ಎದೆ ಮೇಲೆ ಫ್ಯಾನ್ ಹಾಕಿಕೊಂಡು ಸಖತ್ ಕೂಲ್ ಎಂದ ಉರ್ಫಿ ಜಾವೇದ್
ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಳೆಗಾಲ ಶುರುವಾಗಿ ಭೂಮಿ ತಂಪಾಗುವರೆಗೂ ಸೂರ್ಯನ ಶಾಖ ಕಮ್ಮಿ ಆಗಿವ ಲಕ್ಷಣಗಳು ಕಾಣುತ್ತಿಲ್ಲ. ಬಿಸಿಲ ಝಳದಿಂದ ದೇಹವನ್ನು ತಂಪಾಗಿಸಿಕೊಳ್ಳಲು ಜನ ನಾನಾ ಕಸರತ್ತು ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಉರ್ಫಿ ಜಾವೇದ್ ಎದೆಯ ಮೇಲೆ ಎರಡು ಸಣ್ಣ ಫ್ಯಾನ್‌ಗಳಿರುವಂತಹ ಡ್ರೆಸ್ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
ಚಿತ್ರ ವಿಚಿತ್ರ ಕಾಸ್ಟ್ಯೂಮ್ಸ್ ಧರಿಸಿ ನಟಿ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಆಕೆ ಡಿಸೈನ್ ಮಾಡಿಸುವ ಡ್ರೆಸ್‌ಗಳು ನೋಡಿದವರು ಈ ಐಡಿಯಾ ಎಲ್ಲಿಂದ ಬರುತ್ತೋ ಗೊತ್ತಿಲ್ಲ ಎನ್ನುತ್ತಿರುತ್ತಾರೆ. ಆಕೆಯ ನಾನಾ ಅವತಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಫ್ಯಾನ್ ಡ್ರೆಸ್ ಸರದಿ. ಈ ಡ್ರೆಸ್ ಧರಿಸಿ ಮುಂಬೈ ಬೀದಿಗಳಲ್ಲಿ ಸುತ್ತಾಡಿ ಹಂಗಾಮಾ ಕ್ರಿಯೇಟ್ ಮಾಡಿದ್ದಾರೆ.

ಶಾರ್ಟ್ ಡ್ರೆಸ್‌ಗಳಲ್ಲಿ ಸೊಂಟದ ಅಂದವನ್ನು ತೋರಿಸುತ್ತಾ ಎದೆಮೇಲೆ 2 ಫ್ಯಾನ್‌ಗಳನ್ನು ಹಾಕಿಕೊಂಡು ಬ್ಯಾಟರಿ ಕನೆಕ್ಷನ್ ಕೊಟ್ಟು ಫ್ಯಾನ್ಸ್ ತಿರುಗಿಸುತ್ತಿದ್ದಾರೆ. ಆಕೆಯ ಹುಚ್ಚಾಟಕ್ಕೆ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ. ಸದ್ಯ ಈ ಫ್ಯಾನ್ ಡ್ರೆಸ್ ವಿಡಿಯೋಗಳು ವೈರಲ್ ಆಗಿವೆ. ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಮೊದಲಿಗೆ ಉರ್ಫಿ ಕೆಲ ಹಿಂದಿ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಗುರ್ತಿಸಿಕೊಂಡರು. ಆ ನಂತರ ಹಿಂದಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಮನೆಯಲ್ಲಿ ಕೆಲವೇ ದಿನಗಳು ಇದ್ದರೂ ಒಳ್ಳೆ ಖ್ಯಾತಿ ಗಳಿಸಿತ್ತು. ಖ್ಯಾತಿಯೊಂದಿಗೆ ಹೊರಬಂದ ಉರ್ಫಿ, ಬೋಲ್ಡ್ ಫೋಟೋಶೂಟ್‌ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಲವೊಮ್ಮೆ ಆಕೆಯ ಬೋಲ್ಡ್‌ನೆಸ್ ಈ ರೀತಿ ಅತಿರೇಕಕ್ಕೆ ಹೋಗುತ್ತದೆ.
ಸದ್ಯ ಉರ್ಫಿ ಜಾವೇದ್ ಸಮ್ಮರ್ ಸ್ಪೆಷಲ್ ಡ್ರೆಸ್ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಉರ್ಫಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಬ್ಯಾನ್ ಮಾಡಬೇಕು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ಕ್ರಿಯೇಟಿವ್ ಆಗಿ ಯೋಚಿಸುವ ಉರ್ಫಿ ದೊಡ್ಡ ಫ್ಯಾನ್ಸ್ ಡಿಸೈನರ್‌ಗಳ ಜೊತೆ ಕೆಲಸ ಮಾಡಬೇಕು" ಎಂದು ಮತ್ತೊಬ್ಬರು ಬರೆದಿದ್ದಾರೆ.
0
ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಉರ್ಫಿ ಜಾವೇದ್ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. 'ಬಡೇ ಭಯ್ಯಾ ಕಿ ದುಲ್ಹನಿಯಾ' ಎನ್ನುವ ಧಾರಾವಾಹಿ ಮೂಲಕ ಆಕೆ ಕಿರುತೆರೆಗೆ ಎಂಟ್ರಿ ಕೊಟ್ಟರು. 'ಚಂದ್ರ ನಂದಿನಿ', 'ಮೇರಿ ದುರ್ಗಾ', 'ಸಾತ್ ಫೆರೋ ಕಿ ಹೇರಾ ಫೆರೀ', 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು.
ಹಿಂದಿ ಬಿಗ್‌ಬಾಸ್ ಓಟಿಟಿ ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಉರ್ಫಿ ಭಾಗವಹಿಸಿದ್ದರು. ಕೆಲವೇ ದಿನಗಳಲ್ಲಿ ಮನೆಯಿಂದ ಹೊರಬಂದರು. ಆದರೆ ಇದಷ್ಟು ದಿನ ಬಹಳ ಸುದ್ದಿ ಆಗಿದ್ದರು. ಕೊನೆ 13ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.


Click it and Unblock the Notifications











