ಥಳದಲ್ಲಿ ನಿಲ್ಲದೇ ನಾಟಕೀಯವಾಗಿ ಪರಾರಿಯಾಗಿರುತ್ತಾರೆ.
ಆದರೆ ಉರ್ಫಿ ಜಾವೇದ್ ಮಾತ್ರ ಇದಕ್ಕೆ ತದ್ವಿರುದ್ಧ. ಯಾರೇನೇ ಅಂದುಕೊಳ್ಳಲಿ.. ನಾನು ಇರುವುದೇ ಹೀಗೆ ಎಂದು ಚೋಟುದ್ದ ಡ್ರೆಸ್‌ಗಳಲ್ಲಿ .. ಚಿತ್ರ ವಿಚಿತ್ರ ಕಾಸ್ಟೂಮ್‌ಗಳಲ್ಲಿ.. ಕ್ಯಾಮರಾದವರಿಗೆ ದರ್ಶನ ಕೊಡುವುದನ್ನೇ ಫುಲ್ ಟೈಮ್ ಕೆಲಸವನ್ನಾಗಿಸಿಕೊಂಡ ಉರ್ಫಿಗೆ ಬಹುಶ: ಕ್ಯಾಮರಾ ಗುಂಪು ಒಂದು ದಿನವೂ ತನ್ನನ್ನು ಹಿಂಬಾಲಿಸದೇ ಇದ್ದರೆ ನಿದ್ದೆ ಬರುವುದಿಲ್ಲವೇನೋ. ಇಂಥ ಉರ್ಫಿ ಜಾವೇದ್ ಇದೀಗ ತಮ್ಮ ಪ್ರೀತಿ ಪಾತ್ರರಾದ ಕ್ಯಾಮರಾ ಮ್ಯಾನ್‌ಗಳಲ್ಲಿ ಮನವಿಯೊಂದನ್ನು ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಹೌದು. ಸಾಮಾನ್ಯವಾಗಿ ವಾರಾಂತ್ಯ ಬಂದರೆ ಸಾಕು, ಜನ ಸಾಮಾನ್ಯರೇ.. ಪಬ್ಬು-ಪಾರ್ಟಿ ಅಂತೆಲ್ಲ ಮಜಾ ಮಾಡುತ್ತಾರೆ. ತಮ್ಮ ಪ್ರೀತಿ ಪಾತ್ರರ ಜೊತೆ ಕಾಲ ಕಳಿಯುತ್ತಾರೆ. ಇನ್ನೂ.. ಸೆಲೆಬ್ರೀಟಿಗಳ ಕಥೆ ಕೇಳ್ಬೇಕಾ. ಮಬ್ಬುಗತ್ತಲು ಅನೇಕರ ಬದುಕಿನ ಬಹು ಮುಖ್ಯವಾಗಿರುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ .. ಉರ್ಫಿ ಜಾವೇದ್ ಮುಂಬೈನ ಪಬ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ಚೂರು ವಾಲಾಡುತ್ತಾ ಆಚೆ ಬಂದಿದ್ದಾರೆ.
ಆದರೆ, ತನಗೋಸ್ಕರ ... ಪಬ್ ಆಚೆ ತಮ್ಮ ಪ್ರೀತಿಯ ಕ್ಯಾಮರಾದವರು ಕಾಯುತ್ತಿದ್ದಾರೆ ಎನ್ನುವ ವಿಚಾರ ಉರ್ಫಿಗೆ ಗೊತ್ತಿತ್ತೋ ಗೊತ್ತಿಲ್ವೋ ಗೊತ್ತಿಲ್ಲ. ಆದರೆ.. ಉರ್ಫಿ ಆಚೆ ಬರುತ್ತಿದ್ದಂತೆ ಅಲ್ಲಿದ್ದ ಎಲ್ಲರು ನಾ ಮುಂದು.. ತಾ ಮುಂದು.. ಎಂದು ಫೋಟೋ ತೆಗೆಯಲು ಪೈಪೋಟಿಗಿಳಿದಿದ್ದಾರೆ. ಫೋಟೋಗೆ ಪೋಸ್ ನೀಡಲು ಸೂಚಿಸಿದ್ದಾರೆ. ಬ್ಯಾಕ್‌ಲೆಸ್ ಗೌನ್ ಹಾಕಿಕೊಂಡಿದ್ದೀರಾ, ಅದಕ್ಕಾದರೂ ಒಮ್ಮೆ ಬಾರಿ ತಿರುಗಿ ಫೋಸ್ ನೀಡಿ ಎಂದು ಗೋಗರೆದಿದ್ದಾರೆ.

ಪಾಪರಾಜಿಗಳ ಈ ಆತುರ-ಕಾತುರವನ್ನು ಗಮನಿಸಿದ ಉರ್ಫಿ ಆ ನಂತರ , ಇವತ್ತು ಬೇಡ ಎಂಬ ಮನವಿಯನ್ನೂ ಮಾಡಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿರುವ ಉರ್ಫಿ ನಾನು ತುಂಬಾ ಕುಡಿದಿದ್ದೇನೆ. ಪಾರ್ಟಿ ಮಾಡಿ ಹೊರಬರುತ್ತಿದ್ದೇನೆ. ಹೀಗಾಗಿ ಇವತ್ತು ಬೇಡ, ಇಲ್ಲಿಂದ ಹೊರಡಲು ಅವಕಾಶ ಮಾಡಿಕೊಡಿ ಎಂದು ಕೂಡ ಹೇಳಿದ್ದಾರೆ. ಆ ನಂತರ ಉರ್ಫಿಯ ಈ ಮಾತುಗಳಿಗೆ ಮನ್ನಣೆಯನ್ನು ನೀಡುವ ಕ್ಯಾಮರಾದ ಗುಂಪು ಉರ್ಫಿಗೆ ಅಲ್ಲಿಂದ ತೆರಳಲು ಅನುವು ಮಾಡಿಕೊಟ್ಟಿದೆ. ಆದರೆ ಹೊರಡುವ ಮುನ್ನ ಒಂದು ಬಾರಿ ತಿರುಗಿ ಎಂದು ಮತ್ತೆ ಸೂಚಿಸಿದೆ. ಹೀಗಾಗಿ ಉರ್ಫಿ ಕೊನೆಗೆ ತಮ್ಮ ಬ್ಯಾಕ್‌ಲೆಸ್ ಡ್ರೆಸ್ ಸೌಂದರ್ಯ ತೋರಿಸಿ ಹೊರಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೆಲವರು ಉರ್ಫಿ ಜಾವೇದ್ ಅವರಿಗೆ ಯಾಕಿಷ್ಟು ಸ್ಕೋಪ್ ಕೊಡ್ತೀರಾ ಎಂದರೆ, ಇನ್ನೂ ಕೆಲವರು ತಾರೆಯರಿಗೂ ವ್ಯೆಯಕ್ತಿಕ ಬದುಕು ಇರುತ್ತೆ ಅವರ ಖಾಸಗಿ ಬದುಕಿಗೆ ಗೌರವ ಕೊಡಿ ಎಂದಿದ್ದಾರೆ. ಇನ್ನೂ ಕೆಲವರು ಎಣ್ಣೆ ಹೊಡೆದು ಕದ್ದು ಮುಚ್ಚಿ ಓಡಾಡುವ ಸೆಲೆಬ್ರೀಟಿಗಳ ನಡುವೆ, ನಾನು ಕುಡಿದಿದೀನಿ ಎಂದು ಹೇಳಲು ಧಮ್ ಬೇಕು ಎಂದಿದ್ದಾರೆ.


Click it and Unblock the Notifications











