'ಐರಾವತ' ಸುಂದರಿಯ ಈ ಬ್ಯಾಗ್‌ನ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ
ಸಿನಿಮಾ ಸೆಲೆಬ್ರಿಟಿಗಳು ತಮ್ಮ ಆಕರ್ಷಕ ಉಡುಗೆ-ತೊಡಿಗೆಗಳ ಮೂಲಕ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಬಟ್ಟೆ, ಬ್ಯಾಗ್, ಹೇರ್ ಸ್ಟೈಲ್ ಹೇಗೆ ಪ್ರತಿಯೊಂದು ವಿಚಾರದಲ್ಲೂ ಅಭಿಮಾನಿಗಳನ್ನು ಆಕರ್ಷಿಸುತ್ತಿರುತ್ತಾರೆ. ಫ್ಯಾಷನ್‌ಗಾಗಿಯೇ ಲಕ್ಷಾಂತರ ಹಣ ಸುರಿಯುತ್ತಿರುತ್ತಾರೆ.
ಗ್ಲಾಮರಸ್ ಲುಕ್‌ನಿಂದನೇ ಖ್ಯಾತಿಗಳಿಸಿರುವ ನಟಿ ಊರ್ವಶಿ ರೌಟೆಲಾ ಕೈಯಲ್ಲಿ ಹಿಡಿದಿರುವ ಬ್ಯಾಗ್ ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆ ಬ್ಯಾಗ್‌ನಲ್ಲಿ ಅಂತದ್ದು ಏನ್ ಇದೆ ಅಂತೀರಾ? ಬ್ಯಾಗ್‌ನಲ್ಲಿ ಏನ್ ಇದಿಯೋ ಗೊತ್ತಿಲ್ಲ, ಆದರೆ ಆ ಬ್ಯಾಗ್ ಬೆಲೆ ಮಾತ್ರ ಎಲ್ಲರ ತಲೆತಿರುಗುವಂತೆ ಮಾಡಿದೆ.
ಇತ್ತೀಚಿಗೆ ದುಬಾರಿ ಬೆಲೆಯ ಸೀರೆ ಧರಿಸಿ ಅಚ್ಚರಿ ಮೂಡಿಸಿದ್ದ ಊರ್ವಶಿ ಇದೀಗ ಹ್ಯಾಂಡ್ ಬ್ಯಾಗ್ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ನಟಿ ಊರ್ವಶಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಹಸಿರು ಬಣ್ಣದ ಪ್ಯಾಂಟ್ ಮತ್ತು ಗುಲಾಬಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದ ಊರ್ವಶಿ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದರು. ಜೊತೆಗೆ ಹಸಿರು ಬಣ್ಣದ ಹ್ಯಾಂಡ್ ಬ್ಯಾಗ್ ಹಿಡಿದ್ದರು.

ಅಂದಹಾಗೆ ಈ ಬ್ಯಾಗ್‌ನ ಬೆಲೆ ಬರೋಬ್ಬರಿ 10 ಲಕ್ಷ ರೂ. ಶನೆಲ್ ಎಂಬ್ರಾಯ್ಡರಿ ಇರುವ ಹ್ಯಾಂಗ್ ಬ್ಯಾಗ್ ಒಂದು ಕಲಾಕೃತಿಯಾಗಿದೆ. 10 ಬೆಲೆಬಾಳುವ ಬ್ಯಾಗ್ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇತ್ತೀಚಿಗೆ ನಟಿ ಊರ್ವಶಿ ಹಿರಿಯ ನಟ, ರಾಜಕಾರಣಿ ಮನೋಕ್ ಕುಮಾರ್ ಅವರ ಮೊಮ್ಮಗಳು ಮುಸ್ಕಾನ್ ಗೋಸ್ವಾಮಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಊರ್ವಶಿ ಬರೋಬ್ಬರಿ ಅರ್ಧ ಕೋಟಿ ಬೆಲೆಯ ಸೀರೆ ಧರಿಸಿದ್ದರು.
Recommended Video
ಊರ್ವಶಿ ಉಟ್ಟಿದ್ದ ಸೀರೆಯನ್ನು ತಯಾರಿಸಲು ಸುಮಾರು ಆರು ತಿಂಗಳು ಹಿಡಿದಿದೆ. ಅದಕ್ಕೆ ಬಣ್ಣ ತುಂಬಲು 75 ದಿನ. ಅದನ್ನು ನೇಯಲು 25 ದಿನ ತೆಗೆದುಕೊಳ್ಳಲಾಗಿದೆ. 600 ಗ್ರಾಂಗಿಂತಲೂ ಹೆಚ್ಚು ಶುದ್ಧ ರೇಷ್ಮೆ ಬಳಸಲಾಗಿದೆ. ಸಾಮಾನ್ಯವಾಗಿ 27 ಪಟೋಲಾ ಸೀರೆಗೆ ಖರ್ಚು ಮಾಡುವಷ್ಟು ವಸ್ತುಗಳು, ಶ್ರಮವನ್ನು ಈ ಒಂದು ಸೀರೆ ತಯಾರಿಸಲು ಖರ್ಚು ಮಾಡಲಾಗಿದೆ ಎಂದು ಊರ್ವಶಿ ರೌಟೆಲಾರ ಸ್ಟೈಲಿಷ್ ತುಷಾರ್ ಕಪೂರ್ ಹೇಳಿದ್ದರು.


Click it and Unblock the Notifications











